/newsfirstlive-kannada/media/post_attachments/wp-content/uploads/2024/08/anupama.png)
ಕನ್ನಡದ ಬಿಗ್​​​ ರಿಯಾಲಿಟಿ ಶೋ ಬಿಗ್​​ಬಾಸ್​​ ಖ್ಯಾತಿಯ ನಟಿ ಅನುಪಮಾ ಗೌಡ ಸದಾ ನಗು ಮುಖದ ಚೆಲುವೆ. ಎಲ್ಲರ ಕಣ್ಣು ಕುಕ್ಕುವಂತೆ ಜೀವನ ಸಾಗಿಸುವ ಗಟ್ಟಿಗಿತ್ತಿ. ಸದ್ಯ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ರಾಜಾ ರಾಣಿ ಶೋನಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/08/anupama.jpg)
ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಌಕ್ಟಿವ್ ಆಗಿರೋ ನಟಿ, ನಿರೂಪಕಿ ಅನುಪಮಾ ಗೌಡ ಹೊಸ ಫೋಟೋಶೂಟ್​​​ವೊಂದನ್ನು ಮಾಡಿಸಿದ್ದಾರೆ. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿವೆ. ಮೊನ್ನೆಯಷ್ಟೇ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ದಾಟುತ ನನ್ನನ್ನೇ ನೋಡಲು ಬಂದ ರಾಧಿಕೆ ಎಂಬ ಫೇಮಸ್​ ಹಾಡಿಗೆ ಅನುಪಮಾ ಗೌಡ ಅವರು ಸಖತ್ ಪೋಸ್ಟ್​ ಕೊಟ್ಟಿದ್ದರು.
/newsfirstlive-kannada/media/post_attachments/wp-content/uploads/2024/08/anupama1.jpg)
ಇದೀಗ ಸಂಗಾತಿ ನಿನ್ನ ಸಂಪ್ರೀತಿಯಲ್ಲಿ ಎಂಬ ತಮಿಳು ಹಾಡಿನ ವರ್ಷನ್​ಗೆ ರೀಲ್ಸ್​ ಮಾಡಿದ್ದಾರೆ. ಮೊನ್ನೆಯಷ್ಟೇ ವರಮಹಾಲಕ್ಷ್ಮಿ ಹಬ್ಬದ ದಿನ ನಟಿ ಅನುಪಮಾ ಗೌಡ ನೀಲಿ ಬಣ್ಣದ ಸೀರೆಯನ್ನು ತೊಟ್ಟುಕೊಂಡಿದ್ದರು. ಹಬ್ಬದ ಸಂಭ್ರಮದಲ್ಲಿದ್ದ ನಟಿ ಅನುಪಮಾ ಅವರು ಸದ್ಯ ತಮಿಳು ಹಾಡಿನ ವರ್ಷನ್​ಗೆ ಕಣ್ಮನ ಸೆಳೆಯುವಂತೆ ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ. ಇದೇ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
View this post on Instagram
ವಿಡಿಯೋ ನೋಡಿದ ನೆಟ್ಟಿಗರು, ಭಾರತೀಯ ನಾರಿ ಉಟ್ಟರೆ ಸೀರೆ, ಕಾಣುವುದು ಸಂಸ್ಕೃತಿಯ ನೆರೆ, ಇದೇ ಪ್ರಕೃತಿಯ ಪರೇ, ಸೀರೆಗೆ ಸೊಬಗು ತುಂಬಿತು ನೀನು ಉಟ್ಟಾಗ, ಬಹಳ ಸುಂದರವಾದ ಹೆಣ್ಣು, ಸುಂದರವಾದ ಮನಸ್ಸು ಕೂಡ ನಿಮ್ದು, ದೃಷ್ಟಿ ಬೊಟ್ಟು ಇಟ್ಕೊಂಡು ಬಿಡಿ ಅನು ಇಲ್ಲ ಅಂದ್ರೆ ನಿಮ್ಗೆ ದೃಷ್ಟಿ ಆಗಿಬಿಡುತ್ತೆ, ನಿಜವಾಗಲೂ ನೀವೂ ತುಂಬಾ ಚೆನ್ನಾಗಿ ಕಾಣಿಸ್ತಾ ಇದ್ದೀರಾ ಅಂತ ಕಾಮೆಂಟ್ಸ್​ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us