newsfirstkannada.com

ಕೊಹ್ಲಿ ಅಲ್ಲ, ರೋಹಿತ್​ ಅಲ್ಲ.. ಈತ ​ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಎಂದ ಪಾಕ್​​ ಪ್ಲೇಯರ್​​!

Share :

10-08-2023

    ಕ್ಯಾಪ್ಟನ್​​ ರೋಹಿತ್​​ ಅಲ್ಲ, ಕೊಹ್ಲಿ ಅಲ್ಲ..!

    ಈತ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ

    ಹಾಡಿಹೊಗಳಿದ ಪಾಕ್​ ಮಾಜಿ ಪ್ಲೇಯರ್​​

​​ಇತ್ತೀಚೆಗೆ ಗಯಾನದಲ್ಲಿ ನಡೆದ ವೆಸ್ಟ್​ ಇಂಡೀಸ್​ ವಿರುದ್ಧದ ಮೂರನೇ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್​​ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಸರಣಿ ಗೆಲ್ಲೋ ಆಸೆಯನ್ನು ಜೀವಂತವಾಗಿರಿಸಿದೆ. ಸರಣಿಯನ್ನು ಗೆಲ್ಲಲು ಮುಂದಿನ 2 ಟಿ20 ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಟೀಂ ಇಂಡಿಯಾ ಇದೆ.

ಇನ್ನು, ಟೀಂ ಇಂಡಿಯಾ ಗೆಲುವಿಗೆ ಕಾರಣವಾದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಪಾಕಿಸ್ತಾನದ ಮಾಜಿ ವಿಕೆಟ್‌ ಕೀಪರ್ ಕಮ್ರಾನ್ ಅಕ್ಮಲ್ ಹಾಡಿಹೊಗಳಿದ್ದಾರೆ. ಪಂದ್ಯದ ಆರಂಭದಲ್ಲೇ ವಿಕೆಟ್​​ಗಳು ಬಿದ್ದಾಗ ಸೂರ್ಯಕುಮಾರ್​​ ಯಾದವ್​​​​ ಜವಾಬ್ದಾರಿ ವಹಿಸಿ ಭಾರತ ತಂಡವನ್ನು ಗೆಲ್ಲಿಸಿದರು ಎಂದರು.

ಸೂರ್ಯಕುಮಾರ್ ಯಾದವ್ ಎಂತಹ ಆಟಗಾರ ಎಂದರೆ, ಏಕಾಂಗಿಯಾಗಿ ಸೋಲೋ ಪಂದ್ಯವನ್ನು ಗೆಲ್ಲಿಸೋ ಸಾಮರ್ಥ್ಯ ಹೊಂದಿದ್ದಾರೆ. ಟೀಂ ಇಂಡಿಯಾದ ಬ್ಯಾಟಿಂಗ್‌ನಲ್ಲಿ ಗಮನಾರ್ಹ ಬದಲಾವಣೆ ಆಗಿದೆ. ನಾವು ಪಂದ್ಯ ಗೆಲ್ಲಬೇಕಾದರೆ ಮಾಡುತ್ತಿರೋ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಈ ಜವಾಬ್ದಾರಿ ಮತ್ತು ಅರಿವು ಟೀಂ ಇಂಡಿಯಾಗೆ ಬಂದಿದೆ ಎಂದರು.

ಸೂರ್ಯಕುಮಾರ್ ಯಾದವ್ ಕೇವಲ 44 ಎಸೆತಗಳಲ್ಲಿ ಸ್ಫೋಟಕ ಬ್ಯಾಟಿಂಗ್​​ 83 ರನ್ ಗಳಿಸಿದರು. ಇದರ ಪರಿಣಾಮ ಟೀಂ ಇಂಡಿಯಾ 2 ಓವರ್​ ಬಾಕಿ ಇರುವಂತೆಯೇ ಗೆದ್ದು ಬೀಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ ಅಲ್ಲ, ರೋಹಿತ್​ ಅಲ್ಲ.. ಈತ ​ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಎಂದ ಪಾಕ್​​ ಪ್ಲೇಯರ್​​!

https://newsfirstlive.com/wp-content/uploads/2023/08/Kohli_Rohit_Team-India.jpg

Load More