/newsfirstlive-kannada/media/post_attachments/wp-content/uploads/2024/10/darshan12.jpg)
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಇಷ್ಟು ದಿನ ಸೆಂಟ್ರಲ್ ಜೈಲಿನಲ್ಲಿ ಕಾಲ ಕಳೆಯುತ್ತಿದ್ದ ನಟ ದರ್ಶನ್​ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಇದನ್ನೂ ಓದಿ: ದರ್ಶನ್ ಇವತ್ತೇ ಬಳ್ಳಾರಿ ಜೈಲಿನಿಂದ ರಿಲೀಸ್? ಮಧ್ಯಂತರ ಜಾಮೀನಿಗೆ 13 ಷರತ್ತುಗಳು; ಏನವು?
/newsfirstlive-kannada/media/post_attachments/wp-content/uploads/2024/10/Darshan-release-bellary-Jail-1.jpg)
ನಟ ದರ್ಶನ್​ ಪರಪ್ಪನ ಅಗ್ರಹಾರದ ಬಳಿಕ ಬಳ್ಳಾರಿ ಜೈಲು ಶಿಫ್ಟ್​ ಆಗಿದ್ದರು. ಸತತ ನಾಲ್ಕುವರೆ ತಿಂಗಳ ಕಾಲ ಸೆರೆವಾಸದಲ್ಲಿದ್ದ ದರ್ಶನ್​ಗೆ ಬ್ರೇಕ್ ಸಿಕ್ಕಿದೆ.
/newsfirstlive-kannada/media/post_attachments/wp-content/uploads/2024/10/Darshan-release-bellary-Jail.jpg)
ರೇಣುಕಾಸ್ವಾಮಿ ಕೇಸ್‌ನಲ್ಲಿ ಬಂಧನದಲ್ಲಿದ್ದ ಆರೋಪಿ ದರ್ಶನ್ ಅವರು ಬಳ್ಳಾರಿ ಜೈಲಿನಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
/newsfirstlive-kannada/media/post_attachments/wp-content/uploads/2024/10/darshan4-1.jpg)
ಬೆನ್ನು ನೋವಿನ ಹಿನ್ನೆಲೆಯಲ್ಲಿ ದರ್ಶನ್ ಅವರು ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ದರ್ಶನ್ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು 6 ವಾರಗಳ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
/newsfirstlive-kannada/media/post_attachments/wp-content/uploads/2024/10/darshan5-1.jpg)
ಹೈಕೋರ್ಟ್ ಜಾಮೀನು ಕರುಣಿಸಿದ ಹಿನ್ನೆಲೆಯಲ್ಲಿ ದರ್ಶನ್ ಕುಟುಂಬಸ್ಥರು ಕಾನೂನು ಪ್ರಕ್ರಿಯೆಗಳನ್ನ ಮುಗಿಸಿದ್ದಾರೆ. ಹೈಕೋರ್ಟ್ ಜಾಮೀನು ಮಂಜೂರು ಪ್ರತಿಯನ್ನ CCH 57 ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. CCH 57 ಕೋರ್ಟ್ ದರ್ಶನ್​ ರಿಲೀಸ್‌ಗೆ ಆರ್ಡರ್ ಮಾಡಿದೆ.
/newsfirstlive-kannada/media/post_attachments/wp-content/uploads/2024/10/darshan6-1.jpg)
ಈಗಾಗಲೇ ಬಿಡುಗಡೆಯ ಆರ್ಡರ್ ಕಾಪಿಯನ್ನು ಬಳ್ಳಾರಿ ಜೈಲಿಗೆ ಕಳುಹಿಸಲಾಗಿದೆ. ದರ್ಶನ್ ಜಾಮೀನಿನ ಪ್ರತಿ ಜೈಲಾಧಿಕಾರಿಗಳ ಕೈ ಸೇರಿದ ಮೇಲೆ ದರ್ಶನ್ ಪರ ವಕೀಲರು ಬಿಡುಗಡೆಗೆ ತಯಾರಿ ನಡೆಸಿದರು.
/newsfirstlive-kannada/media/post_attachments/wp-content/uploads/2024/10/darshan8.jpg)
ಜೈಲು ಅಧಿಕಾರಿಗಳು ರಿಜಿಸ್ಟರ್ ಪುಸ್ತಕ ಹಾಗೂ ಹೈಕೋರ್ಟ್ ಜಾಮೀನು ಆದೇಶದ ಪ್ರತಿಯ ಮೇಲೆ ದರ್ಶನ್ ಅವರಿಂದ ಸಹಿ ಪಡೆದು ಬಿಡುಗಡೆಗೆ ಸೂಚಿಸಿದ್ದಾರೆ. ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್ ಅವರು ಬಳ್ಳಾರಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/10/darshan9.jpg)
ಮೆಡಿಕಲ್ ರಿಪೋರ್ಟ್ ಮೇಲೆ ದರ್ಶನ್ ಜಾಮೀನು ಪಡೆದಿದ್ದಾರೆ. ಹೀಗಾಗಿ ದರ್ಶನ್ ಅವರನ್ನು ಸೂಕ್ತ ಭದ್ರತೆಯೊಂದಿಗೆ ಕಾರಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತಿದೆ. ಬಳ್ಳಾರಿಯಿಂದ ಚಳಗುರ್ಕಿವರಿಗೂ ಪೊಲೀಸ್ ಭದ್ರತಾ ವ್ಯವಸ್ಥೆ ನೀಡಲಾಗುತ್ತದೆ.
/newsfirstlive-kannada/media/post_attachments/wp-content/uploads/2024/10/darshan7.jpg)
ಆಂಧ್ರದ ಅನಂತಪುರ ಮಾರ್ಗವಾಗಿ ದರ್ಶನ್ ಅವರು ಬೆಂಗಳೂರಿಗೆ ತೆರಳಲಿದ್ದಾರೆ. ಬಳ್ಳಾರಿ, ಹಗರಿ, ಚೆಳ್ಳಗುರ್ಕಿ, ಅನಂತಪುರ ಮಾರ್ಗವಾಗಿ ಬೆಂಗಳೂರಿಗೆ ದರ್ಶನ್ ಅವರನ್ನು ಕರೆತರಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/10/darshan-2.jpg)
ಸದ್ಯ ಸತತ ನಾಲ್ಕುವರೆ ತಿಂಗಳ ಸೆರೆವಾಸದಲ್ಲಿ ನಟ ದರ್ಶನ್ ಅವರಿಗೆ ಬ್ರೇಕ್ ಸಿಕ್ಕಿದೆ. ಇನ್ನೂ, ನಟ ದರ್ಶನ್​ ಜೈಲಿನಿಂದ ಆಚೆ ಬರುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾ ಆಗಿದ್ದರು. ಬಾಸ್​, ಡಿ ಬಾಸ್​, ಅಣ್ಣ ಅಂತೇಲ್ಲಾ ಕೂಗಿ ದರ್ಶನ್​ಗೆ ಜೈಕಾರ ಹಾಕಿದ್ದಾರೆ.
/newsfirstlive-kannada/media/post_attachments/wp-content/uploads/2024/10/darshan11.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us