/newsfirstlive-kannada/media/post_attachments/wp-content/uploads/2024/11/Deepika-Das0.jpg)
ಕೆಲವರು ಅವ್ರ ಜೀವನಕ್ಕಿಂತ ಬೇರೆ ಅವ್ರ ಲೈಫ್​ ಹೆಂಗಿದೆ ಅಂತಾ ಇಣುಕಿ ನೋಡೋದು ಜಾಸ್ತಿ. ಇಲ್ಲೂ ಅಷ್ಟೇ. ಆಕೆ ಕಿರುತೆರೆ ಸ್ಟಾರ್ ನಟಿ. ಬೆಳ್ಳಿ ತೆರೆಯಲ್ಲೂ ಆಗಾಗ ಕಾಣಿಸಿಕೊಳ್ಳೋ ಬ್ಯೂಟಿ. ಬಿಗ್​ ಬಾಸ್ ಮಾಜಿ ಸ್ಪರ್ಧಿ. ಈಗ ಗಂಡ, ಮನೆ, ಟ್ರಿಪ್ ಅಂತಾ ಜಾಲಿಯಾಗಿದ್ದಾರೆ. ಈ ಮಧ್ಯೆ ಕಿಡಿಗೇಡಿಯೊಬ್ಬ ನಟಿಯ ತಾಯಿಗೆ ಮಿಡ್​ನೈಟ್ ಕಾಲ್​ ಮಾಡಿ ಅಳಿಯನ ವಿರುದ್ಧವೇ ನಾಲಿಗೆ ಹರಿಬಿಟ್ಟಿದ್ದಾನೆ.
ದೀಪಿಕಾ ದಾಸ್, ಸಂಜೆ ಸೀರಿಯಲ್ ನೋಡುವವರಿಗೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರೋರಿಗೆ ಇವರ ಪರಿಚಯ ಇದ್ದೇ ಇರುತ್ತದೆ. ಗಾಸಿಪ್​ ಕ್ವೀನ್ ಅಲ್ಲ. ಇಲ್ಲಸದಲ್ಲ ವಿವಾದಗಳಿಗೆ ಈಡಾಗಿಲ್ಲಾ ಆದರೂ ಕೂಡ ಇವರ ತಾಯಿ ಈಗ ಪೊಲೀಸ್ ಠಾಣೆಯ ಮಟ್ಟಿಲೇರುವ ಪ್ರಸಂಗ ಬಂದಿದೆ.
/newsfirstlive-kannada/media/post_attachments/wp-content/uploads/2024/11/Deepika-Das-1.jpg)
ಹಣಕ್ಕಾಗಿ ಡಿಮ್ಯಾಂಡ್. ದೀಪಿಕಾ ಅಮ್ಮನಿಗೆ ಬ್ಲ್ಯಾಕ್ ಮೇಲ್​..!
ನಟಿ ದೀಪಿಕಾ ದಾಸ್. ಕಳೆದ ಮಾರ್ಚ್​ ಒಂದರಂದು ಉದ್ಯಮಿ ದೀಪಕ್​ಗೌಡ ಜೊತೆ ಗೋವಾದಲ್ಲಿ ಸಪ್ತಪದಿ ತುಳಿದಿದ್ರು. ​ ಮ್ಯಾರೇಜ್​ ಆದ ಮೇಲೆ ಜಾಲಿ ಟ್ರಿಪ್ ಮಾಡ್ಕೊಂಡು ಚಿಲ್ ಮೂಡ್​ನಲ್ಲಿದ್ದಾರೆ. ಈ ನಡುವೆ ಕಿಡಿಗೇಡಿಯೊಬ್ಬ ದೀಪಿಕಾ ತಾಯಿ ಪದ್ಮಾವತಿಗೆ ಕರೆ ಮಾಡಿ ಅಳಿಯ ದೀಪಕ್ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನ ಮಾಡಿದ್ದಾನಂತೆ. ಹೀಗಂತ ಪದ್ಮಾವತಿ ಯಶವಂತ್​ ಎಂಬಾತನ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/11/Deepika-Das-2.jpg)
ಅಮ್ಮ ಮಾತ್ರವಲ್ಲ ದೀಪಿಕಾಗೂ ಫೋನ್​ ಮಾಡಿ ಟಾರ್ಚರ್​!
ಪದ್ಮಾವತಿಗೆ ಕಾಲ್ ಮಾಡ್ತಿದ್ದ ಕಿಡಿಗೇಡಿ.. ನಿಮ್ಮ ಅಳಿಯ ಸರಿ ಇಲ್ಲ. ಬಡವಾಣೆ ಮಾಡಿಕೊಂಡು ಜನರಿಗೆ ಮೋಸ ಮಾಡಿದ್ದಲ್ಲದೇ ಜೈಲಿಗೆ ಹೋಗಿ ಬಂದಿದ್ದಾನೆ ಅಂತಾ ಹೇಳಿದ್ದಾನಂತೆ. ಅಲ್ಲದೇ, ದೀಪಿಕಾಗೂ ಕಾಲ್ ಮಾಡಿ ಇದೇ ರೀತಿ ಹೇಳಿದ್ದು, ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದ ಎನ್ನಲಾಗ್ತಿದೆ.. ಕೇಳಿದಷ್ಟು ಹಣ ಕೊಟ್ಟಿಲ್ಲ ಅಂದ್ರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿಯೂ ಬೆದರಿಕೆಯೂ ಹಾಕಿದ್ದಾನಂತೆ.
