ಪಾತ್ರೆ ಮಾರುವ ನೆಪದಲ್ಲಿ ಮನೆ ಮನೆಗೆ ಬರ್ತಾರೆ ಕಳ್ಳರು
120 ಗ್ರಾಂ ಚಿನ್ನಾಭರಣ ದೋಚಿದ್ದ ಕಳ್ಳರು ಕೊನೆಗೂ ಅಂದರ್
ಕಳ್ಳತನ ಮಾಡಿ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದ ಖದೀಮರು
ಕಲಬುರಗಿ: ಪಾತ್ರೆಗಳನ್ನ ಮಾರುವ ನೆಪದಲ್ಲಿ ಊರೂರು ಅಲೆಯುತ್ತ ಮನೆಗಳಿಗೆ ಕನ್ನ ಹಾಕುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಕಲಬುರಗಿ ಜಿಲ್ಲೆಯ ದೇವಲ ಗಾಣಗಾಪುರ ಠಾಣೆ ಪೊಲೀರು ಹೆಡೆಮುರಿ ಕಟ್ಟಿದ್ದಾರೆ. ಆಳಂದ ತಾಲ್ಲೂಕಿನವರಾದ ರಾಮಜೀ ಕಾಳೆ (50) ಮತ್ತು ಅಪಜಾ ಚವ್ಹಾಣ್ (24) ಬಂಧಿತ ಕುಖ್ಯಾತ ಖದೀಮರು.
ಚಿನ್ನಾಭರಣ ದೋಚಿ ಎಸ್ಕೇಪ್
ಕಳೆದ 2-3-2023 ರಂದು ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರ ಗ್ರಾಮದಲ್ಲಿ ಪಾತ್ರೆಗಳನ್ನ ಮಾರಾಟ ಮಾಡುತ್ತ ಬೀಗ ಹಾಕಿದ ಮನೆಗಳನ್ನ ಟಾರ್ಗೆಟ್ ಮಾಡಿ ಒಂದು ಮನೆಗೆ ರಾತ್ರಿ ಕನ್ನ ಹಾಕಿದ್ದರು. ಮನೆ ಹಿಂಬಾಗಿಲು ಮುರಿದು ಒಳಗೆ ನುಸುಳಿದ ಖದೀಮರಿಬ್ಬರು ಅಲಮಾರ ಮುರಿದು ನೂರಾರು ಗ್ರಾಮ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದರು.
120 ಗ್ರಾಂ ಚಿನ್ನಾಭರಣ
ಪ್ರಕರಣ ದಾಖಲಿಸಿಕೊಂಡ ದೇವಲ ಗಾಣಗಾಪುರ ಠಾಣೆ ಪೊಲೀಸರು, ಪಿಎಸ್ ಐ ರಾಜಶೇಖರ ರಾಠೋಡ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ ಕುಖ್ಯಾತ ಖದೀಮರನ್ನ ಕೊನೆಗೆ ಖೆಡ್ಡಾಗೆ ಕೆಡವಿ ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 7, ಲಕ್ಷ 20 ಸಾವಿರ ಮೌಲ್ಯದ 120 ಗ್ರಾಂ ಚಿನ್ನಾಭರಣ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಳ್ಳರು ಮಹಾರಾಷ್ಟ್ರಕ್ಕೆ ಜೂಟ್
ಆರೋಪಿಗಳ ತೀವ್ರ ವಿಚಾರ ನಡೆಸಿರುವ ಪೊಲೀಸರು, ಕಲಬುರಗಿ ಜಿಲ್ಲೆಯ ಆಳಂದ, ಅಫಜಲಪುರ ಸೇರಿದಂತೆ ಬೇರೆ ಬೇರೆ ಭಾಗಗಳಲ್ಲಿ ಕಳ್ಳತನ ಮಾಡಿರೋ ಕೇಸ್ ಗಳು ಆರೋಪಿಗಳ ಮೇಲಿವೆ. ಕಲಬುರಗಿ ಜಿಲ್ಲೆಯಲ್ಲಿ ಕಳ್ಳತನ ಮಾಡಿ ಪಕ್ಕದ ಮಹಾರಾಷ್ಟ್ರಕ್ಕೆ ಹೋಗಿ ತಲೆಮರೆಸಿಕೊಳ್ಳುತ್ತಿದ್ದರು.
ಪೊಲೀಸರಿಗೆ ತಲೆ ನೋವಾಗಿದ್ದ ಪಾತ್ರೆ ಮಾರುವ ಸೋಗಿನಲ್ಲಿ ಮನೆಗಳನ್ಮ ದೋಚುತ್ತಿದ್ದ ಆರೋಪಿಗಳಿಬ್ಬರನ್ನು ದೇವಲ ಗಾಣಗಾಪುರ ಠಾಣೆ ಪೊಲೀಸರು ಕೊನೆಗೂ ಖದೀಮರನ್ನ ಲಾಕ್ ಮಾಜಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಪ್ರಕರಣ ಕುರಿತಂತೆ ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