newsfirstkannada.com

ಮತ್ತೆ ಡ್ಯಾನ್ಸ್​​ ಮೂಲಕ ಕಮಾಲ್​ ಮಾಡಿದ ಕಿಸ್​​ ಬೆಡಗಿ ಶ್ರೀಲೀಲಾ; ಇಲ್ಲಿವೆ ಟಾಪ್​ 5 ಸಿನಿ ಸುದ್ದಿಗಳು

Share :

03-08-2023

  ಇಳಯರಾಜ ಬಯೋಪಿಕ್​ನಲ್ಲಿ ಖ್ಯಾತ ನಟ ಧನುಷ್‌ ಎಂಟ್ರಿ!

  ನಟಿ ಹರ್ಷಿಕಾ ಪೂಣಚ್ಚ-ಭುವನ್ ಮದುವೆ ತಯಾರಿ ಹೇಗಿದೆ?

  ಪ್ಯಾನ್ ಇಂಡಿಯಾ ಚಿತ್ರ ಸಲಾರ್ ಇಂಗ್ಲಿಷ್​ ವರ್ಷನ್ ಮುಂದಕ್ಕೆ

ಸಲಾರ್ ಇಂಗ್ಲಿಷ್​ ವರ್ಷನ್ ಮುಂದಕ್ಕೆ

ಪ್ಯಾನ್ ಇಂಡಿಯಾದ ಬಹುನಿರೀಕ್ಷೆಯ ಸಲಾರ್ ಸಿನಿಮಾ ಸೆಪ್ಟೆಂಬರ್ 28ಕ್ಕೆ ವರ್ಲ್ಡ್​ವೈಡ್​ ತೆರೆಗೆ ಬರ್ತಿದೆ. ವಿಶೇಷ ಅಂದ್ರೆ ಭಾರತೀಯ ಭಾಷೆಗಳ ಜೊತೆ ಇಂಗ್ಲಿಷ್​ನಲ್ಲೂ ಸಲಾರ್​ ಬಿಡುಗಡೆಯಾಗಲಿದೆ. ಆದ್ರೆ, ಈ ಹಿಂದೆ ಏಕಕಾಲಕ್ಕೆ ಇಂಗ್ಲಿಷ್​ ವರ್ಷನ್​ ರಿಲೀಸ್ ಮಾಡಲು ಸಾಧ್ಯವಾಗದ ಕಾರಣ ಅಕ್ಟೋಬರ್ 13ಕ್ಕೆ ಸಲಾರ್ ಹಾಲಿವುಡ್​ ವರ್ಷನ್​ ಬಿಡುಗಡೆ ಮಾಡಲಿದ್ದಾರಂತೆ.

ಮತ್ತೆ ನಿರಾಸೆ ಮಾಡಿದ ಬುದ್ದಿವಂತ-2

ರಿಯಲ್ ಸ್ಟಾರ್​ ಉಪೇಂದ್ರ ನಟನೆಯ ಬುದ್ದಿವಂತ 2 ಸಿನಿಮಾ ಸೆಪ್ಟೆಂಬರ್ 15ಕ್ಕೆ ಬಿಡುಗಡೆಯಾಬೇಕಿತ್ತು. ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಈ ಮಾಹಿತಿ ಹಂಚಿಕೊಂಡಿತ್ತು. ಆದ್ರೀಗ ಬುದ್ದಿವಂತ 2 ಸಿನಿಮಾ ಮತ್ತೆ ಬಿಡುಗಡೆ ದಿನಾಂಕವನ್ನ ಬದಲಾಯಿಸಿದೆ. ತಾಂತ್ರಿಕ ಕಾರಣಗಳಿಂದ ಅಂದುಕೊಂಡಿದ್ದ ದಿನಕ್ಕೆ ಟೀಸರ್ ಹಾಗೂ ಸಿನಿಮಾ ರಿಲೀಸ್ ಮಾಡಲು ಸಾಧ್ಯವಾಗದ ಕಾರಣ ಶೀಘ್ರದಲ್ಲೇ ಹೊಸ ದಿನಾಂಕ ತಿಳಿಸುವುದಾಗಿ ಪ್ರಕಟಿಸಿದೆ.

ಇಳಯರಾಜ ಬಯೋಪಿಕ್​ನಲ್ಲಿ ಧನುಶ್!

