newsfirstkannada.com

ಕಲ್ಕಿ ಕ್ರೇಜ್ ಹೆಚ್ಚಿಸಲು ಮತ್ತೆ ಬಂತು ಬುಜ್ಜಿ ಕಾರು.. ಪ್ರಭಾಸ್‌ ಫ್ಯಾನ್ಸ್ ಹವಾ ಹೇಗಿದೆ ಗೊತ್ತಾ?

Share :

Published June 27, 2024 at 5:03pm

    ಬಿಡುಗಡೆಗೂ ಮುನ್ನವೇ ಸಖತ್​ ಹೈಪ್ ಕ್ರಿಯೇಟ್‌ ಮಾಡಿದ್ದ ಕಲ್ಕಿ 2898 AD ಚಿತ್ರ

    ಬಹುನಿರೀಕ್ಷಿತ ಕಲ್ಕಿ 2898 AD ಸಿನಿಮಾದಲ್ಲಿ ಮುಖ್ಯ ಆಕರ್ಷಣೆಯೇ ಬುಜ್ಜಿ ಕಾರು

    ಯೂನಿವರ್ಸಲ್ ಸಿನಿಮಾ, ಮೇಕಿಂಗ್‌ ಅಂತೂ ಹಾಲಿವುಡ್​ ರೇಂಜ್‌ ಎಂದ ವೀಕ್ಷಕರು

ಇಂದು ಡಾರ್ಲಿಂಗ್ ಪ್ರಭಾಸ್‌, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಅಭಿನಯದ ಬಹುನೀರಿಕ್ಷಿತ ಕಲ್ಕಿ 2898 AD ಸಿನಿಮಾ ಅದ್ಧೂರಿಯಾಗಿ ರಿಲೀಸ್​ ಆಗಿದೆ. ರಿಲೀಸ್​ ಆದ ಮೊದಲ ದಿನವೇ ಕಲ್ಕಿ 2898 AD ಸಿನಿಮಾಗೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಿದ ಅಭಿಮಾನಿಗಳು ಇದು ಪಕ್ಕಾ ಯೂನಿವರ್ಸಲ್ ಸಿನಿಮಾ. ಮೇಕಿಂಗ್‌ ಅಂತೂ ಹಾಲಿವುಡ್​ ರೇಂಜ್‌ನಲ್ಲಿದೆ ಎಂದು ಹಾಡಿ ಹೋಗಳುತ್ತಿದ್ದಾರೆ. ಕನ್ನಡ, ‌ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಇಂದು ಕಲ್ಕಿ 2898 AD ಸಿನಿಮಾ ಬಿಡುಗಡೆಯಾಗಿದೆ.

ಇದನ್ನೂ ಓದಿ: ಕಲ್ಕಿ ಬುಜ್ಜಿ ಕಾರಿನ ಹಿಂದಿನ ಮಾಸ್ಟರ್​ ಮೈಂಡ್ ಇವರೇ! ಆನಂದ್ ಮಹೀಂದ್ರಾ ಪಾತ್ರವೇನು ಗೊತ್ತಾ?

ಈಗಂತೂ ಸಿನಿ ರಸಿಕರ ಬಾಯಲ್ಲಿ ಬುಜ್ಜಿ ಬಗ್ಗೆಯೇ ಕನವರಿಕೆ. ಸದ್ಯ ಬುಜ್ಜಿ ಕಾರು ಸಖತ್​ ಟ್ರೆಂಡಿಂಗ್​ನಲ್ಲಿದೆ. ಅಷ್ಟಕ್ಕೂ ಈ ಬುಜ್ಜಿ ಇಷ್ಟು ಏಕೆ ಟ್ರೆಂಡಿಂಗ್​ನಲ್ಲಿದೆ ಅಂತಾ ಸಾಕಷ್ಟು ಜನರು ಸರ್ಚ್​ ಮಾಡುತ್ತಿದ್ದಾರೆ. ಹೌದು, ಈ ಬುಜ್ಜಿ ಹೆಸರು ಸಖತ್ ಟ್ರೆಂಡಿಂಗ್​ನಲ್ಲಿ ಇರೋದಕ್ಕೆ ಮುಖ್ಯ ಕಾರಣವೇ ಕಲ್ಕಿ 2898 AD. ಡಾರ್ಲಿಂಗ್​ ಪ್ರಭಾಸ್ ಅಭಿನಯದ ಕಲ್ಕಿ 2898 AD ಪ್ರೇಕ್ಷಕರಲ್ಲಿ ಬಹುನಿರೀಕ್ಷೆ ಹುಟ್ಟು ಹಾಕುತ್ತಿದೆ. ಈಗಾಗಲೇ ಟೀಸರ್ ಹಾಗೂ ಟ್ರೈಲರ್​ ಮೂಲಕ ಗಮನ ಸೆಳೆದ  ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾವನ್ನು ವೀಕ್ಷಕರು ವೀಕ್ಷಿಸಿ ಹಾಡಿ ಹೊಗಳುತ್ತಿದ್ದಾರೆ.

