/newsfirstlive-kannada/media/post_attachments/wp-content/uploads/2024/11/pushpa11.jpg)
ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ದಿ ರೂಲ್ ಸಿನಿಮಾಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಸಿನಿಮಾವನ್ನು ಫಸ್ಟ್​ ಡೇ ಫಸ್ಟ್​ ಶೋ ನೋಡಲು ಈಗಾಗಲೇ ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/11/pushpa12.jpg)
ಮೊನ್ನೆಯಷ್ಟೇ ಪುಷ್ಪ 2 ದಿ ರೂಲ್ ಸಿನಿಮಾದ ಮಾಸ್ ಟ್ರೇಲರ್ ರಿಲೀಸ್​ ಆಗಿತ್ತು. ‘ಪುಷ್ಪ 2’ ಸಿನಿಮಾದ ಟ್ರೇಲರ್ ಅನ್ನು ಪಾಟ್ನಾದಲ್ಲಿ ಅದ್ಧೂರಿಯಾಗಿ​ ರಿಲೀಸ್ ಮಾಡಲಾಗಿತ್ತು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ‘ಪುಷ್ಪ 2’ ಟ್ರೇಲರ್​ ಲಾಂಚ್ ಆಗಿ ಉತ್ತಮ ರೆಸ್ಪಾನ್ಸ್​ ಪಡೆದುಕೊಂಡಿದೆ.
/newsfirstlive-kannada/media/post_attachments/wp-content/uploads/2024/11/pushpa10.jpg)
ಟ್ರೇಲರ್​ ರೀಲಿಸ್​ ಆದ ಬೆನ್ನಲ್ಲೇ ‘ಪುಷ್ಪ 2’ ಸಿನಿಮಾದ ಐಟಂ ಸಾಂಗ್​ ಅದ್ದೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿದೆ. ಹೌದು, ಕನ್ನಡದ ನಟಿ ಶ್ರೀಲೀಲಾ ಅವರು ಅಲ್ಲು ಅರ್ಜುನ್ ಜೊತೆ ಹೆಜ್ಜೆ ಹಾಕಿರುವ ‘ಕಿಸ್ಸಿಕ್’ ಸಾಂಗ್ ಇಂದು ಅಂದರೆ ನವೆಂಬರ್ 24ರಂದು ಸಂಜೆ 7: 02ಕ್ಕೆ ಈ ಸಾಂಗ್ ರಿಲೀಸ್ ಆಗಲಿದೆ ಎಂದು ನಿರ್ಮಾಣ ಸಂಸ್ಥೆ ಗುಡ್​ನ್ಯೂಸ್ ಕೊಟ್ಟಿದೆ. ಈಗಾಗಲೇ ‘ಪುಷ್ಪ 2’ ಸಾಂಗ್ ರಿಲೀಸ್‌ಗೂ ಮುನ್ನವೇ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.
/newsfirstlive-kannada/media/post_attachments/wp-content/uploads/2024/11/pushpa13.jpg)
ಇನ್ನೂ ನಟಿ ಶ್ರೀಲೀಲಾ ಅವರು ಮತ್ತೊಮ್ಮೆ ಬೆಸ್ಟ್​ ಡ್ಯಾನ್ಸರ್ ಅಂತ ಪ್ರೂವ್ ಮಾಡಿದ್ದಾರೆ. ಹಾಗಾಗಿ ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ಶ್ರೀಲೀಲಾ ಐಟಂ ಸಾಂಗ್ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಸ್ಟಾರ್ ನಿರ್ದೇಶಕ​ ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಪುಷ್ಪ 2 ದಿ ರೂಲ್ ಡಿಸೆಂಬರ್ 5, 2024ರಂದು ತೆರೆಗೆ ಬರಲು ನಿರ್ಧರಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us