ಭಾರತೀಯ ಸಿನಿಮಾರಂಗದ ದಿಗ್ಗಜ ಸಂಗೀತ ನಿರ್ದೇಶಕ ಇಳಯರಾಜ ಅವರ ಬಯೋಪಿಕ್​ ಬರಲಿದೆ ಎನ್ನುವ ಸುದ್ದಿ ಬಹಳ ದಿನಗಳಿಂದಲೂ ಚರ್ಚೆಯಲ್ಲಿದೆ. ನಿರ್ದೇಶಕ ಬಾಲ್ಕಿ ಈ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು. ಇದೀಗ ಇಳಯರಾಜ ಅವರ ಬಯೋಪಿಕ್​ನಲ್ಲಿ ಧನುಷ್​ ನಟಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಚರ್ಚೆಗೆ ಬಂದಿದೆ. ಇಳಯರಾಜ ಪಾತ್ರಕ್ಕೆ ಧನುಷ್​ ಸೂಕ್ತ ನಟ ಎಂದು ನಿರ್ಧರಿಸಿರುವ ಬಾಲ್ಕಿ ಈ ಬಗ್ಗೆ ಅಪ್ರೋಚ್​ ಸಹ ಮಾಡಿದ್ದಾರಂತೆ.

ಶ್ರೀಲೀಲಾ ಮತ್ತೊಂದು ಡ್ಯಾನ್ಸ್​ ಧಮಾಕಾ

ನಟಿ ಶ್ರೀಲೀಲಾ ಮತ್ತು ತೆಲುಗು ನಟ ರಾಮ್ ಪೋತಿನೇನಿ ನಟನೆಯ ಸ್ಕಂದ ಚಿತ್ರದ ಹೊಸ ಹಾಡು ಬಿಡುಗಡೆಯಾಗಿದ್ದು, ಶ್ರೀಲೀಲಾ ಡ್ಯಾನ್ಸ್​ ಗಮನ ಸೆಳೆಯುತ್ತಿದೆ. ಎಸ್ ಎಸ್ ತಮನ್ ಮ್ಯೂಸಿಕ್ ಮಾಡಿರುವ ಈ ಹಾಡಿನಲ್ಲಿ ಶ್ರೀಲೀಲಾ ಭರ್ಜರಿ ಸ್ಟೆಪ್ ಹಾಕಿದ್ದು, ಸಾಂಗ್ ಸಖತ್ ಸೌಂಡ್ ಮಾಡ್ತಿದೆ. ಬೋಯೋಪಟಿ ಸೀನು ಈ ಚಿತ್ರ ನಿರ್ದೇಶಿಸಿದ್ದು, ದಸರಾ ಸ್ಪೆಷಲ್ ಸಿನಿಮಾ ರಿಲೀಸ್ ಆಗಲಿದೆ.

ಇದೇ ತಿಂಗಳಲ್ಲಿ ಹರ್ಷಿಕಾ-ಭುವನ್ ಮದುವೆ

ಸ್ಯಾಂಡಲ್​ವುಡ್​ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಗೌಡ ಅವರ ಮದುವೆ ಇದೇ ತಿಂಗಳು ಆಗಸ್ಟ್ 23 ಮತ್ತು 24ಕ್ಕೆ ನಿಶ್ಚಿಯವಾಗಿದೆ. ಈಗಾಗಲೇ ಹರ್ಷಿಕಾ ಪೂಣಚ್ಚ-ಭುವನ್ ಪೊನ್ನಣ್ಣ ನಿಶ್ಚಿತಾರ್ಥ ಮುಗಿದಿದ್ದು, ಕೊಡಗು ಸಂಪ್ರದಾಯದಂತೆ ಅದ್ಧೂರಿ ವಿವಾಹಕ್ಕೆ ತಯಾರಿ ನಡೆದಿದೆ. ಆದರೆ ಇದುವರೆಗೂ ಹರ್ಷಿಕಾ ಈ ವಿಷ್ಯದ ಬಗ್ಗೆ ಮಾತಾಡಿರಲಿಲ್ಲ. ನಿನ್ನೆ ನಡೆದ ಸಿನಿಮಾ ಕಾರ್ಯಕ್ರಮದಲ್ಲಿ ಹಾಸ್ಯ ನಟ ಸಾಧುಕೋಕಿಲಾ ಈ ಹರ್ಷಿಕಾ ಸಮ್ಮುಖದಲ್ಲಿ ದಿನಾಂಕ ಘೋಷಿಸಿದರು.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಮತ್ತೆ ಡ್ಯಾನ್ಸ್​​ ಮೂಲಕ ಕಮಾಲ್​ ಮಾಡಿದ ಕಿಸ್​​ ಬೆಡಗಿ ಶ್ರೀಲೀಲಾ; ಇಲ್ಲಿವೆ ಟಾಪ್​ 5 ಸಿನಿ ಸುದ್ದಿಗಳು

https://newsfirstlive.com/wp-content/uploads/2023/08/seelila-1.jpg

Load More