ಅತ್ತ, ಮಗಳು, ಅಳಿಯನ ಹೆಸರು ಬಳಸಿಕೊಂಡು ಘನತೆಗೆ ಕುತ್ತು ತರುವ ರೀತಿ ಪ್ರಚಾರ ಮಾಡಲಾಗ್ತಿದೆ ಎಂದು ಪದ್ಮಾವತಿ ದೂರು ಕೊಟ್ಟಿದ್ದಾರೆ.. ಅಷ್ಟಕ್ಕೂ ದೀಪಿಕಾ ತಾಯಿ ಕೊಟ್ಟ ದೂರಿನಲ್ಲಿ ಏನಿದೆ ಅನ್ನೋದನ್ನ ಒಮ್ಮೆ ನೋಡುವುದಾದ್ರೆ .
ದೀಪಿಕಾ ದಾಸ್ ತಾಯಿ ದೂರಿನಲ್ಲೇನಿದೆ?
ನನ್ನ ಮಗಳು ದೀಪಿಕಾಗೆ 8 ತಿಂಗಳ ಹಿಂದೆ ದೀಪಕ್ ಕುಮಾರ್ ಅವರೊಂದಿಗೆ ವಿವಾಹವಾಗಿರುತ್ತೆ. ನನ್ನ ಮಗಳು , ಅಳಿಯ ಸುಮಾರು 1 ತಿಂಗಳ ಹಿಂದೆ ಇಂಗ್ಲೇಂಡ್ ಪ್ರವಾಸಕ್ಕೆ ಹೋಗಿರುತ್ತಾರೆ. ಹೀಗಿರುವಾಗ ಸುಮಾರು 7 ತಿಂಗಳಿಂದ ನನ್ನ ಮೊಬೈಲ್​ಗೆ ಯಶವಂತ್ ಬಿನ್ ಕೃಷ್ಣ ಮೂರ್ತಿ ಎಂದು ಹೇಳಿಕೊಂಡು ಫೋನ್ ಮಾಡಿ ನಿಮ್ಮ ಮಗಳಿಗೆ ಏಕೆ ಮದುವೆ ಮಾಡಿದ್ದೀರಿ. ನಿಮ್ಮ ಅಳಿಯ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಬಡಾವಣೆಗಳನ್ನು ಮಾಡಿ ಜನರಿಗೆ ಮೋಸಮಾಡಿ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಹೇಳಿದ್ರು. ನಾನು ಕಾನೂನಾತ್ಮಕವಾಗಿ ದೂರು ನೀಡಿ ಎಂದು ಹೇಳಿ ಸುಮ್ಮನಾಗಿರುತ್ತೇನೆ. ಕೆಲವು ದಿನಗಳಾದ ಮೇಲೆ ದೀಪಿಕಾ ದಾಸ್​ಗೂ ಫೋನ್ ಮಾಡಿ ನಿಮ್ಮ ಯಜಮಾನರು ಅಕ್ರಮ ಚಟುವಟಿಕೆಗಳಿಂದ ಬಡಾವಣೆ ಮಾಡಿ ಜನರಿಗೆ ಮೋಸ ಮಾಡಿರುತ್ತಾರೆ. ನೀವು ಪುನೀತ್ ರಾಜ್ ಕುಮಾರ್​ರವರ ಸಮಾಧಿ ಬಳಿ ಆಣೆ ಮಾಡಿ ಎಂದು ಹೇಳಿರುತ್ತಾನೆ. ಅದರೆ, ನನ್ನ ಮಗಳು ಈ ಆರೋಪಗಳೆಲ್ಲಾ ಸುಳ್ಳು ಇದಕ್ಕೆ ಪುನೀತ್ ರಾಜ್ ಕುಮಾರ್ ರವರ ಹೆಸರು ತರಬೇಡಿ. ನೀವು ಕಾನೂನು ರೀತಿ ದೂರು ನೀಡಿ ಎಂದು ಹೇಳಿರುತ್ತಾಳೆ.
- ಪದ್ಮಾವತಿ, ದೀಪಿಕಾ ದಾಸ್ ತಾಯಿ
ಇನ್ನು, ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಾಲೆ ಯಶವಂತನ ಮೇಲೆ ನಮ್ಮ ಅಳಿಯ ದೀಪಕ್ ಕುಮಾರ್ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ತಡೆಯಾಜ್ಞೆಯ ದಾವೆ ಹಾಕಿದ್ದು, ವಿಚಾರಣೆಯ ಹಂತದಲ್ಲಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜೊತೆ ಶೀಘ್ರ ಕ್ರಮಕೊಳ್ಳುವಂತೆ ಆಗ್ರಹಿಸಿದ್ದಾರೆ. ಹೀಗೆ ಎಲ್ಲೋ ಕೂತು. ಮಿಡ್ ನೈಟ್​ ಕಾಲ್ ಮಾಡಿ ಬೆದರಿಕೆ ಹಾಕುತ್ತಿದ್ದ ಕಿಡಿಗೇಡಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಆದಷ್ಟು ಬೇಗ ಆತನನ್ನ ಪತ್ತೆ ಹಚ್ಚಿ ತಕ್ಕ ಪಾಠ ಕಲಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us