newsfirstkannada.com

WATCH: ಸ್ವಚ್ಛತಾ ಕಾರ್ಮಿಕನಿಗೆ ಡಿಕ್ಕಿ ಹೊಡೆದು ಎಸ್ಕೇಪ್​​​; ಬಳಿಕ ಮನೆಗೆ ಕರೆದು ಕ್ಷಮೆ ಕೇಳಿದ ರಚಿತಾ ರಾಮ್!

Share :

Published August 15, 2023 at 4:28pm

Update August 15, 2023 at 5:19pm

    ನಿನ್ನೆ ಫ್ಲವರ್ ಶೋಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಭೇಟಿ

    ಕಾರು ಚಾಲಕನ ನಡೆಗೆ ಸಿಟ್ಟು ಹೊರ ಹಾಕಿದ್ದ ಸಾರ್ವಜನಿಕರು

    ಲಾಲ್​ಬಾಗ್​​ ಸಿಬ್ಬಂದಿಯನ್ನು ಮನೆಗೆ ಕರೆಸಿ ‘ರಚ್ಚು’ ಚರ್ಚೆ

ಬೆಂಗಳೂರು: 77ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ನಿನ್ನೆ ಲಾಲ್‌ಬಾಗ್‌ಗೆ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಅತಿಥಿಯಾಗಿ ಭೇಟಿ ನೀಡಿದ್ದರು. ಈ ವೇಳೆ ನಟಿ ರಚಿತಾ ರಾಮ್ ಪ್ರಯಾಣಿಸುತ್ತಿದ್ದ ಕಾರು ತೋಟಗಾರಿಕೆ ಇಲಾಖೆಯ ಸಿಬ್ಬಂದಿ ರಂಗಪ್ಪ ಎಂಬುವವರಿಗೆ ಡಿಕ್ಕಿ ಹೊಡೆದಿತ್ತು. ಅದೃಷ್ಟವಶಾತ್ ತೋಟಗಾರಿಕೆ ಇಲಾಖೆಯ ಸಿಬ್ಬಂದಿಗೆ ಏನೂ ತೊಂದರೆ ಆಗಿರಲಿಲ್ಲ. ಆದರೆ ರಚಿತಾ ರಾಮ್ ಸ್ವಚ್ಛತಾ ಕಾರ್ಮಿಕರಿಗೆ ಕ್ಷಮೆಯನ್ನು ಕೇಳದೆ ಅಲ್ಲಿಂದ ಹೋಗಿದ್ದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ಹೊರ ಹಾಕಿದ್ದರು.

ಇದನ್ನು ಓದಿ: ತೋಟಗಾರಿಕೆ ಇಲಾಖೆಯ ಸಿಬ್ಬಂದಿಗೆ ಡಿಕ್ಕಿ ಹೊಡೆದ ಡಿಂಪಲ್ ಕ್ವೀನ್ ಕಾರು; ಸೌಜನ್ಯ ತೊರೆದು ಹೊರಟು ಹೋದ ರಚಿತಾ ರಾಮ್​

ಈ ಘಟನೆ ನಡೆದ ಬಳಿಕ ನಟಿ ರಚಿತಾ ರಾಮ್​ ತೋಟಗಾರಿಕೆ ಇಲಾಖೆಯ ಸಿಬ್ಬಂದಿಯನ್ನು ಮನೆಗೆ ಕರೆಸಿ ಕ್ಷಮೆ ಕೇಳಿದ್ದಾರೆ. ನಿನ್ನೆ ಇಡೀ ದಿನ ನಾನು ಬ್ಯೂಸಿಯಾಗಿದ್ದೆ. ಈ ರೀತಿಯ ಘಟನೆ ನನ್ನ ಗಮನಕ್ಕೆ ಬರಲೇ ಇಲ್ಲ. ನಾನು ಆ ಸಮಯದಲ್ಲಿ ಫೋನ್​ನಲ್ಲಿ ಮಾತಾಡುತ್ತಿದ್ದೆ. ನನ್ನ ಕಡೆಯಿಂದ ತಪ್ಪಾಗಿದೆ. ನನ್ನ ಚಾಲಕನಿಂದ ಕಡೆಯಿಂದ ತಪ್ಪಾಗಿದೆ. ನನ್ನ ಡ್ರೈವರ್​ ಕೂಡ ಒಬ್ಬ ಕಾರ್ಮಿಕ. ಹೀಗಾಗಿ ಅಣ್ಣ ನನ್ನನ್ನು ಕ್ಷಮಿಸಿ. ಆಕಸ್ಮಿಕವಾಗಿ ನಡೆದಿರೋ ಘಟನೆಯಿಂದ ಕಾರ್ಮಿಕರಿಗೆ ಬೇಸರ ಆಗಿದ್ದರೆ ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ ನನನ್ನು ಕ್ಷಮಿಸಿ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಸ್ವಚ್ಛತಾ ಕಾರ್ಮಿಕನಿಗೆ ಡಿಕ್ಕಿ ಹೊಡೆದು ಎಸ್ಕೇಪ್​​​; ಬಳಿಕ ಮನೆಗೆ ಕರೆದು ಕ್ಷಮೆ ಕೇಳಿದ ರಚಿತಾ ರಾಮ್!

https://newsfirstlive.com/wp-content/uploads/2023/08/rachitha-ram-2.jpg

Load More