newsfirstkannada.com

ಕಿರುತೆರೆ ನಟಿಗೆ ಕಿಡಿಗೇಡಿಗಳಿಂದ ಕಾಟ​; ವೈಷ್ಣವಿ ಗೌಡ ಫೋಟೋ ನೋಡಿ ನೆಟ್ಟಿಗರು ಶಾಕ್​​

Share :

Published June 17, 2024 at 5:19pm

Update June 17, 2024 at 5:22pm

    ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಟಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಡೀಪ್ ಫೇಕ್ ಫೋಟೋ

    Vaishnavi gowda ಎಂಬ ಫೇಸ್​ಬುಕ್ ಖಾತೆಯಿಂದ ನಟಿ ಫೋಟೋ ಲೀಕ್

ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಟಿ ಎಂದರೆ ಅದು ವೈಷ್ಣವಿ ಗೌಡ. ಹೊಸ ಹೊಸ ಫೋಟೋಶೂಟ್​ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿರುತ್ತಾರೆ. ಜೊತೆಗೆ ಕಿರುತೆರೆ ಅಂಗಳದಲ್ಲೇ ಮೋಸ್ಟ್ ಅವೈಟೆಡ್ ಮೂಮೆಂಟ್ ಅಂದರೆ ಸೀತಾ ರಾಮ ಧಾರಾವಾಹಿ. ಇದೇ ಧಾರಾವಾಹಿಯಲ್ಲಿ ನಟಿಯ ಅಭಿನಯಕ್ಕೆ ಫ್ಯಾನ್ಸ್​ ಫಿದಾ ಆಗಿಬಿಟ್ಟಿದ್ದಾರೆ.

ಇದನ್ನೂ ಓದಿ: ತಗಡು ಎಂದಿದ್ದ ದರ್ಶನ್​ಗೆ ಟಾಂಗ್ ಕೊಟ್ಟ ರಾಬರ್ಟ್​ ನಿರ್ಮಾಪಕ​.. ಉಮಾಪತಿ ಗೌಡ ಏನಂದ್ರು?

ಆದರೆ ಇದರ ಮಧ್ಯೆ ಕಿರುತೆರೆ ನಟಿ ವೈಷ್ಣವಿ ಗೌಡ ಅವರಿಗೆ ಡೀಪ್ ಫೇಕ್ ಕಾಟ ಶುರುವಾಗಿದೆ. ಹೌದು, ಈ ಹಿಂದೆ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ ಫೇಕ್‌ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಈ ಡೀಪ್ ಫೇಕ್‌ ಕೇಸ್ ದೇಶಾದ್ಯಂತ ಸಂಚಲನ ಮೂಡಿಸಿತ್ತು. ರಶ್ಮಿಕಾ ಮಂದಣ್ಣ ಅಲ್ಲದೇ ಬಾಲಿವುಡ್ ಬ್ಯೂಟಿ ಕತ್ರೀನಾ ಕೈಫ್ ಅವರ ವಿಡಿಯೋವನ್ನು ಕೂಡ ಡೀಪ್ ಫೇಕ್ ಮಾಡಲಾಗಿತ್ತು. ಆದರೆ ಇದೀಗ ಕೆಲ ಕಿಡಿಗೇಡಿಗಳು ಕನ್ನಡ ಕಿರುತೆರೆ ಖ್ಯಾತ ನಟಿ ವೈಷ್ಣವಿ ಗೌಡ ಅವರಿಗೆ ಡೀಪ್ ಫೇಕ್ ಕಾಟ ಎದುರಾಗಿದೆ.

ಹೌದು ನಟಿ ವೈಷ್ಣವಿ ಗೌಡ ಅವರ ಪೋಟೋಗೆ ಕೆಲ ಕಿಡಿಗೇಡಿಗಳು ಅವರಿಗೆ ಬೇಕಾದ ರೀತಿಯಲ್ಲಿ ಫೋಟೋವನ್ನು ಎಡಿಟ್ ಮಾಡಿದ್ದಾರೆ. ಬಳಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಇನ್ನು ಇದೇ ಫೋಟೋ ನೋಡಿದ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ಆದರೆ ಈ ಫೋಟೋವನ್ನು ನಟಿ ವೈಷ್ಣವಿ ಗೌಡ ಬಿಟ್ಟಿದ್ದಾರೆ ಎಂದು ತಿಳಿದ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ: ಮೆಗ್ಗರ್​​ ರಾಜುನ ಕ್ರೌರ್ಯದ ಇತಿಹಾಸ ತುಂಬಾನೇ ಭಯಾನಕ.. ಚಿತ್ರಹಿಂಸೆ ಅನುಭವಿಸಿದ್ದು ರೇಣುಕಾಸ್ವಾಮಿ ಒಬ್ಬರೇ ಅಲ್ಲ..!

ನೆಟ್ಟಿಗರಿಂದ ಆಕ್ರೋಶ

ಸೀತಾರಾಮ ಸೀರಿಯಲ್ ನಟಿ ಇಷ್ಟು ಕೆಟ್ಟದಾದ ಎಕ್ಸ್ ಪೋಸ್ ಬೇಕಿತ್ತಾ. ಇಡೀ ರಾಜ್ಯದ ಜನ ಸೀತಮ್ಮ ಸೀತಮ್ಮ ಅಂತ ಇಷ್ಟ ಪಡುತ್ತಿದ್ದಾರೆ. ಆದ್ರೆ ನೀವು ಇಷ್ಟು ಅಸಹ್ಯವಾಗಿ ಫೋಟೋ ಅಪ್ಲೋಡ್ ಮಾಡೋದು ಎಷ್ಟು ಸರಿ ಎಂದು ಪ್ರಶ್ನೆ ಪ್ರಶ್ನೆ ಮಾಡುತ್ತಿದ್ದಾರೆ.

ನಟಿಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ

ನಟಿ ವೈಷ್ಣವಿ ಗೌಡ ಅವರು ಈ ಡೀಪ್​ ಫೇಕ್​ ಫೋಟೋ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆಗೆ ನೀಡುತ್ತಾರಾ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಲ್​ ಚಲ್​ ಎಬ್ಬಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿರುತೆರೆ ನಟಿಗೆ ಕಿಡಿಗೇಡಿಗಳಿಂದ ಕಾಟ​; ವೈಷ್ಣವಿ ಗೌಡ ಫೋಟೋ ನೋಡಿ ನೆಟ್ಟಿಗರು ಶಾಕ್​​

https://newsfirstlive.com/wp-content/uploads/2024/06/Vaisshnavi1.jpg

Load More