newsfirstkannada.com

37 ವರ್ಷದ ಸ್ಪಂದನಾ ಆರೋಗ್ಯ ಹೇಗಿತ್ತು? ಸಣ್ಣ ಆಗಲು ಡಯಟ್ ಮಾಡ್ತಿದ್ರಾ? ವಿಜಯ ರಾಘವೇಂದ್ರ ಮನೆಯವರು ಹೇಳಿದ್ದೇನು?

Share :

07-08-2023

    ನಾಳೆ ಅವರ ಪಾರ್ಥಿವ ಶರೀರ ಬೆಂಗಳೂರಿಗೆ ತರುವ ಸಾಧ್ಯತೆ

    ಮೇಡಂ ನಮ್ಮನ್ನು ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಿದ್ದರು

    ಮನೆಯ ಜವಾಬ್ದಾರಿ ಎಲ್ಲ ನನ್ನ ಮೇಲಿತ್ತು.. ಆರೋಗ್ಯವಾಗಿದ್ರು

ಬೆಂಗಳೂರು: ಸ್ಯಾಂಡಲ್​ವುಡ್​ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. 37 ವರ್ಷದ ಸಣ್ಣ ವಯಸ್ಸಿನಲ್ಲೇ ಸ್ಪಂದನಾ ಅವರಿಗೆ ಹೃದಯಾಘಾತ ಆಗಿರುವುದು ಭಾರೀ ಆಘಾತವನ್ನುಂಟು ಮಾಡಿದೆ. ಸದ್ಯ ​ವಿಜಯ್ ರಾಘವೇಂದ್ರ ಕುಟುಂಬಸ್ಥರು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ. ನಾಳೆ ಅವರ ಪಾರ್ಥಿವ ಶರೀರ ಬೆಂಗಳೂರಿಗೆ ತರುವ ಸಾಧ್ಯತೆ ಇದೆ. ಇನ್ನು ಅವರ ಮನೆ ಕೆಲಸದವರು ಹಾಗೂ ಕಾರು ಚಾಲಕರು ಸ್ಪಂದನಾ ಅವರನ್ನ ಸ್ಮರಿಸಿಕೊಂಡು ಭಾವುಕರಾಗಿದ್ದಾರೆ.

ವಿಜಯ್ ರಾಘವೇಂದ್ರರವರ ಮನೆ ಕೆಲಸ ಮಾಡುತ್ತಿದ್ದ ಸುಮಾ ಎನ್ನುವ ಮಹಿಳೆ ಮಾತನಾಡಿ, ನಾನು 3 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಸ್ಪಂದನಾ ಮೇಡಂ ನಿಧನ ಹೊಂದಿದ್ದಾರೆಂದು ಅವರಿವರು ಹೇಳುತ್ತಿದ್ದರು. ಅದಕ್ಕೆ ನಾನು ಡೈರೆಕ್ಟ್ ಫೋನ್​ ಮಾಡಿ ಕೇಳಿದೆ. ಹೌದು.. ಹೀಗಾಗಿದೆ ಎಂದು ಹೇಳಿದ್ರು.

ಸ್ಪಂದನಾ ಮೇಡಂ ಸಣ್ಣ ಹಾಗೋಕೆ ಏನು ತೆಗೆದುಕೊಳ್ಳುತ್ತಿರಲಿಲ್ಲ. ಅವರು ಜಿಮ್​ ಕೂಡ ಮಾಡುತ್ತಿರಲಿಲ್ಲ. ಮನೆಯಲ್ಲಿ ಚನ್ನಾಗಿಯೇ ಇದ್ದರು. ಸಪ್ರೇಟ್ ಆಗಿ ಯಾವುದೇ ಆಹಾರ ತೆಗೆದುಕೊಳ್ಳುತ್ತಿರಲಿಲ್ಲ. ಫುಲ್​ ಮನೆ ಜವಾಬ್ದಾರಿ ನನ್ನ ಮೇಲೆ ಇತ್ತು. ಲಾಕ್​ಡೌನ್​ ಟೈಮ್​ನಲ್ಲಿ ಸ್ವಲ್ಪ ದಪ್ಪ ಇದ್ದರು. ಈಗ ಸಣ್ಣ ಆಗಿದ್ದರು. ಅವರು ಆರೋಗ್ಯವಾಗಿಯೇ ಇದ್ದರು. ಕಳೆದ ಸೋಮವಾರ ವಿದೇಶಕ್ಕೆ ಹೋಗಿದ್ದು ಇವತ್ತಿಗೆ ಒಂದು ವಾರ ಆಗಿದೆ. ನಿನ್ನೆನೇ ಬರಬೇಕಿತ್ತು. ಆದ್ರೆ ಅಷ್ಟರೋಳಗೆ ಹೀಗಾಗಿದೆ ಎಂದು ಸುಮಾ ಅವರು ಹೇಳಿದ್ದಾರೆ.

