newsfirstkannada.com

ಮನೆಯ ಮುದ್ದಿನ ಮಗಳು.. ಸ್ಪಂದನಾ ಬಾಲ್ಯ ಹೇಗಿತ್ತು..? ಚಿನ್ನಾರಿ ಮುತ್ತನ ಹೃದಯ ಗೆದ್ದಾಕೆ ಈಕೆ..!

Share :

09-08-2023

    ಕಾಲೇಜಿನಲ್ಲಿ ಟ್ರಿಪ್​ಗೆ ಕರೆದರೂ ಹೋಗುತ್ತಿರಲಿಲ್ಲ ಸ್ಪಂದನಾ

    ಅಣ್ಣ ರಕ್ಷಿತ್ ಶಿವರಾಂ ವಿರುದ್ಧ ತಂದೆಗೆ ದೂರು ಕೊಡ್ತಿದ್ದ ತಂಗಿ

    ಬ್ಯಾಂಕಾಕ್​ಗೆ ಫ್ರೆಂಡ್ಸ್​ ಜೊತೆ ಹೋಗಿದ್ದಾಗ ಹೃದಯಾಘಾತ..!

ಸ್ಪಂದನಾ ಹೃದಯ ಬಡಿತ ನಿಂತ ಆ ಕ್ಷಣದಿಂದ ರಾಜ್ಯದ ದಶದಿಕ್ಕಿನಲ್ಲೂ ನೋವಿನ ಬಿಕ್ಕಳಿಕೆ ಶುರುವಾಗಿದೆ. ವಿಜಯ ರಾಘವೇಂದ್ರ ಪಾಲಿಗೆ ಎಲ್ಲವೂ ಆಗಿದ್ದ ಸ್ಪಂದನಾ ಎರಡೂ ಕುಟುಂಬಸ್ಥರನ್ನ ಕಣ್ಣೀರಲ್ಲಿ ಮುಳುಗಿಸಿ ಹೊರಟು ಹೋಗಿದ್ದಾರೆ. ಮನೆಮಂದಿಯ ಮುದ್ದಿನ ಮಗಳಾಗಿದ್ದ ಸ್ಪಂದನಾಗೆ ಅಚ್ಚು ಅನ್ನೋ ಪೆಟ್ನೇಮ್ ಕೂಡ ಇತ್ತು. ಹಾಗಾದ್ರೆ.. ಹೃದಯವಂತೆ.. ಸ್ಪಂದನಾರ ಬಾಲ್ಯ ಹೇಗಿತ್ತು? ಕಾಲೇಜು ದಿನಗಳಲ್ಲಿ ಅವರ ಶಿಸ್ತು ಹೇಗಿತ್ತು?

