ಕನಕಪುರವನ್ನ ಬೆಂಗಳೂರಿಗೆ ಸೇರಿಸುವ ಮಾತನ್ನಾಡಿದ DCM
ವೀರಭದ್ರನ ಸನ್ನಿಧಿಯಲ್ಲಿ ನಿಂತು ತಾಲೂಕಿನ ಜನರಿಗೆ ಭರವಸೆ
ಪರೋಕ್ಷವಾಗಿ ಹೆಚ್.ಡಿ ಕುಮಾರಸ್ವಾಮಿಗೆ ಟಕ್ಕರ್ ಕೊಟ್ಟ ಡಿಕೆಶಿ
ಕನಕಪುರ ತಾಲೂಕು ಡಿ.ಕೆ.ಶಿವಕುಮಾರ್ ಅವರ ತವರು. ಕಾಂಗ್ರೆಸ್ ಕ್ಯಾಪ್ಟನ್‌ರ ರಾಜಕೀಯ ಶಕ್ತಿಕೇಂದ್ರ. ಸದ್ಯ ರಾಮನಗರ ಜಿಲ್ಲೆಯಲ್ಲಿರುವ ಈ ತಾಲೂಕಿನ ಬಗ್ಗೆ ಡಿ.ಕೆ.ಶಿವಕುಮಾರ್ ಮಹತ್ವದ ನಿರ್ಧಾರಕ್ಕೆ ಕೈ ಹಾಕಿದ್ದಾರೆ. ಕನಕಪುರ ತಾಲೂಕನ್ನ ಬೆಂಗಳೂರಿಗೆ ಸೇರಿಸುವ ಮಾತನ್ನಾಡಿದ್ದಾರೆ.. ಈ ಮೂಲಕ ದೋಸ್ತಿಯನ್ನ ಆಸ್ತಿ ಮಾಡಿಕೊಂಡಿರೋ ದಳಪತಿಗೆ ಪರೋಕ್ಷ ಏಟು ಕೊಡುವ ಶಪಥ ಮಾಡಿದ್ದಾರೆ.
ನಾವು ಬೆಂಗಳೂರು ಜಿಲ್ಲೆಯವರು, ರಾಮನಗರದವರಲ್ಲ, ಅದು ನಿಮ್ಮ ತಲೆಯಲ್ಲಿ ಇರಲಿ. ನಾವು ಬೆಂಗಳೂರಿನವರೇ ಸುಮ್ನೆ ರಾಮನಗರಕ್ಕೆ ಸೇರಿಸಿದ್ದಾರೆ.
ಡಿ.ಕೆ ಶಿವಕುಮಾರ್, ಉಪಮುಖ್ಯಮಂತ್ರಿ
ಡಿಸಿಎಂ ಡಿ.ಕೆ.ಶಿವಕುಮಾರ್ ಕನಕಪುರ ರಾಮನಗರ ಜಿಲ್ಲೆಗೆ ಸೇರಿದ ತಾಲೂಕಲ್ಲ ಅಂತ ಹೊಸ ಬಾಂಬ್ ಸಿಡಿಸಿದ್ದಾರೆ. ದಳಪತಿಗೆ ಟಕ್ಕರ್ ಕೊಡಲು ವೀರಭದ್ರನ ಸನ್ನಿಧಿಯಲ್ಲಿ ನಿಂತು ತಮ್ಮ ತಾಲೂಕಿನ ಜನರಿಗೆ ಭರವಸೆಯೊಂದನ್ನ ಕೊಟ್ಟಿದ್ದಾರೆ.
‘ನಾವು ರಾಮನಗರ ಜಿಲ್ಲೆಯವರಲ್ಲ.. ಬೆಂಗಳೂರಿನವರು’
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಟಕ್ಕರ್ ಕೊಡಲೋ ಅಥವಾ ಸ್ವಕ್ಷೇತ್ರದ ಜನರ ಉದ್ಧಾರಕ್ಕೋ ಇವತ್ತು ಬಂಡೆಗಳ ನಾಡು ಕನಕಪುರದಲ್ಲಿ ಡಿ.ಕೆ ಶಿವಕುಮಾರ್ ಹೊಸ ಚರ್ಚೆಯೊಂದನ್ನ ಹುಟ್ಟು ಹಾಕಿದ್ದಾರೆ. ನಮ್ಮದು ರಾಮನಗರ ಜಿಲ್ಲೆಯಲ್ಲ, ಬೆಂಗಳೂರು ಜಿಲ್ಲೆಯವರು ನಾವು ಎನ್ನುತ್ತಾ ಕನಕಪುರವನ್ನ ಬೆಂಗಳೂರಿಗೆ ಸೇರಿಸುವ ಮಾತನ್ನಾಡಿದ್ದಾರೆ. ಯಾರೋ ತಾವು ಹೆಸರು ಮಾಡಲು ರಾಮನಗರ ಮಾಡಿದ್ರು ಅಂತ ಪರೋಕ್ಷವಾಗಿ ದಳಪತಿ ವಿರುದ್ಧ ಗುಡುಗಿದ್ದಾರೆ.
ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಮದ ವೀರಭದ್ರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಭಾಗಿಯಾಗಿದ್ರು. ಈ ವೇಳೆ ವೀರಭದ್ರನ ಸನ್ನಿಧಿಯಲ್ಲಿ ಕನಕಪುರವನ್ನ ಮತ್ತೆ ಬೆಂಗಳೂರಿಗೆ ಸೇರಿಸುವ ಶಪಥವೊಂದನ್ನ ಮಾಡಿದ್ದಾರೆ. ಶಿವನಹಳ್ಳಿ ಗ್ರಾಮದ ಜನರು ಯಾವುದೇ ಕಾರಣಕ್ಕೂ ಭೂಮಿಯನ್ನ ಮಾರಾಟ ಮಾಡಬೇಡಿ ಎನ್ನುತ್ತಾ ಕನಕಪುರ ಮಣ್ಣಿನ ಬೆಲೆಯ ಬಗ್ಗೆ ಕಿವಿಮಾತು ಹೇಳಿದ್ದಾರೆ.
ಕನಕಪುರ ತಾಲೂಕನ್ನ ಬೆಂಗಳೂರು ನಗರಕ್ಕೆ ಸೇರಿಸಲು ಡಿಸಿಎಂ ಜನರಿಗೆ ಮಾತು ಕೊಟ್ಟಿದ್ದಾರೆ. ಆದ್ರೆ, ಡಿ.ಕೆ ಶಿವಕುಮಾರ್ ಮಾತಿಗೆ ಹೆಚ್‌ಡಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಡಿಕೆ ಶಪಥ ನೆರವೇರುತ್ತಾ ಎನ್ನುವುದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