newsfirstkannada.com

ಫ್ಯಾನ್ಸ್​ಗೆ ಸಿಹಿಸುದ್ದಿ ಕೊಡ್ತೀವಿ ಎಂದ ಹರಿಪ್ರಿಯಾ- ವಸಿಷ್ಠ ಸಿಂಹ ಜೋಡಿ..? ಏನದು..?

Share :

23-05-2023

  ಫ್ಯಾನ್ಸ್​ಗೆ ಸಿಹಿಸುದ್ದಿ ಕೊಡ್ತೀವಿ ಎಂದ ಹರಿಪ್ರಿಯಾ!

  26ರಂದು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟರು

  ಮತ್ತೆ ಸುದ್ದಿಯಾದ ಸ್ಯಾಂಡಲ್​ವುಡ್​ ಲವ್​ ಬರ್ಡ್ಸ್

ಸ್ಯಾಂಡಲ್​ವುಡ್​ನ ಚಿಟ್ಟೆ ಎಂದು ಖ್ಯಾತಿಯಾಗಿರೋ ವಸಿಷ್ಠ ಸಿಂಹ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟಿ ಹರಿಪ್ರಿಯಾ ಜೊತೆ ಜನವರಿ 26ರಂದು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ಲವ್​ ಬರ್ಡ್ಸ್ ಮತ್ತೆ ಸುದ್ದಿಯಲ್ಲಿದೆ.

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯ ವಿವಾಹ ಮಹೋತ್ಸವ ಜರುಗಿತು. ಇವರ ಮದುವೆಗೆ ರಾಜಕೀಯ ಗಣ್ಯರು, ಹಾಗೂ ಸ್ಯಾಂಡಲ್​​ವುಡ್​ ಸಿನಿ ಅನೇಕ ತಾರೆಯರು ಸಾಕ್ಷಿಯಾಗಿದ್ದರು. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮದುವೆಯಾಗಿ ಇಂದಿಗೆ 53 ದಿನಗಳು ಕಳೆದಿವೆ. ಇದರ ಮಧ್ಯೆ ನಟಿ ಹರಿಪ್ರಿಯಾ ಅವರು ತಮ್ಮ ಇನ್​​ಸ್ಟಾಗ್ರಾಮ್​​ ಖಾತೆಯಲ್ಲಿ ಒಂದು ಫೋಟೋವನ್ನು ಶೇರ್​ ಮಾಡುವ ಮೂಲಕ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದ್ದಾರೆ.

ಇನ್ನು, ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಫೋನ್​ಗೆ ಸಾಕಷ್ಟು ನೋಟಿಫಿಕೇಶನ್ ಬಂದ ಸ್ಕ್ರೀನ್ ಶಾಟ್‌ ಅನ್ನು ಶೇರ್​ ಮಾಡಿಕೊಂಡಿದ್ದಾರೆ. ಜೊತೆಗೆ ಹೇಯ್​​ ಗಾಯ್ಸ್ ನನಗೆ ಗೊತ್ತು ನೀವೆಲ್ಲರೂ ಬಹುಶಃ ಏನೆಂದು ತಿಳಿಯಲು ಕುತೂಹಲದಿಂದ ಕಾಯುತ್ತಾ ಇದ್ದೀರಿ. ಇದನ್ನು ಹೇಳುವ ಮೊದಲು ನೀವೇ ಊಹಿಸಿ ಮಾಡಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಹೊಸ ಜೀವನ, ಹೊಸ ಜೀವನ ಶೈಲಿ, ಹೊಸ ಜವಾಬ್ದಾರಿಗಳು, ಶೀಘ್ರದಲ್ಲೇ, ಹೊಸ ಆಗಮನ, ಉತ್ಸಾಹ, ಕಾಯಲು ಆಗುತ್ತಿಲ್ಲ ಎಂಬ ಹ್ಯಾಶ್‌ ಟ್ಯಾಗ್‌ಗಳನ್ನು ಹಾಕಿದ್ದಾರೆ.

ಈ ಪೊಸ್ಟ್​​ ಅನ್ನು ನೋಡಿದ ಫ್ಯಾನ್ಸ್ ಅಭಿನಂದನೆಗಳು, ಹೊಸ ಮನೆ ತಗೊಂಡ್ರಾ, ಒಂದೇ ಸಿನಿಮಾದಲ್ಲಿ ಆಕ್ಟ್ ಮಾಡ್ತಿದ್ದೀರಾ, ಹೊಸ ಸಿನಿಮಾದ ಘೋಷಣೆಯೇ? ಮತ್ತೆ ಹೊಸ ನಾಯಿ ಮರಿಗಳನ್ನು ಖರೀದಿ ಮಾಡ್ತಿದ್ದೀರಾ ಎಂದು ಬಗೆ ಬಗೆಯಾಗಿ ಕಾಮೆಂಟ್​ ಮಾಡುತ್ತಿದ್ದಾರೆ. ಇನ್ನು ಈ ಕುರಿತು ನಟಿ ಹರಿಪ್ರಿಯಾ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಸಿಹಿ ಸುದ್ದಿಯನ್ನು ಯಾವಾಗ ಅನೌನ್ಸ್ ಮಾಡುತ್ತಾರೆ ಎಂದು ಫ್ಯಾನ್ಸ್​​ ಕಾತುರದಿಂದ ಕಾಯುತ್ತಿದ್ದಾರೆ.

View this post on Instagram

A post shared by Hariprriya (@iamhariprriya)

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್​ನಲ್ಲಿ ಲಭ್ಯ

ಫ್ಯಾನ್ಸ್​ಗೆ ಸಿಹಿಸುದ್ದಿ ಕೊಡ್ತೀವಿ ಎಂದ ಹರಿಪ್ರಿಯಾ- ವಸಿಷ್ಠ ಸಿಂಹ ಜೋಡಿ..? ಏನದು..?

https://newsfirstlive.com/wp-content/uploads/2023/05/haripriya-1.jpg

Load More