ನಟ ಚಂದು ಫ್ಯಾಮಿಲಿಗೆ ಆಗಸ್ಟ್ ತಿಂಗಳು ತುಂಬಾನೇ ಸ್ಪೆಷಲ್
ತೆಲುಗು ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿರೋ ನಟ ಇವರು
ಲಕ್ಷ್ಮೀ ಬಾರಮ್ಮ ಮೂಲಕ ಮನೆ ಮಾತಾದ ನಟ ಚಂದುಗೌಡ!
ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ವೀಕ್ಷಕರಿಗೆ ಹತ್ತಿರವಾದವರು ನಟ ಚಂದುಗೌಡ. ಸದ್ಯ ಕನ್ನಡ ಸೇರಿದಂತೆ ತೆಲುಗು ಕಿರುತೆರೆಯಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಎರಡು ಭಾಷೆಗಳಲ್ಲೂ ಚಂದುಗೆ ದೊಡ್ಡ ಅಭಿಮಾನಿ ಬಳಗ ಇದೆ. ಚಂದು ಅವರು 2020ರಲ್ಲಿ ಶಾಲಿನಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಬ್ಯೂಟಿಫುಲ್ ಜೋಡಿ 2022ರಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿತ್ತು. ಚಂದು ಲೈಫ್ನ ಪ್ರಿನ್ಸಸ್ ಅವರ ಮಗಳು ಸಮೈರಾ.
ಇನ್ನು, ಚಂದು ಫ್ಯಾಮಿಲಿಗೆ ಆಗಸ್ಟ್ ತಿಂಗಳು ತುಂಬಾನೇ ಸ್ಪೆಷಲ್. ಈ ತಿಂಗಳು ಡಬಲ್ ಖುಷಿ ಸಂಭ್ರಮ ಮನೆಮಾಡಿರುತ್ತೆ. ಅದಕ್ಕೆ ಕಾರಣ ಅಪ್ಪ-ಮಗಳ ಬರ್ತ್ ಡೇ ಒಂದೇ ತಿಂಗಳಿನಲ್ಲಿ ಇರುವುದರಿಂದ ಆ ಸಂಭ್ರಮ ಇನ್ನು ದುಪ್ಪಟ್ಟಾಗಲಿದೆ. ಹೌದು, ನಿನ್ನೆ ನಟ ಚಂದು ಗೌಡ ಅವರ ಹುಟ್ಟುಹಬ್ಬವಿತ್ತು. ಇದೇ ತಿಂಗಳು ಅಂದ್ರೆ ಆಗಸ್ಟ್ 14ರಂದು ಚಂದು ಮಗಳು ಸಮೈರಾಗೆ ಒಂದು ವರ್ಷ ತುಂಬುತ್ತದೆ. ಈ ಸ್ಪೆಷಲ್ ಡೇಗೆ ಅಪ್ಪ-ಮಗಳ ಆ ಕ್ಯೂಟ್ ಮೂಮೆಂಟ್ಸ್ ಪೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಎರಡೆರಡು ಭಾಷೆಯಲ್ಲಿ ಬ್ಯುಸಿ ಇರುವ ಚಂದು, ಮಗಳ ಜೊತೆ ಟೈಮ್ ಸ್ಪೆಂಡ್ ಮಾಡೋಕೆ ಆಗುತ್ತಿಲ್ಲ. ಅವಳ ಜೊತೆಗಿನ ಅದೆಷ್ಟೋ ಅದ್ಭುತ ಕ್ಷಣಗಳನ್ನ ಮಿಸ್ ಮಾಡಿಕೊಂಡಿದ್ದೀನಿ. ಆದ್ರೆ ಮನೆಯಲ್ಲಿದ್ದರೆ ನನ್ನ ಎಲ್ಲಾ ಟೈಮ್ ನನ್ನ ಮಗಳಿಗೆ ಮೀಸಲು ಎಂದು ತೆಲುಗು ಇಂಟರ್ವ್ಯೂವೊಂದರಲ್ಲಿ ಭಾವುಕರಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಹ್ಯಾಪಿ ಫ್ಯಾಮಿಲಿಯ ಒಡೆಯ ನಟ ಚಂದು ಮಗಳ ಬಗ್ಗೆ ಸದಾ ಚಿಂತಿಸುತ್ತಲೇ ಇರುತ್ತಾರೆ.
View this post on Instagram
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