ಇದನ್ನೂ ಓದಿ: Kalki Bujji Car: ಅಬ್ಬಬ್ಬಾ.. ಎಲ್ಲೆಲ್ಲೂ ಕಲ್ಕಿ ಬುಜ್ಜಿ ಕಾರಿನದ್ದೇ ಹವಾ.. ಇದರ ರೇಟ್ ಎಷ್ಟು? ನಿಮಗೂ ಬೇಕಾ?

ಇನ್ನು ಇದರ ಮಧ್ಯೆ ಕಲ್ಕಿ 2898 AD ಸಿನಿಮಾದ ಪ್ರಮುಖ ಆಕರ್ಷಣೆಯಾಗಿರೋ ಬುಜ್ಜಿ ಕಾರನ್ನು ಹೈದರಾಬಾದ್‌ನ ಮಲ್ಟಿಪ್ಲೆಕ್ಸ್‌ನ ಹೊರಗೆ ನಿಲುಗಡೆ ಮಾಡಲಾಗಿದೆ. ಈ ಬುಜ್ಜಿ ಕಾರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ದೌಡಾಯಿಸಿದ್ದರು. ಬುಜ್ಜಿ ಕಾಲ್ಪನಿಕವಾಗಿ ಹಾರುವ ಕಾರು ಇದಾಗಿದೆ. ಮೊಟ್ಟ ಮೊದಲನೇ ಬಾರಿಗೇ ಬುಜ್ಜಿ ಪಾತ್ರದಲ್ಲಿ ಕಾರ​ನ್ನು ಕಲ್ಕಿ ಸಿನಿಮಾದಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾರೆ.

ಈ ಮೂಲಕ ಪ್ರಭಾಸ್​ ಅಭಿಮಾನಿಗಳಲ್ಲಿ ಅಪಾರ ಆಸಕ್ತಿಯನ್ನು ಗಳಿಸಿದೆ. ಆಟೋಮೋಟಿವ್ ಭಾಗಗಳನ್ನು ತಯಾರಿಸಲು ಹೆಸರುವಾಸಿಯಾದ ಕೊಯಮತ್ತೂರು ಮೂಲದ ಸಂಸ್ಥೆಯಾದ ಜಯಮ್ ಆಟೋಮೋಟಿವ್‌ನ ಸ್ಟೇಬಲ್‌ನಲ್ಲಿ ಹುಟ್ಟಿದೆ. ಹೈದರಾಬಾದ್ ಮಲ್ಟಿಪ್ಲೆಕ್ಸ್‌ನಲ್ಲಿ ಅದರ ಸಂಪೂರ್ಣ ಗಾತ್ರವು ಚಲನಚಿತ್ರ-ವೀಕ್ಷಕರನ್ನು ರೋಮಾಂಚನಗೊಳಿಸಿತು. ಸದ್ಯ ಇದನ್ನು ಸಾರ್ವಜನಿಕರು ನೋಡಲು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಈ ಬುಜ್ಜಿ ಕಾರು ಕಲ್ಕಿ ಚಿತ್ರದಲ್ಲಿ ನಟ ಪ್ರಭಾಸ್ ಅವರು ಸವಾರಿ ಮಾಡುತ್ತಾರೆ. ಕಲ್ಕಿ 2898 AD ಸಿನಿಮಾದ ಕ್ಲೈಮ್ಯಾಕ್ಸ್​ ಕೊನೆಯ 30 ನಿಮಿಷ ಅದ್ಭುತವಾಗಿ ಮೂಡಿ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಲ್ಕಿ ಕ್ರೇಜ್ ಹೆಚ್ಚಿಸಲು ಮತ್ತೆ ಬಂತು ಬುಜ್ಜಿ ಕಾರು.. ಪ್ರಭಾಸ್‌ ಫ್ಯಾನ್ಸ್ ಹವಾ ಹೇಗಿದೆ ಗೊತ್ತಾ?

https://newsfirstlive.com/wp-content/uploads/2024/06/bujji1-1.jpg

Load More