ವಿಜಯ್ ರಾಘವೇಂದ್ರ ಅವರ ಮನೆಯ ಕಾರು ಡ್ರೈವರ್ ಮತ್ತು ಮನೆ ಕೆಲಸದ ಮಹಿಳೆ

ಇನ್ನು ವಿಜಯ್ ರಾಘವೇಂದ್ರ ಅವರ ಮನೆಯ ಕಾರು ಚಾಲಕ ಮಾತನಾಡಿ, ಮೇಡಂ ಅವರ ಮನೆಯಲ್ಲಿ 5 ವರ್ಷದಿಂದ ಕಾರು ಡ್ರೈವಿಂಗ್​ ಮಾಡುತ್ತಿದ್ದೇನೆ. ಅವರು ತುಂಬಾ ಚೆನ್ನಾಗಿ ನಮ್ಮನ್ನು ನೋಡಿಕೊಳ್ಳುತ್ತಿದ್ದರು. ಮನೆಯಲ್ಲಿ ಯಾವುದೇ ಪೂಜೆಯಾಗಲಿ ಮನೆಯವರಂತೆ ನಮ್ಮನ್ನು ಕರೆಯುತ್ತಿದ್ದರು. ಶೌರ್ಯನ ಬರ್ತ್​ಡೇ ದಿನ ನಮ್ಮ ಮನೆಗೆ ಕಾರು ಕಳಿಸಿ ಕುಟುಂಬ ಸಮೇತ ಬನ್ನಿ ಎಂದು ಹೇಳಿದ್ದರು. ಮನೆಯಲ್ಲಿ ನಾನು ಟಿವಿ ನೋಡುತ್ತಿದ್ದೆ, ಈ ವಿಷ್ಯ ಗೊತ್ತಾಗುತ್ತಿದ್ದಂತೆ ಒಂದು ನಿಮಿಷ ಇರದೇ ಆಟೋ ಹಾಕೊಂಡು ಬಂದೇ ಬಿಟ್ಟೆ ಎಂದರು.

ಮೊದಲು ಸ್ವಲ್ಪ ದಪ್ಪ ಇದ್ದರು. ಈಗ ಸಣ್ಣ ಆಗಿದ್ದರು. ಡಯಟ್ ಜಿಮ್, ವ್ಯಾಯಾಮ ಅಂತಾದೇನು ಮಾಡೋದು ಗೊತ್ತಿಲ್ಲ. ಆದರೆ ಚನ್ನಾಗಿ ಆರೋಗ್ಯವಾಗಿದ್ದರು. ಅಂತಾದೇನು ಮೇಡಂಗೆ ಇರಲಿಲ್ಲ ಎಂದು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

37 ವರ್ಷದ ಸ್ಪಂದನಾ ಆರೋಗ್ಯ ಹೇಗಿತ್ತು? ಸಣ್ಣ ಆಗಲು ಡಯಟ್ ಮಾಡ್ತಿದ್ರಾ? ವಿಜಯ ರಾಘವೇಂದ್ರ ಮನೆಯವರು ಹೇಳಿದ್ದೇನು?

https://newsfirstlive.com/wp-content/uploads/2023/08/VIJAYA_RAGHAVENDRA.jpg

Load More