ಚಿನ್ನಾರಿ ಮುತ್ತನ ಬಾಳಲ್ಲಿ ಬಂದ ದೇವತೆ

ಚಿನ್ನಾರಿ ಮುತ್ತನ ಹೃದಯವಂತೆಗೆ ಹೃದಯಾಘಾತವಾಗಿದೆ. ಒಬ್ಬಳು ಮಗಳಾಗಿ, ಪ್ರೇಯಸಿಯಾಗಿ, ಪತ್ನಿಯಾಗಿ, ಗೆಳತಿಯಾಗಿ, ಅತ್ತಿಗೆಯಾಗಿ, ಸೊಸೆಯಾಗಿ, ಅಮ್ಮನಾಗಿ ಹೇಗಿರಬೇಕಿತ್ತೋ ಹಾಗೆಯೇ ಎಲ್ಲ ಕ್ವಾಲಿಟೀಸ್​ ಅಳವಡಿಸಿಕೊಂಡಿದ್ದ ಸ್ಪಂದನಾರ ಅಗಲಿಕೆ ನಿಜಕ್ಕೂ ಯಾರಿಗೇ ಆದ್ರೂ ಅವರನ್ನ ಅರಗಿಸಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ. ಅಷ್ಟಕ್ಕೂ ವಿಜಯರಾಘವೇಂದ್ರ ಪಾಲಿಗೆ ಸ್ಪಂದನಾ ಬರೀ ಪತ್ನಿಯಷ್ಟೇ ಆಗಿರಲಿಲ್ಲ. ಅಕ್ಷರಶಃ ಬಾಳಲ್ಲಿ ಬಂದ ದೇವತೆಯಾಗಿದ್ರು ಅನ್ನೋದನ್ನ ಖುದ್ದು ವಿಜಯ ರಾಘವೇಂದ್ರರವರೇ ಹೇಳಿಕೊಂಡಿದ್ದಾರೆ. ಸರ್ಪ್ರೈಸ್ ಕೊಡುವುದರಲ್ಲಿ ಎಕ್ಸ್ಪರ್ಟ್ ಆಗಿದ್ದ ಸ್ಪಂದನಾ, ಪತಿಗೆ ಈಗ ಕೊಟ್ಟಿರುವ ಶಾಕಿಂಗ್ ಅಬ್ಬಾ ನೆನೆಸಿಕೊಳ್ಳೋದಕ್ಕೂ ಅಸಾಧ್ಯ. ಸದಾ ನಿನಗಾಗಿ ಅನ್ನುತ್ತಲೇ ನಾನು ನೀನು ಜೋಡಿ ಎಂದಾಕೆ ಇದೀಗ ಕಣ್ಣು ಮುಚ್ಚಿ ಮಲಗಿಬಿಟ್ಟಿದ್ದಾಳೆ. ಸ್ಪಂದನಾ ಚಲಿಸುವ ಮೋಡಗಳ ಜೊತೆ ಮಿಂಚಿನ ಓಟದಲ್ಲಿ ಎದೆಸೇರಿದ ಮನದನ್ನೆಗೆ ಪ್ರೇಮ ಖೈದಿಯಾಗಿದ್ದ ನಟನಿಗೆ ದಿಕ್ಕೇ ತೋಚಂದತಾಗಿದೆ.

ತನ್ನ ಮಿತಿ ಮೀರದ ಮೃದು ಸ್ವಭಾವದ ಸ್ಪಂದನಾ

ಸ್ಪಂದನಾ ಕಾರಣ ಹೇಳದೆನೇ ಹೊರಟು ಬಿಟ್ಟಿದ್ದಾರೆ. ಬ್ಯಾಂಕಾಕ್​ಗೆ ಹೋಗಿ ಬರ್ತೀನಿ ಎಂದಾಕೆ.. ಬಾರದೂರಿಗೆ ಪಯಣಿಸಿದ್ದಾರೆ. ಕಾಲೇಜು ದಿನಗಳಲ್ಲಿ ಟ್ರಿಪ್​​ಗೆ ಕರೆದ್ರೂ ಹೋಗದ ಸ್ಪಂದನಾ, ಇದೀಗ ಯಾರ ಮಾತಿಗೂ ಸ್ಪಂದಿಸದೇ ತುಂಬಾ ದೂರ ಸಾಗಿ ಬಿಟ್ಟಿದ್ದಾರೆ. ಹೆತ್ತವರ ಮುದ್ದಿನ ಮಗಳಾಗಿದ್ದ, ಅಣ್ಣನ ಪ್ರೀತಿಯ ತಂಗಿಯಾಗಿದ್ದ. ಸ್ನೇಹಿತರ ಪಾಲಿಗೆ ಬೆಸ್ಟ್ ಫ್ರೆಂಡ್ ಆಗಿದ್ದ, ಟೀಚರ್ಸ್ ಪಾಲಿಗೆ ಬೆಸ್ಟ್ ಸ್ಟೂಡೆಂಟ್ ಆಗಿದ್ದದವರು ಸ್ಪಂದನಾ. ಇಂತಹ ಸ್ಪಂದನಾ ಅಗಲುವಿಕೆ ಕರುನಾಡನ್ನ ಇಷ್ಟೊಂದು ಕಾಡಲು ಅನೇಕ ಕಾರಣಗಳಿವೆ. ಚಂದನವನದ ದೊಡ್ಮನೆಯ ಸಂಬಂಧದ ಜೊತೆಗೆ ಹಲವು ಗೌರವಗಳು, ತನ್ನ ಬೆನ್ನ ಹಿಂದೆ ಇದ್ರೂ ಕೂಡ ಯಾವುದೇ ರೀತಿಯಲ್ಲೂ ಕೂಡ ಮಿತಿಯನ್ನ ಮೀರದೆ, ಜೀವನದ ಕಡೆಯ ಕ್ಷಣದವರೆಗೂ ಆದರ್ಶವಾಗಿ ಬದುಕಿದಳು. ಯಾವುದೇ ವಿವಾದಕ್ಕೊಳಗಾದೆ, ಮಾದರಿಯಾಗುವಂತೆ ಜೀವಿಸಿದಳು. ಇದೇ ಕಾರಣಕ್ಕೆ ಸ್ಪಂದನಾ ಸಾವು. ಕರುನಾಡಿನ ಕೋಟಿ ಕೋಟಿ ಜನರಿಗೆ ಬೇಸರ ಮೂಡಿಸಿದ್ದು, ಎಲ್ಲ ಕಡೆ ಈಕೆಯ ಫೋಟೋಗಳು ರಾರಾಜಿಸುತ್ತಿವೆ. ಹೀಗೆ ವಿವಾದಮುಕ್ತರಾಗಿ ಬದ್ಕಿದ್ದ ಸ್ಪಂದನಾ ಲೈಫೇ ಒಂದು ರೀತಿ ಇಂಟರೆಸ್ಟಿಂಗ್ ಆಗಿತ್ತು.

