/newsfirstlive-kannada/media/post_attachments/wp-content/uploads/2024/04/laxmi-nivasa.jpg)
ದಿನ ಕಳೆದಂತೆ ನಾವು ಕೆಲಸ ಮಾಡೋ ಜಾಗನೇ ಕುಟುಂಬ ತರ ಆಗಿಬಿಡುತ್ತೆ. ಹೊರಗಡೆ ದುಡಿಯೋ ಎಲ್ಲರಿಗೂ ರಿಲೇಟ್​ ಆಗೋ ಮಾತಿದು. ಬಾಂಧವ್ಯಗಳು ನಮಗೆ ಗೊತ್ತಿಲ್ಲದ ಹಾಗೇ ಸೃಷ್ಟಿಯಾಗಿರುತ್ತೆ. ಕಾಲಾವಿದರ ನಡುವಿನ ನಂಟು ಕೂಡ ಅಷ್ಟೇ. ನೆಂಟರು ಅಲ್ಲದಿದ್ದರೂ ಬಿಗಿಯಾದ ಗಂಟೊಂದು ಸೀರಿಯಲ್​ ಕಲಾವಿದರನ್ನು ಗಟ್ಟಿಯಾಗಿ ಬೆಸೆದಿರುತ್ತೆ.
/newsfirstlive-kannada/media/post_attachments/wp-content/uploads/2024/04/laxmi-nivasa1.jpg)
ಹೀಗೆ ಲಕ್ಷ್ಮೀ ನಿವಾಸದ ಸೆಟ್​ನಲ್ಲೂ ಅಷ್ಟೇ ದೊಡ್ಡ ತಾರಾಗಣವಿರೋ ಸೀರಿಯಲ್​ ಸುಂದರ ಸಂಬಂಧಗಳಿಂದ ಕೂಡಿದೆ. ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ವೆಂಕಿ ಪಾತ್ರಕ್ಕೆ ಸಂಭಾಷಣೆನೇ ಇಲ್ಲ. ಮಾತು ಬಾರದ ಕಿವಿ ಕೇಳದ ಪಾತ್ರ ಅದು. ತುಂಬಾನೇ ಚಾಲೆಂಜಿಂಗ್​ ಇರೋ ಪಾತ್ರವನ್ನ ಮನಮುಟ್ಟುವಂತೆ ಅಭಿನಯಿಸುತ್ತಿದ್ದಾರೆ ಚಂದ್ರು. ಅವರ ಪಾತ್ರ ಪೋಷಣೆಗೆ ವೀಕ್ಷಕರು ಫಿದಾ ಆಗಿದ್ದಾರೆ. ಧಾರಾವಾಹಿ ಕಥೆಯಲ್ಲಿ ಮಾತ್ರ ಆ ಸಂಬಂಧ ಸೀಮಿತವಾಗಿಲ್ಲ. ಅದರ ಆಚೆಗೂ ಪ್ರೀತಿ, ವಿಶ್ವಾಸ ಇದೆ.
/newsfirstlive-kannada/media/post_attachments/wp-content/uploads/2024/04/laxmi-nivasa3.jpg)
ಅಂದ್ಹಾಗೆ, 5ನೇ ತಾರಿಖು ಶುಕ್ರವಾರ ಲಕ್ಷ್ಮೀ ನಿವಾಸದ ವೆಂಕಿ ಪಾತ್ರಧಾರಿ ಚಂದ್ರು ಅವರ ಬರ್ತ್​ ಡೇ ಇತ್ತು. ಅವರ ಸ್ಪೆಷಲ್​ ಡೇಗೆ ತೆರೆಮೇಲೆ ಅಮ್ಮನಂತೆ ಆರಾಧಿಸೋ ಲಕ್ಷ್ಮೀ ಅಂದ್ರೇ ಶ್ವೇತಾ ಮ್ಯಾಡಮ್​ ಸೇರಿದಂತೆ ಸೀರಿಯಲ್​ ತಂಡ ಸ್ಪೆಷಲ್ ಗಿಫ್ಟ್​ ಕೊಟ್ಟಿದ್ದಾರೆ. ಕೈಗೆ ಖಡಗ ಹಾಕಿ ಆಶೀರ್ವಾದ ಮಾಡಿದ್ದಾರೆ. ಒಟ್ಟಿನಲ್ಲಿ ಒಂದೇ ಬಳ್ಳಿಯ ಹೂಗಳಿಂತಿರೋ ಇವರ ಪ್ರೀತಿ ಸೀರಿಯಲ್​ ಕೊನೆವರೆಗೂ ಹೀಗೆ ಇರಲಿ ಅನ್ನೋದು ಅಭಿಮಾನಿಗಳ ಆಸೆ. ನಮ್ಮ ಕಡೆಯಿಂದಲೂ ಹುಟ್ಟು ಹಬ್ಬದ ಶುಭಾಶಯಗಳು ಚಂದ್ರು.
/newsfirstlive-kannada/media/post_attachments/wp-content/uploads/2024/04/laxmi-nivasa2.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us