newsfirstkannada.com

ಬಾಕ್ಸಾಫೀಸ್​​ ಉಡೀಸ್​ ಮಾಡಿದ ಪ್ರಭಾಸ್​​.. ಕಲ್ಕಿ ಸಿನಿಮಾದ ಕಲೆಕ್ಷನ್​ ಕೇಳಿದ್ರೆ ಸ್ಟನ್​ ಆಗ್ತೀರಾ!

Share :

Published July 8, 2024 at 10:14pm

    ರಿಲೀಸ್​ ಆದ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್‌ ಪಡೆದಿದ್ದ ಕಲ್ಕಿ 2898 AD

    ಮೇಕಿಂಗ್‌ ಅಂತೂ ಹಾಲಿವುಡ್​ ರೇಂಜ್‌ನಲ್ಲಿದೆ ಎಂದಿದ್ದ ಅಭಿಮಾನಿಗಳು

    600 ಕೋಟಿ ಬಜೆಟ್​ನಲ್ಲಿ ನಿರ್ಮಾಣಗೊಂಡಿದ್ದ ಕಲ್ಕಿ 2898 AD ಸಿನಿಮಾ

ಡಾರ್ಲಿಂಗ್ ಪ್ರಭಾಸ್‌, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಅಭಿನಯದ ಬಹುನೀರಿಕ್ಷಿತ ಕಲ್ಕಿ 2898 AD ಸಿನಿಮಾ ಅದ್ಧೂರಿಯಾಗಿ ರಿಲೀಸ್​ ಕಂಡಿದೆ. ರಿಲೀಸ್​ ಆದ ಮೊದಲ ದಿನವೇ ಕಲ್ಕಿ 2898 AD ಸಿನಿಮಾಗೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿತ್ತು. ಫಸ್ಟ್ ಡೇ ಫಸ್ಟ್ ಶೋ ನೋಡಿದ ಅಭಿಮಾನಿಗಳು ಇದು ಪಕ್ಕಾ ಯೂನಿವರ್ಸಲ್ ಸಿನಿಮಾ. ಮೇಕಿಂಗ್‌ ಅಂತೂ ಹಾಲಿವುಡ್​ ರೇಂಜ್‌ನಲ್ಲಿದೆ ಎಂದು ಹಾಡಿ ಹೊಗಳಿದ್ದರು.

ಇದನ್ನೂ ಓದಿ:  ಕಲ್ಕಿ OTTಗೆ ಬರಲು ವೇದಿಕೆ ರೆಡಿ.. ಬಿಗ್ ಬಜೆಟ್ ಸಿನಿಮಾ ಬರೋದು ಯಾವಾಗ..?

ಕನ್ನಡ, ‌ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಜೂನ್ 27ಕ್ಕೆ ಕಲ್ಕಿ 2898 AD ಸಿನಿಮಾ ಬಿಡುಗಡೆಯಾಗಿತ್ತು. ಟ್ರೈಲರ್, ಟೀಸರ್ ಹಾಗೂ ಬುಜ್ಜಿ ಕಾರಿನಿಂದಲೇ ಸಾಕಷ್ಟು ಸದ್ದು ಮಾಡಿದ್ದ ಕಲ್ಕಿ 2898 AD ಸಿನಿಮಾ ಇದೀಗ 1000 ಕೋಟಿ ಕಡೆ ಮುನ್ನುಗ್ಗುತ್ತಿದೆ. ಸದ್ಯ ವರ್ಲ್ಡ್ ವೈಡ್ 900 ಕೋಟಿ ಬಾಚಿಕೊಂಡಿರುವ ಕಲ್ಕಿ ಜೂನ್ 27ಕ್ಕೆ ತೆರೆ ಕಂಡಿತ್ತು.

11 ದಿನಕ್ಕೆ 900 ಕೋಟಿ ಕಲೆಕ್ಷನ್ ಮಾಡಿರುವ ಕಲ್ಕಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಲೆಕ್ಷನ್​ ಮಾಡಬಹುದು ಎಂದು ಅಂದಾಜಿಸಲಾಗಿದೆ. ಈ ಕಲ್ಕಿ ಸಿನಿಮಾವನ್ನು ಸುಮಾರು 600 ಕೋಟಿ ಬಜೆಟ್​ನಲ್ಲಿ ನಿರ್ಮಿಸಲಾಗಿದೆ. ವೈಜಯಂತಿ ಮೂವೀಸ್​ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ನಾಗ್ ಆಶ್ವಿನ್ ನಿರ್ದೇಶನದ ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಕ್ಸಾಫೀಸ್​​ ಉಡೀಸ್​ ಮಾಡಿದ ಪ್ರಭಾಸ್​​.. ಕಲ್ಕಿ ಸಿನಿಮಾದ ಕಲೆಕ್ಷನ್​ ಕೇಳಿದ್ರೆ ಸ್ಟನ್​ ಆಗ್ತೀರಾ!

https://newsfirstlive.com/wp-content/uploads/2024/06/bujji.jpg

Load More