ಮನೆಮಂದಿಯ ಮುದ್ದಿನ ಮಗಳು, ಅಪ್ಪ ಅಂದ್ರೆ ಅತೀ ಗೌರವ

ಸ್ಪಂದನಾ ಬಿ.ಕೆ ಶಿವರಾಂ ಅವರ ಪುತ್ರಿ. ದಕ್ಷ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಬಿ.ಕೆ ಶಿವರಾಂ. ಈ ಹಿಂದೆ ಡಿಪಾರ್ಟ್​ಮೆಂಟ್​ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಇಂತಹ ಬಿ.ಕೆ ಶಿವರಾಂ ಮನೆಯಲ್ಲಿ ಸಹಜವಾಗಿಯೇ ಶಿಸ್ತಿನ ವಾತಾವರಣ ಇತ್ತು. ಅಪ್ಪನಿಗಿದ್ದ ಹೆಸರು, ಖದರ್.. ಸಹಜವಾಗಿ ಇಂತಹದೊಂದು ವಾತಾವರಣವನ್ನ ಕ್ರಿಯೇಟ್ ಆಗಿತ್ತು. ಇಂತಹ ಸಭ್ಯಸ್ಥ ವಾತಾವರಣದಲ್ಲಿ ಬೆಳೆದ ಸ್ಪಂದನಾ ಸಹಜವಾಗಿ ಸೌಮ್ಯ ಸ್ವಭಾವದ ಹುಡುಗಿ. ಬಾಲ್ಯದಲ್ಲಿ ಧರಿಸುವ ಬಟ್ಟೆಯಿಂದ ಹಿಡಿದು. ಆಡುವ ಮಾತುಗಳ ತನಕ ಕೂಡ ಪ್ರತಿಯೊಂದು ವಿಚಾರದಲ್ಲೂ ವಿಭಿನ್ನವಾಗಿ ಗುರುತಿಸಿಕೊಂಡಿದ್ರು. ಮನೆಯವರ ಪಾಲಿಗೆ ‘ಅಚ್ಚು’ವಾಗಿದ್ದ ಮುದ್ದಿನ ಕೂಸನ್ನ ಅಂದು ಬಿಕೆ ಶಿವರಾಂ ಮೋಗ್ಲಿ ಎಂದು ಕರೆಯುತ್ತಿದ್ದಂತೆ. ಆ ಹೆಸರಿನಿಂದ ಕರೆದಿದ್ದರ ಹಿಂದೆ ಕೂಡ ಅದೊಂದು ರಹಸ್ಯ ಇತ್ತು.

