ಅಮೆರಿಕದಲ್ಲಿ ‘ಸಮೋಸಾ ಕಾಕಸ್’ ಅಂದರೆ ಏನು?
ಹ್ಯಾರೀಸ್ರನ್ನು ಹೊಗಳ್ತಿದ್ದಂತೆ ಸಂಭ್ರಮಿಸಿದ US ಕಾಂಗ್ರೆಸ್
US ಕಾಂಗ್ರೆಸ್ ಉದ್ದೇಶಿಸಿ ಎರಡನೇ ಬಾರಿಗೆ ಮೋದಿ ಭಾಷಣ
ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿಗೆ ಯುಎಸ್ ಕಾಂಗ್ರೆಸ್ ಉದ್ದೇಶಿಸಿ ಮಾತನಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇನ್ನು ಮೋದಿ ಭಾಷಣ ಆರಂಭಿಸಿದ ತಕ್ಷಣ ಇಡೀ ಸಂಸತ್ತಿನಲ್ಲಿ ಮೋದಿ, ಮೋದಿ, ಮೋದಿ ಎಂಬ ಘೋಷಣೆಗಳು ಮೊಳಗಿದವು.
ಅಮೆರಿಕದಲ್ಲಿ ಸಾಧನೆ ಮಾಡ್ತಿರುವ ಅದೆಷ್ಟೋ ಜನರ ಬೇರು ಭಾರತದಲ್ಲಿದೆ ಅಂತಾ ಮೋದಿ ಹೆಮ್ಮೆಯಿಂದ ಪ್ರಸ್ತಾಪಿಸಿದರು. ಉದಾಹರಣೆಯಾಗಿ ಕಮಲಾ ಹ್ಯಾರಿಸ್ರತ್ತ ಮೋದಿ ಕೈ ತೋರಿಸಿದಾಗ ಚಪ್ಪಾಳೆಯ ಗುಡುಗು, ಹರ್ಷೋದ್ಘಾರದ ಸಿಡಿಲು ಬಂದವು.
ಮೋದಿ ಹೇಳಿದ್ದೇನು..?
ಯಾರು ಎಲ್ಲಿಂದ ಬಂದರೂ ಅಮೆರಿಕದಲ್ಲಿ ಎಲ್ಲರಿಗೂ ಸಮಾನತೆ ಸಿಗುತ್ತದೆ. ಇಲ್ಲಿ ಕೆಲವರಿದ್ದಾರೆ. ಅವರ ಬೇರುಗಳು ಭಾರತದಿಂದ ಬಂದಿವೆ. ಇತಿಹಾಸ ಸೃಷ್ಟಿಸಿದವರಲ್ಲಿ ಒಬ್ಬರು ನನ್ನ ಹಿಂದೆಯೇ ಕೂತಿದ್ದಾರೆ. ಸಮೋಸಾ ಸಭೆಯು ಈಗ ಸದನದ ಸುವಾಸನೆಯಾಗಿದೆ ಎಂದು ನನಗೆ ತಿಳಿಸಲಾಗಿದೆ. ಅದು (ಕಮಲಾ ಹ್ಯಾರೀಸ್) ಇಲ್ಲಿ ಬೆಳೆದು ವೈವಿಧ್ಯಮಯ ಭಾರತೀಯ ಪಾಕಪದ್ಧತಿಯನ್ನು ತರುತ್ತದೆ ಅಂತಾ ನಾನು ಭಾವಿಸುತ್ತೇನೆ ಅಂತಾ ಕಮಲಾ ಹ್ಯಾರೀಸ್ರನ್ನು ನೋಡುತ್ತ ಹೇಳಿದರು.
Indian Prime Minister Modi rightfully acknowledges MVP Kamala Harris and even Kevin McCarthy had to stand and applaud. pic.twitter.com/k9w4VLH8D1
— Renee (@PettyLupone) June 22, 2023
ಸಮೋಸಾ ಕಾಕಸ್ ಎಂದರೇನು?
US ಕಾಂಗ್ರೆಸ್‌ಗೆ ಆಯ್ಕೆಯಾದ ಭಾರತೀಯ ಮೂಲದ ಶಾಸಕರನ್ನು ‘ಸಮೋಸಾ ಕಾಕಸ್’ ಎಂದು ಬಣ್ಣಿಸಲಾಗುತ್ತದೆ. ವಾಸ್ತವವಾಗಿ, ಈ ಪದವನ್ನು ಅಮೆರಿಕದ 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಸಲಾಯಿತು. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯರಾದ ರಾಜಾ ಕೃಷ್ಣಮೂರ್ತಿ ಆ ಚುನಾವಣೆಯಲ್ಲಿ ಮೊದಲ ಬಾರಿಗೆ US ಸಂಸತ್ತಿಗೆ ಆಯ್ಕೆಯಾದರು. ಅವರಿಂದ ಭಾರತೀಯ ಮೂಲದ ಶಾಸಕರ ಗುಂಪಿಗೆ ಈ ಪದವನ್ನು ಬಳಸಲಾಗಿದೆ.
ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್..!
ಕಮಲಾ ಹ್ಯಾರಿಸ್ ತಾಯಿ ಶ್ಯಾಮಲಾ ಗೋಪಾಲನ್ ಹ್ಯಾರಿಸ್ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. ಅವರ ತಾಯಿ 1960ರ ದಶಕದಲ್ಲಿ USಗೆ ತೆರಳಿದ್ದರು. ಇವರು ಜಮೈಕನ್ ಮೂಲದ ಡೊನಾಲ್ಡ್ ಜೆ. ಹ್ಯಾರಿಸ್ ಅವರನ್ನು ವಿವಾಹ ಆದರು. ಬಳಿಕ ಹ್ಯಾರೀಸ್ ಇಡೀ ಕುಟುಂಬ ಅಮೆರಿಕದಲ್ಲಿ ನೆಲೆಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