newsfirstkannada.com

×

ಕನಸಿನ ಮನೆಗೆ ಪ್ರವೇಶ ಮಾಡಿದ ನಿರೂಪಕಿ ಅನುಪಮಾ ಗೌಡ; ಅದ್ಧೂರಿ ಗೃಹಪ್ರವೇಶಕ್ಕೆ ಯಾರೆಲ್ಲಾ ಬಂದಿದ್ರು?

Share :

Published October 11, 2024 at 1:47pm

Update October 11, 2024 at 1:50pm

    ಅಕ್ಕ ಸೀರಿಯಲ್, ಬಿಗ್​​ಬಾಸ್ ಮೂಲಕ ಖ್ಯಾತಿ ಪಡೆದುಕೊಂಡ ನಟಿ

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿವೆ ಫೋಟೋಸ್

    ನಗು ಮುಖದ ಚೆಲುವೆ ಅನುಪಮಾ ಗೌಡ ಮನೆಯಲ್ಲಿ ಹೊಸ ಸಂಭ್ರಮ

ಕನ್ನಡದ ಬಿಗ್​​​ ರಿಯಾಲಿಟಿ ಶೋ ಬಿಗ್​​ಬಾಸ್​​ ಖ್ಯಾತಿಯ ನಟಿ ಅನುಪಮಾ ಗೌಡ ಸದಾ ನಗು ಮುಖದ ಚೆಲುವೆ. ಎಲ್ಲರ ಕಣ್ಣು ಕುಕ್ಕುವಂತೆ ಜೀವನ ಸಾಗಿಸುವ ಗಟ್ಟಿಗಿತ್ತಿ. ಈ ಹಿಂದೆ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ರಾಜಾ ರಾಣಿ ಶೋನಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಇದನ್ನೂ ಓದಿ: ಸ್ಪೆಷಲ್​ ವ್ಯಕ್ತಿಯ ಭಾವಚಿತ್ರವನ್ನ ಟ್ಯಾಟೂ ಹಾಕಿಸಿಕೊಂಡ ನಟಿ ಅನುಪಮಾ ಗೌಡ; ಅದು ಯಾರದು ಗೊತ್ತಾ?

ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಌಕ್ಟಿವ್ ಆಗಿರೋ ನಟಿ, ನಿರೂಪಕಿ ಅನುಪಮಾ ಗೌಡ ಬಹುದಿನದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಹೌದು, ನಟಿ ಅನುಪಮಾ ಗೌಡ ಅವರು ಅಮ್ಮ ಜೊತೆಗೆ ಅಪಾರ್ಟ್ಮೆಂಟ್​ವೊಂದರಲ್ಲಿ ವಾಸವಾಗಿದ್ದು. ಇದೀಗ ತಮ್ಮ ಸ್ವಂತ ಮನೆಯನ್ನು ಪ್ರವೇಶ ಮಾಡಿದ್ದಾರೆ.

ತಮ್ಮ ಕನಸಿನ ಅರಮನೆಯನ್ನು ನಿರ್ಮಾಣ ಮಾಡಿ, ಅದ್ಧೂರಿಯಾಗಿ ಗೃಹಪ್ರವೇಶ ಸಮಾರಂಭ ಹಾಗೂ ಮಹಾಪೂಜೆ ಮಾಡಿದ್ದಾರೆ.

ಇದನ್ನೂ ಓದಿ: BBK11: ಬಿಗ್ ಬಾಸ್ ಮನೆಯಲ್ಲಿ ಅತಿ ದೊಡ್ಡ ಎಡವಟ್ಟು.. ರೂಲ್ಸ್‌ ಬ್ರೇಕ್‌ ಮಾಡಿದ್ದಕ್ಕೆ ಕಠಿಣ ಶಿಕ್ಷೆ; ಏನಾಯ್ತು?

ಇನ್ನು, ನಟಿಯ ಹೊಸ ಮನೆಯ ಗೃಹ ಪ್ರವೇಶದಲ್ಲಿ ನಡೆದ ಪೂಜೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಹೊಸ ಮನೆಯನ್ನು ಬಹಳ ಸುಂದರವಾಗಿ ಅಲಂಕಾರ ಮಾಡಿದ್ದಾರೆ. ಮನೆಯ ಮುಂದೆ ನಮ್ಮನೆ ಅಂತ ಬೋರ್ಡ್​ ಹಾಕಿಸಿ ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ನಟಿಯ ಗೃಹ ಪ್ರವೇಶಕ್ಕೆ ಕಿರುತೆರೆ ನಟ ಹಾಗೂ ನಟಿಯರು ಭಾಗಿಯಾಗಿದ್ದರು.

ನಟಿ ಅನುಪಮಾ ಗೌಡ ಆಪ್ತ ಗೆಳತಿ ನೇಹಾ ಗೌಡ, ದಿವ್ಯಾ ಉರುಡುಗ, ಕಿಶನ್ ಬಿಳಗಲಿ, ಕಾರ್ತಿಕ್​ ಮಹೇಶ್​, ಸ್ಯಾಂಡಲ್​ವುಡ್​ ನಟಿ ಅನು ಪ್ರಭಾಕಾರ್​, ನಟಿ ಕೃಷಿ ತಾಪಂಡ, ಸೇರಿ ಸಾಕಷ್ಟು ಸೆಲೆಬ್ರಿಟಿಗಳು ಬಂದು ಶುಭ ಕೋರಿ ಅನುಪಮಾ ಗೌಡ ಅವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಇದಷ್ಟೇ ಅಲ್ಲದೇ ನಟಿಯ ಹೊಸ ಮನೆಯ ಗೃಹ ಪ್ರವೇಶದ ಫೋಟೋಸ್​ ನೋಡಿದ ಅಭಿಮಾನಿಗಳು ಕೂಡ ನಟಿಗೆ ಶುಭ ಹಾರೈಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನಸಿನ ಮನೆಗೆ ಪ್ರವೇಶ ಮಾಡಿದ ನಿರೂಪಕಿ ಅನುಪಮಾ ಗೌಡ; ಅದ್ಧೂರಿ ಗೃಹಪ್ರವೇಶಕ್ಕೆ ಯಾರೆಲ್ಲಾ ಬಂದಿದ್ರು?

https://newsfirstlive.com/wp-content/uploads/2024/10/anupama-gowda-6.jpg

Load More