newsfirstkannada.com

ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ; ವಿವಾಹ ವಾರ್ಷಿಕೋತ್ಸವಕ್ಕೆ ವಿಜಯ ರಾಘವೇಂದ್ರ ಭಾವುಕ ಪೋಸ್ಟ್

Share :

26-08-2023

    ಹೃದಯಾಘಾತಕ್ಕೆ ಸ್ಪಂದನಾ ಸಾವನ್ನಪ್ಪಿ ಇಂದಿಗೆ 19 ದಿನಗಳು

    ಸ್ಪಂದನಾ, ವಿಜಯ ರಾಘವೇಂದ್ರ 16ನೇ ವಿವಾಹ ವಾರ್ಷಿಕೋತ್ಸವ

    ಮರೆಯದೆ ಎದೆಗೊತ್ತಿ ಪ್ರೀತಿಸುವೆ, ಶಾರ್ಯನಲ್ಲಿ ನಾನು ಬಿಗಿದಪ್ಪುವಷ್ಟು

ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಸಾವನ್ನಪ್ಪಿ ಇಂದಿಗೆ 19 ದಿನಗಳು ಕಳೆದಿದೆ. ಸ್ಪಂದನಾ ಅವರನ್ನು ಕಳೆದುಕೊಂಡಿರೋ ವಿಜಯ ರಾಘವೇಂದ್ರ ಇನ್ನೂ ಆ ದುಃಖದಿಂದ ಹೊರ ಬಂದಿಲ್ಲ. ಇಂದು ವಿಜಯ ರಾಘವೇಂದ್ರ ಅವರು ಸ್ಪಂದನಾ ಅವರನ್ನು ನೆನೆಯುತ್ತಾ ಮತ್ತೊಂದು ಭಾವುಕ ಪೋಸ್ಟ್ ಮಾಡಿದ್ದಾರೆ.

ಇಂದು ಸ್ಪಂದನಾ, ವಿಜಯ ರಾಘವೇಂದ್ರ ಅವರ ವಿವಾಹ ವಾರ್ಷಿಕೋತ್ಸವ. 2007 ಆಗಸ್ಟ್ 26ರಂದು ಮದುವೆಯಾಗಿದ್ದ ಈ ಮುದ್ದಾದ ಜೋಡಿ ಇಂದು ತಮ್ಮ 16ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಆದರೆ ವಿಜಯ ರಾಘವೇಂದ್ರ ಅವರಿಂದ ಸ್ಪಂದನಾ ದೂರವಾಗಿರೋದು ಬಹಳ ನೋವಿನ ಸಂಗತಿ.

ಇದನ್ನೂ ಓದಿ: ವಿವಾಹ ವಾರ್ಷಿಕೋತ್ಸವಕ್ಕೆ 19 ದಿನಗಳು ಬಾಕಿ.. ಸ್ಪಂದನಾ ಸಾವಿನಿಂದ ಸ್ಯಾಂಡಲ್​ವುಡ್​ಗೆ ಆಘಾತ

ತಮ್ಮ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆ ನಟ ವಿಜಯ ರಾಘವೇಂದ್ರ ಅವರು ಒಂದು ಪೋಸ್ಟ್ ಮಾಡಿದ್ದಾರೆ. ಸ್ಪಂದನಾ ಅವರನ್ನು ನೆನೆಯುತ್ತಾ ಭಾವುಕವಾದ ಸಾಲುಗಳನ್ನ ಬರೆದಿದ್ದಾರೆ.

ಐ ಲವ್ ಯೂ ಚಿನ್ನಿ..
ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ,
ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ
ಬದುಕನ್ನ ಕಟ್ಟಿ ಸರ್ವಸ್ವವಾದೆ…
ಉಸಿರಲ್ಲಿ ಬೆರೆತು ಜೀವಂತವಾದೆ..
ಮುದ್ದಾದ ನಗುವಿನಲ್ಲಿದ್ದ ಶಕ್ತಿ ಪರ್ವತದಷ್ಟು
ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ
ಶಾರ್ಯನಲ್ಲಿ ನಾನು ಬಿಗಿದಪ್ಪುವಷ್ಟು
     – ವಿಜಯ ರಾಘವೇಂದ್ರ 

View this post on Instagram

A post shared by Vijay Raghavendra (@raagu.vijay)

ಈ ಮೇಲಿನ ಸಾಲುಗಳನ್ನು ಬಹಳ ಗಟ್ಟಿ ಮನಸ್ಸಿನಿಂದಲೇ ಬರೆದಿರುವ ವಿಜಯ ರಾಘವೇಂದ್ರ ಅವರು ಸ್ಪಂದನಾ ಜೊತೆಗಿನ ಫೋಟೋವನ್ನು ಶೇರ್ ಮಾಡಿದ್ದಾರೆ. ವಿಜಯ ರಾಘವೇಂದ್ರ ಈ ಭಾವುಕ ನುಡಿಗಳು ಓದುಗರ ಮನ ಮಿಡಿಯುವಂತೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ; ವಿವಾಹ ವಾರ್ಷಿಕೋತ್ಸವಕ್ಕೆ ವಿಜಯ ರಾಘವೇಂದ್ರ ಭಾವುಕ ಪೋಸ್ಟ್

https://newsfirstlive.com/wp-content/uploads/2023/08/Spandana-Vijay-Raghavendra.jpg

Load More