newsfirstkannada.com

Chandramukhi-2: ‘ಸ್ವಾಂಗತಾಂಜಲಿ’ ಹಾಡು ರಿಲೀಸ್​.. ಕಂಗನಾ ವಿಭಿನ್ನ ಅವತಾರಕ್ಕೆ ಫ್ಯಾನ್ಸ್​ ಕಂಗಾಲು

Share :

12-08-2023

  ಚಂದ್ರಮುಖಿ-2 ಚಿತ್ರದಲ್ಲಿ ಕಂಗನಾ ರಣಾವತ್ ನಾಯಕಿ

  ಗಣೇಶ ಚತುರ್ಥಿಯಂದು ಚಂದ್ರಮುಖಿ-2 ತೆರೆಗೆ

  ಚಂದ್ರಮುಖಿಗೂ ಚಂದ್ರಮುಖಿ-2 ಇದೆ ಸಂಬಂಧ

ಬಾಲಿವುಡ್ ನಟಿ ಕಂಗನಾ ರಣಾವತ್ ತಮಿಳಿನ ಚಂದ್ರಮುಖಿ 2 ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ರಾಘವ ಲಾರೆನ್ಸ್ ಹೀರೋ ಆಗಿರುವ ಈ ಸಿನಿಮಾದಲ್ಲಿ ಚಂದ್ರಮುಖಿಯಾಗಿ ಕಾಣಿಸಿಕೊಂಡಿದ್ದ ಕಂಗನಾ ಅವರ ಫಸ್ಟ್ ಲುಕ್ ನೋಡಿದ ಫ್ಯಾನ್ಸ್​ ಫಿದಾ ಆಗಿದ್ದರು. ಇದೀಗ ಚಿತ್ರತಂಡ ಸ್ವಾಗತಾಂಜಲಿ ಎಂಬ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದ್ದು, ಶಾಸ್ತ್ರೀಯ ನೃತ್ಯಗಾರ್ತಿ ಅವತಾರದಲ್ಲಿ ಕಂಗನಾ ಮಿಂಚಿದ್ದಾರೆ. ಸ್ವಾಂಗತಾಂಜಲಿ ಹಾಡನ್ನು ಎಂಎಂ ಕೀರವಾಣಿ ಕಂಪೋಸ್​ ಮಾಡಿದ್ದಾರೆ. ಶ್ರೀನಿಧಿ ತಿರುಮಲ ಅವರ ಕಂಠದಲ್ಲಿ ಹಾಡು ಮೂಡಿಬಂದಿದೆ.

ಚಂದ್ರಮುಖಿ-2 ಸಿನಿಮಾ ಬಗ್ಗೆ

ಪಿ ವಾಸ್​ ಅವರು ಚಂದ್ರಮುಖಿ-2 ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. 2005ರಲ್ಲಿ ಬಿಡುಗಡೆಗೊಂಡ ಚಂದ್ರಮುಖಿ ಸಿನಿಮಾದ ಮುಂದಿನ ಕಥೆಯನ್ನು ಒಳಗೊಂಡಿದೆ ಎಂದು ಹೇಳಲಾಗುತ್ತಿದೆ. ಅಂದು ಈ ಸಿನಿಮಾದಲ್ಲಿ ರಜನಿಕಾಂತ್​ ನಾಯಕನಾಗಿ ನಟಿಸಿದ್ದರು. ಜ್ಯೋತಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಮುಂಬರುವ ಸೆಪ್ಟೆಂಬರ್​ ತಿಂಗಳಿನಲ್ಲಿ ಚಂದ್ರಮುಖಿ-2 ಸಿನಿಮಾ ರಿಲೀಸ್​ ಮಾಡಲು ಚಿತ್ರತಂಡ ಪ್ಲಾನ್​ ಮಾಡಿಕೊಂಡಿದೆ. ತಮಿಳು, ತೆಲುಗು, ಹಿಂದಿ, ಕನ್ನಡ, ಮಲಯಾಲಂ ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ. ಸೆಪ್ಟೆಂಬರ್​ ಗಣೇಶ​​ ಚತುರ್ಥಿಯಂದು ಚಂದ್ರಮುಖಿ-2 ತೆರೆ ಮೇಲೆ ಬರುವ ನಿರೀಕ್ಷೆಯಿದೆ.

(ವಿಡಿಯೋ ಕೃಪೆ: ಸೋನಿ ಮ್ಯೂಸಿಕ್​ ಸೌತ್​)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chandramukhi-2: ‘ಸ್ವಾಂಗತಾಂಜಲಿ’ ಹಾಡು ರಿಲೀಸ್​.. ಕಂಗನಾ ವಿಭಿನ್ನ ಅವತಾರಕ್ಕೆ ಫ್ಯಾನ್ಸ್​ ಕಂಗಾಲು

https://newsfirstlive.com/wp-content/uploads/2023/08/Kangana-ranaut.jpg

Load More