newsfirstkannada.com

ಕೋಟಿ ಕೋಟಿ ದುಡ್ಡು ಬಾಚುತ್ತಿರೋ ಕಲ್ಕಿ 2898 AD.. 6ನೇ ದಿನದ ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತೀರಾ!

Share :

Published July 3, 2024 at 8:15pm

    ರಿಲೀಸ್ ದಿನದಿಂದ ಭರ್ಜರಿ ಹಣ ಕೊಳ್ಳೆ ಹೊಡೀತಿರೋ ಕಲ್ಕಿ

    ಕಲ್ಕಿ 2898 AD ಮೊದಲ ದಿನ ಎಷ್ಟು ಕೋಟಿ ಹಣ ಗಳಿಸಿತ್ತು?

    ದೀಪಿಕಾ ಪಡುಕೋಣೆ ಪತಿ ಸಿನಿಮಾ ನೋಡಿ ಏನ್ ಹೇಳಿದರು?

ಡಾರ್ಲಿಂಗ್​ ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ’ ಸಿನಿಮಾ ಜೂನ್ 27ರಂದು ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸಿತ್ತು. ಕಲ್ಕಿ 2898 ಎಡಿ ರಿಲೀಸ್ ಆದ ಮೊದಲ ದಿನದಿಂದ ​ಈಗಿನವರೆಗೂ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು ಕಲೆಕ್ಷನ್ ಅಲ್ಲೂ ಹಿಂದೆ ಬಿದ್ದಿಲ್ಲ. ಸದ್ಯ ಡಾರ್ಲಿಂಗ್ ನಟನೆಯ ಕಲ್ಕಿ ಬಿಡುಗಡೆ ಆದ 6ನೇ ದಿನಕ್ಕೆ ಕೋಟಿ ಕೋಟಿ ರೂಪಾಯಿಗಳನ್ನ ಬಾಚಿದ್ದು ಥಿಯೇಟರ್​ಗಳತ್ತ ಅಭಿಮಾನಿಗಳನ್ನ ಮತ್ತೆ ಮತ್ತೆ ಸೆಳೆಯುತ್ತಿದೆ.

ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯುರಿಟಿ ಗಾರ್ಡ್ ಬರ್ಬರ ಹತ್ಯೆ.. ಅಸಲಿಗೆ ಆಗಿದ್ದೇನು?

‘ಕಲ್ಕಿ 2898 ಎಡಿ’ ಮೂವಿ ರಿಲೀಸ್ ಆಗಿದ್ದ ದಿನ ಇಡೀ ಇಂಡಿಯಾದಲ್ಲಿ 95.30 ಕೋಟಿ ರೂಪಾಯಿಗಳನ್ನ ಗಳಿಸಿತ್ತು. ಈ ಮೂಲಕ ಮೊದಲ ದಿನವೇ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾವಾಗಿ ಕೆಲ ಸಿನಿಮಾಗಳ ದಾಖಲೆಯನ್ನ ಬ್ರೇಕ್ ಮಾಡಿತ್ತು. ಸದ್ಯ ವಿಶ್ವದ್ಯಾಂತ ಕಲ್ಕಿ ಮೂವಿ 6ನೇ ದಿನಕ್ಕೆ ಒಟ್ಟು 680 ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಿದ್ದು ಇನ್ನೇನು ₹700 ಕೋಟಿ ಸಂಗ್ರಹಿಸುವ ಹೊಸ್ತಿಲಿನಲ್ಲಿದೆ. ಪ್ರಭಾಸ್​ಗೆ ಉತ್ತರ ಭಾರತದಲ್ಲಿ ಫ್ಯಾನ್ಸ್​ ಹೆಚ್ಚುತ್ತಿದ್ದು ಈ ಸಿನಿಮಾ ಉತ್ತರ ಭಾರತದಲ್ಲಿ ₹150 ಕೋಟಿ ಗಳಿಸಿರುವುದು ನಿರ್ಮಾಪಕರಿಗೆ ಖುಷಿ ತರಿಸಿದೆ ಎಂದು ಹೇಳಲಾಗುತ್ತಿದೆ.

ಕಲ್ಕಿ ನೋಡಿ ದೀಪಿಕಾ ಗಂಡ ಏನಂದ್ರು?

ನಟಿ ದೀಪಿಕಾ ಪಡುಕೋಣೆ ಅವರು ತನ್ನ ಪತಿ ರಣವೀರ್ ಸಿಂಗ್ ಜೊತೆ ಮುಂಬೈಯಲ್ಲಿ ಈಗಾಗಲೇ ಈ ಸಿನಿಮಾವನ್ನು ನೋಡಿದ್ದಾರೆ. ಕಲ್ಕಿಯ ಬಗ್ಗೆ ರಣವೀರ್ ಸಿಂಗ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪ್ರಭಾಸ್, ಅಮಿತಾಬ್ ಬಚ್ಚನ್ ಹಾಗೂ ಕಮಲ್ ಹಾಸನ್ ಅವರ ಅಭಿನಯವನ್ನು ಕೊಂಡಾಡಿದ್ದಾರೆ. ಅಲ್ಲದೇ ತನ್ನ ಪತ್ನಿ ದೀಪಿಕಾ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 3 ದಿನ ಧಾರಾಕಾರ ಮಳೆ.. ಯಾವ್ಯಾವ ಜಿಲ್ಲೆಗಳಿಗೆ ಭಾರೀ ಅಲರ್ಟ್?

ಬಾಹುಬಲಿ ಪ್ರಭಾಸ್, ಬಿಗ್ ಬೀ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾಣಿ ಈ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ. ‘ಕಲ್ಕಿ’ ಪೌರಾಣಿಕ ಕತೆಯ ಜೊತೆಗೆ ಭವಿಷ್ಯದ ಕತೆ ಒಳಗೊಂಡಿರುವುದು ಮೂವಿಯ ಹೈಲೈಟ್ ಆಗಿದೆ. ನಾಗ್ ಅಶ್ವಿನ್ ಅವರು ಈ ಸಿನಿಮಾ ಡೈರೆಕ್ಟ್ ಮಾಡಿದ್ದು ಇವರ ಮಾವ ಅಶ್ವಿನ್ ದತ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಟಿ ಕೋಟಿ ದುಡ್ಡು ಬಾಚುತ್ತಿರೋ ಕಲ್ಕಿ 2898 AD.. 6ನೇ ದಿನದ ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತೀರಾ!

https://newsfirstlive.com/wp-content/uploads/2024/07/PRABHAS_DARLING.jpg

Load More