newsfirstkannada.com

VIDEO: ಕೊಲೆ ಕೇಸಲ್ಲಿ ಜೈಲು ಸೇರಿದ ದರ್ಶನ್​ನನ್ನು ನೋಡಲು ಬಂದ ಸ್ಟಾರ್​ ದಂಪತಿ!

Share :

Published June 29, 2024 at 5:53pm

  ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಒಟ್ಟು 17 ಆರೋಪಿಗಳು ಜೈಲಿಗೆ

  ವಿಜಯಲಕ್ಷ್ಮಿ ಬೆನ್ನಲ್ಲೇ ನಟ ದರ್ಶನ್​ ಭೇಟಿಗೆ ಬಂದ ಸ್ಟಾರ್​ ದಂಪತಿ

  ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಯುವಕ ರೇಣುಕಾಸ್ವಾಮಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಸೇರಿ ಒಟ್ಟು 17 ಆರೋಪಿಗಳು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. 4 ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್​ ಮಾಡಲಾಗಿದ್ದು, ಉಳಿದ 13 ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಾಗಿದೆ.

ಇದನ್ನೂ ಓದಿ: ಸ್ನೇಹಿತನನ್ನೇ ಭೀಕರವಾಗಿ ಕೊಂದ ಹಂತಕ.. ಅಸಲಿಗೆ ನಡೆದಿದ್ದೇನು ಗೊತ್ತಾ?

ಇನ್ನು, ನಟ ದರ್ಶನ್​ ಜೈಲು ಸೇರಿದ ಬಳಿಕ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್​​ ಭೇಟಿ ಕೊಟ್ಟಿದ್ದರು. ಇದೀಗ ದರ್ಶನ್​​ನನ್ನು ನೋಡಲು ನಟಿ ರಕ್ಷಿತಾ ಪ್ರೇಮ್ ಹಾಗೂ ಪ್ರೇಮ್ ಇಬ್ಬರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಕಾರಿನಲ್ಲಿಯೇ ಜೈಲಿನ ಆವರಣಕ್ಕೆ ಎಂಟ್ರಿ ಕೊಟ್ಟ ರಕ್ಷಿತಾ ಪ್ರೇಮ್ ಹಾಗೂ ಪ್ರೇಮ್ ಅವರು ಕೆಲ ಹೊತ್ತು ಕಾದು ಬಳಿಕ ಒಳಗಡೆ ಹೋಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ನಡೆದಿದ್ದು ಹೇಗೆ?

ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಆತನನ್ನು ದರ್ಶನ್​ ಅಂಡ್​ ಗ್ಯಾಂಗ್​ ಪ್ಲಾನ್​ ಮಾಡಿ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಬಳಿಕ ಆತನಿಗೆ ದರ್ಶನ್ ಅಂಡ್​​ ಗ್ಯಾಂಗ್​ ಚಿತ್ರಹಿಂಸೆ ಕೊಟ್ಟು ಬಹಳ ಕ್ರೂರವಾಗಿ ಕೊಲೆ ಮಾಡಿದ್ದರು. ಬಳಿಕ ಜೂನ್ 9 ರಂದು ವಿಕೃತ ಸ್ಥಿತಿಯಲ್ಲಿ ರೇಣುಕಾಸ್ವಾಮಿ  ಮೃತದೇಹ ಪತ್ತೆಯಾಗಿತ್ತು. ಕೊಲೆಯಾದ ಯುವಕ ರೇಣುಕಾಸ್ವಾಮಿ ಅವರ ಮುಖದ ಮೂಳೆ ಮುರಿಯಲಾಗಿದೆ. ಮೂಗು ಓಪನ್ ಆಗುವಂತೆ ಗುದ್ದಿದ್ದರು. ಕಾಲಿನಿಂದ ಮರ್ಮಾಂಗಕ್ಕೆ ಒದೆಯಲಾಗಿತ್ತು. ಎಡಭಾಗದ ಪಕ್ಕೆಲುಬು ಕಟ್ ಆಗುವಂತೆ ಹಲ್ಲೆ ಮಾಡಲಾಗಿತ್ತು. ರೇಣುಕಾಸ್ವಾಮಿ ಅವರ ಕಾಲು ಮತ್ತು ಕೈಗೆ ಬ್ಯಾಟ್, ದೊಣ್ಣೆಯಿಂದ ಹಲ್ಲೆ ಮಾಡಲಾಗಿದೆ. ಮೃತ ವ್ಯಕ್ತಿಯ ಕಿವಿಗೆ ಹಾಗೂ ತಲೆಗೆ ಗಂಭೀರ ಗಾಯ ಆಗಿತ್ತು. ಈ ಕೇಸ್​ ಅನ್ನು ಕೈಗೆತ್ತಿಗೊಂಡ ಪೊಲೀಸ್​ ಅಧಿಕಾರಿಗಳು ತನಿಖೆ ನಡೆಸಿ ಸಾಕ್ಷಿ ಸಮೇತ ಅಸಲಿ ವಿಚಾರವನ್ನು ಬೆಳಕಿಗೆ ತಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕೊಲೆ ಕೇಸಲ್ಲಿ ಜೈಲು ಸೇರಿದ ದರ್ಶನ್​ನನ್ನು ನೋಡಲು ಬಂದ ಸ್ಟಾರ್​ ದಂಪತಿ!

https://newsfirstlive.com/wp-content/uploads/2024/06/rakshitha.jpg

Load More