ಸ್ಪಂದನಾ ಇತ್ತೀಚೆಗಷ್ಟೇ 16 ಕೆ.ಜಿ ತೂಕ ಇಳಿಸಿಕೊಂಡಿದ್ದರು
ಪತ್ನಿ ಸ್ಪಂದನಾ ಜೊತೆ ವಿಜಯ್ ರಾಘವೇಂದ್ರ ಹೋಗಿರಲಿಲ್ಲ
ಈಗಾಗಲೇ ಬ್ಯಾಂಕಾಕ್ನಲ್ಲಿರೋ ವಿಜಯ್ ರಾಘವೇಂದ್ರ
ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಆದ್ರೆ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ನಟ ವಿಜಯ್ ರಾಘವೇಂದ್ರ ಅವರು ಪತ್ನಿ ಜೊತೆ ಬ್ಯಾಂಕಾಕ್ಗೆ ಹೋಗಿರಲಿಲ್ಲ. ಇದೇ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಸ್ಪಂದನಾ ಅವರು ತಮ್ಮ ಕಾಲೇಜಿನ ಸ್ನೇಹಿತರೊಂದಿಗೆ ವಿದೇಶ ಪ್ರವಾಸಕ್ಕೆ ಹೋಗಿದ್ದರು. ನಟ ವಿಜಯ ರಾಘವೇಂದ್ರರವರಿಗೆ ಸಿನಿಮಾ ಪ್ರಮೋಷನ್, ಟಿವಿ ಕಾರ್ಯಕ್ರಮಗಳು ಇದ್ದಿದ್ದರಿಂದ ಬೆಂಗಳೂರಿನಲ್ಲೇ ಇದ್ದರು.
ಪತ್ನಿ ವಿದೇಶ ಪ್ರವಾಸಕ್ಕೆ ಹೋಗಿದ್ದ ವೇಳೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ವಿಜಯ್ ರಾಘವೇಂದ್ರ ಅವರು ಬ್ಯಾಂಕಾಕ್ಗೆ ಹೋಗಿದ್ದಾರೆ. ಸದ್ಯ ಅವರು ಬ್ಯಾಂಕಾಕ್ನಲ್ಲಿದ್ದು ಪಾರ್ಥಿವ ಶರೀರವನ್ನ ಬೆಂಗಳೂರಿಗೆ ತರುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಹೋಟೆಲ್ವೊಂದರಲ್ಲಿ ಮಲಗಿದ್ದ ಸ್ಪಂದನಾ ಅವರು ಮೇಲೆ ಎದ್ದಿಲ್ಲ. ಲೋ ಬಿಪಿ ಆಗಿ ಹೃದಯಾಘಾತ ಆಗಿರಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಸ್ಪಂದನಾ ಅವರು ಸುಮಾರು 16 ಕೆಜಿ ತೂಕ ಇಳಿಸಿಕೊಂಡಿದ್ದರು ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