newsfirstkannada.com

ಸದ್ಯಕ್ಕೆ ಸ್ಯಾಂಡಲ್​ವುಡ್ ತುಂಬಾ ಸೇಫ್ ಆದರೆ.. ನಟಿ ಶೃತಿ ಹರಿಹರನ್ ಹೇಳಿದ್ದೇನು?

Share :

Published September 5, 2024 at 3:10pm

Update September 5, 2024 at 3:11pm

    ಸ್ಯಾಂಡಲ್‌ವುಡ್‌ನಲ್ಲೂ ಕಮಿಟಿ ರಚಿಸಲು ಫೈರ್​ ಸಂಸ್ಥೆಯಿಂದ ಮನವಿ

    ಮೀಟೂ ಬಗ್ಗೆ ಸ್ಯಾಂಡಲ್​ವುಡ್ ನಟಿ ಶೃತಿ ಹರಿಹರನ್ ಹೇಳಿದ್ದೇನು?

    ನಮ್ಮ ಸ್ಯಾಂಡಲ್​ವುಡ್​ ಸೇಫ್​ ಆಗಿದ್ಯಾ? ಮೀಟೂ ಬಗ್ಗೆ ಏನಂದ್ರು?

ಬೆಂಗಳೂರು: ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಕೂಗು ದೊಡ್ಡ ಸದ್ದು ಮಾಡಿದೆ. ಕೇರಳದ ಹೇಮಾ ಸಮಿತಿಯಂತೆ ಕರ್ನಾಟಕದಲ್ಲೂ ಸಮಿತಿ ರಚನೆ ಮಾಡಲು ಒತ್ತಾಯ ಕೇಳಿ ಬಂದಿದೆ. ಈ ಆಗ್ರಹದ ಬೆನ್ನಲ್ಲೇ ‘ಫೈರ್’ ಟೀಂ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದೆ. ಈ ವೇಳೆ ನಟ ಚೇತನ್ ಅಹಿಂಸಾ, ಕವಿತಾ ಲಂಕೇಶ್, ಕವಿತಾ ಲಂಕೇಶ್, ನಟಿ ನೀತು, ಶೃತಿ ಹರಿಹರನ್ ಸೇರಿದಂತೆ ಇನ್ನೂ ಕೆಲವರು ಸಿಎಂ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: ‘ನಮ್ಮ ಇಂಡಸ್ಟ್ರಿಯಲ್ಲಿ ನಾನು ನೋಡಿದಂತೆ..’ ಸ್ಯಾಂಡಲ್​ವುಡ್​ #MeToo ಬಗ್ಗೆ ತನಿಷಾ ಹೇಳಿದ್ದೇನು?

ಸಿಎಂ ಭೇಟಿ ಬೆನ್ನಲ್ಲೇ ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ ನಟಿ ಶೃತಿ ಹರಿಹರನ್, ಸಿಎಂ ಸಿದ್ದರಾಮಯ್ಯನವರು ನಾವು ಕೊಟ್ಟ ಲೆಟರ್ ಅನ್ನು ಸ್ವೀಕರಿಸಿದ್ದರು. ಇದರ ಬಗ್ಗೆ ಚರ್ಚೆ ಮಾಡಬೇಕು ಮತ್ತೆ ಭೇಟಿಯಾಗೋಣ ಅಂತ ಹೇಳಿದ್ದಾರೆ. ಶೌಚಾಲಯ, ಟ್ರ್ಯಾವಲ್​ ಇನ್ನಿತರ ವಿಚಾರಗಳು ನಮಗೆ ಸೇಫ್‌ ಆಗಿಬೇಕು. ಹೀಗಾಗಿ ಸರ್ಕಾರದ ಮೂಲಕ ಇದಕ್ಕೊಂದು ಕಮಿಟಿ ಬಂದರೆ ನಮ್ಗೆ ಇನ್ನು ಸಹಾಯ ಆಗುತ್ತೆ. ಸರ್ಕಾರದ ಮೂಲಕವೇ ಒಂದು ಕಮಿಟಿ ಆಗಬೇಕು. ಇದರಿಂದ ಒಳ್ಳೆ ವಾತಾವರಣ ನಿರ್ಮಾಣ ಆಗುತ್ತೆ. ಸದ್ಯಕ್ಕೆ ಸ್ಯಾಂಡಲ್​ವುಡ್ ತುಂಬಾ ಸೇಫ್ ಆಗಿದೆ ಅಂತ ಹೇಳಿದ್ದಾರೆ.

ಸ್ಯಾಂಡಲ್‌ವುಡ್‌ ‘ಫೈರ್‌’ ಆಗ್ರಹಗಳೇನು?
ಸೆಟ್​ನಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಸೌಲಭ್ಯ ಒದಗಿಸಬೇಕು. ಹೆಣ್ಣು ಎಂಬ ಕಾರಣಕ್ಕೇ ಹಲವು ರೀತಿಯಲ್ಲಿ ದೌರ್ಜನ್ಯ ನಡೆಯುತ್ತಿದೆ. ಅದನ್ನ ಮೊದಲು ತಪ್ಪಿಸಬೇಕು. ನಟಿಯರೂ ಸೇರಿದಂತೆ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಎಲ್ಲ ಹೆಣ್ಣು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಮತ್ತು ಸಮಾನತೆ. ಸುರಕ್ಷಿತ ವ್ರತ್ತಿಪರ ವಾತಾವರಣ ನಿರ್ಮಿಸುವ ದಿಕ್ಕಿನಲ್ಲಿ ಕೇರಳದ ನ್ಯಾ.ಹೇಮ ಸಮಿತಿಯ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ನಿವೃತ್ತ ನ್ಯಾಯಾಧೀಶರ ನೇತ್ರತ್ವದಲ್ಲಿ ಸಮಿತಿ ರಚನೆ ಆಗಬೇಕು. ಕನ್ನಡ ಚಿತ್ರರಂಗದಲ್ಲಿನ ಸ್ಥಿತಿಗತಿಗಳ ಅಧ್ಯಯನ ನಡೆಸಿ, ನಿಗದಿತ ಕಾಲಮಿತಿಯಲ್ಲಿ ವರದಿ ಪಡೆದು, ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು. ಲಿಂಗಸಂವೇದನೆಯುಳ್ಳವರ ನೇತೃತ್ವದಲ್ಲಿಯೇ ತನಿಖೆಯಾಗಬೇಕು. ಹೆಣ್ಮಕ್ಕಳನ್ನು ಕೀಳಾಗಿ, ಅಸಮಾನತೆಯಿಂದ ಕಂಡ ಪ್ರಮುಖರನ್ನ ತನಿಖೆಗೆ ಒಳಪಡಿಸಬೇಕು. ಅವಕಾಶಕ್ಕಾಗಿ ಕಮಿಟ್​ಮೆಂಟ್ ಇರುತ್ತೆ ಎಂದು ದೌರ್ಜನ್ಯ ಎಸಗಿದವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಶಿಕ್ಷೆಗೆ ತನಿಖೆ ನಡೆಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸದ್ಯಕ್ಕೆ ಸ್ಯಾಂಡಲ್​ವುಡ್ ತುಂಬಾ ಸೇಫ್ ಆದರೆ.. ನಟಿ ಶೃತಿ ಹರಿಹರನ್ ಹೇಳಿದ್ದೇನು?

https://newsfirstlive.com/wp-content/uploads/2024/09/shruthi.jpg

Load More