ನಾವು ಅವಾಗಲೇ ಹೇಳಿದಂತೆ ಖಡಕ್ ಪೊಲೀಸ್ ಆಫೀಸರ್ ಆಗಿ ಗುರುತಿಸಿಕೊಂಡಿದ್ದ ಬಿಕೆ ಶಿವರಾಂ, ತುಂಬಾ ಶಿಸ್ತಿನ ಮನುಷ್ಯ ಕೂಡ. ಬಟ್ ಡಿಪಾರ್ಟ್​​ಮೆಂಟ್​ನಲ್ಲಿ ತುಂಬಾ ಸ್ಟ್ರಿಕ್ಟ್ ಆಗಿದ್ರೂ ಕೂಡ ಮುದ್ದಿನ ಮಗಳಿಗೆ ಮಾತ್ರ ಸರ್ವ ಸ್ವಾತಂತ್ರ್ಯವನ್ನು ಕೊಟ್ಟಿದ್ರು. ಬಿ.ಕೆ ಶಿವರಾಂ ಹೆಚ್ಚಿನ ಸಮಯ ಇಲಾಖೆಯಲ್ಲಿ ಕಳೆಯುತ್ತಿದ್ದ ಕಾರಣ ಸ್ಪಂದನಾ ಅಣ್ಣ ರಕ್ಷತ್ ಶಿವರಾಂ ಪ್ರೀತಿಯ ತೊಟ್ಟಿಲಲ್ಲಿ ಬೆಳೆದ್ರು. ಇಂತಹ ಸ್ಪಂದನಾ ಬಾಲ್ಯದಲ್ಲಿ ಅಪ್ಪನ ಕೈಯಿಂದ ಬೈಯಿಸಿಕೊಂಡ ಆ ಪ್ರಸಂಗವನ್ನ ಕೂಡ ಈ ಹಿಂದೆ ಖಾಸಗಿ ಸಂದರ್ಶನವೊಂದರಲ್ಲಿ ಮೆಲುಕು ಹಾಕಿದ್ರು.

ಬಿಕೆ ಶಿವರಾಂಗೆ ಸ್ಪಂದನ ಮಾಡ್ತಿದ್ದ ಕಂಪ್ಲೇಂಟ್ ಏನು..?

ಬಿಕೆ ಶಿವರಾಂ ಪಾಲಿನ ಮುದ್ದಿನ ಕೂಸು ಈ ಸ್ಪಂದನಾ ಹೆತ್ತವರ ಪ್ರೀತಿಯ ತೊಟ್ಟಿಲಲ್ಲಿ ಬೆಳೆದವಳು.. ಸಹಜವಾಗಿ ಅಣ್ಣ- ತಂಗಿ ಜಗಳ ಆಡುವಂತೆ ನಾವು ಆಡಿ ಬೆಳೆದವರು. ಕೋಪ ಬಂದಾಗ ಯಾರು ಏನೇ ಮಾಡಿದರೂ ತಕ್ಷಣ ಯಾರ ಬಳಿಯಾದರೂ ಸ್ಪಂದನಾ ಹೇಳಿಬಿಡುತ್ತಿದ್ದರಂತೆ. ಅದರಲ್ಲೂ ಅಪ್ಪ ಸಂಜೆ ಡ್ಯೂಟಿ ಮುಗಿಸಿ ಬರ್ತಿದ್ದಂತೆ. ಅಣ್ಣನ ವಿರುದ್ಧ ವರಿದಯನ್ನ ಒಪ್ಪಿಸುತ್ತಿದ್ದಂತೆ. ಬಿ.ಕೆ ಶಿವರಾಂ ಅಂದು ಹೆಚ್ಚಿನ ಸಮಯವನ್ನ ಡಿಪಾರ್ಟ್​ಮೆಂಟ್​ನಲ್ಲಿ ಕಳೀತಿದ್ರು. ಇಂತಹ ಸಮಯದಲ್ಲಿ ಸ್ಪಂದನಾಗೆ ಫ್ರೆಂಡ್ ಆಗಿದ್ದವರು.. ಬ್ರದರ್ ಆಗಿದ್ದವರು ಅಣ್ಣ ರಕ್ಷತ್ ಶಿವರಾಂ. ಜವಾಬ್ದಾರಿಯತ ಅಣ್ಣನ ಜಾಗದಲ್ಲಿ ನಿಂತ ರಕ್ಷಿತ್ ಶಿವರಾಂ ಅಂದು ಸ್ಪಂದನಾ ಪಾಲಿಗೆ ಬರೀ ಅಣ್ಣ ಮಾತ್ರವಲ್ಲ, ಗುರು, ಸ್ನೇಹಿತ ಎಲ್ಲವೂ ಆಗಿದ್ರು.

ವಿಜಯರಾಘವೇಂದ್ರ ಜೊತೆ ಪ್ರೇಮನೌಕೆ..!

ಹೀಗೆ ಬಾಲ್ಯದಲ್ಲಿ ಎಲ್ಲರ ಅಚ್ಚುಮೆಚ್ಚಾಗಿದ್ದ ಸ್ಪಂದನ ನಂತರ ಕಾಲೇಜು ಜೀವನ್ದಲ್ಲೂ ಕೂಡ ಸ್ನೇಹಿತರಿಗೆ ಬೆಸ್ಟ್ ಫ್ರೆಂಡ್ ಆಗಿ, ಟೀಚರ್ ಪಾಲಿಗೆ ಬೆಸ್ಟ್ ಸ್ಟೂಡೆಂಟ್ ಆಗಿ ಬೆಳೆದವಳು. ನಂತರ ವಿಜಯರಾಘವೇಂದ್ರ ಜೊತೆ ಪ್ರೇಮನೌಕೆ ಹತ್ತಿ ಹಸೆಮಣೆ ಏರಿದ ಬಳಿಕ ಗಂಡನಿಗೆ ಉತ್ತಮ ಹೆಂಡ್ತಿಯಾಗಿ, ಚಿನ್ನೇಗೌಡ ಫ್ಯಾಮಿಲಿಗೆ ಉತ್ತಮ ಸೊಸೆಯಾಗಿ, ಮುಂದೆ ಮಗ ಶೌರ್ಯನ ಪಾಲಿಗೆ ಉತ್ತಮ ತಾಯಿಯಾಗಿದ್ರು. ಈ ಮೂಲಕ ಇಡೀ ಕುಟುಂಬದ ಸಂತೋಷಕ್ಕೆ, ನೆಮ್ಮೆದಿಗೆ ಕಾರಣವಾಗಿದ್ದ ಸ್ಪಂದನಾ ಇನ್ನೂ ನೆನಪು ಮಾತ್ರ ಅಂದಾಗ್ಲೆಲ್ಲಾ.. ದು:ಖ ಉಮ್ಮಳಿಸಿ ಬರುತ್ತೆ.

ಇಂತಹ ಕುಟುಂಬದ ಸಂತೋಷದ ಕುಂಡವೇ ಇದೀಗ ಮಾಯವಾಗಿದೆ.. ದೊಡ್ಡ ಕೊಂಡಿಯೇ ಕಳಚಿ ಬಿದ್ದಿದೆ.. ಬ್ಯಾಂಕಾಂಗ್ ಹೋಗಿದ್ದ ಅಮ್ಮನಿಗಾಗಿ ಕಾಯ್ತಿದ್ದ ಮಗ.. ಇದೀಗ ತಾಯಿಯ ಮಮತೆ ದೂರ ಸರಿದು ನಿಂತಿದೆ. ಒಂದು ಮಾತು ಹೆಚ್ಚಾಯ್ತೇನೋ ಅನ್ನುವಂತೆ ಅಗತ್ಯಕ್ಕೆ ತಕ್ಕಂತೆ ಮಾತು.. ಮುಖದಲ್ಲಿ ಸದಾ ನಿಷ್ಕಲ್ಮಶ ನಗು.. ಇಂತಹ ಸ್ಪಂದನಾ ಇನ್ನೂ ನೆನಪು ಮಾತ್ರ.. ಮಿಸ್ ಯೂ ಸ್ಪಂದನಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆಯ ಮುದ್ದಿನ ಮಗಳು.. ಸ್ಪಂದನಾ ಬಾಲ್ಯ ಹೇಗಿತ್ತು..? ಚಿನ್ನಾರಿ ಮುತ್ತನ ಹೃದಯ ಗೆದ್ದಾಕೆ ಈಕೆ..!

https://newsfirstlive.com/wp-content/uploads/2023/08/SPANDANA_VIJAYRAGHAVENDRA.jpg

Load More