/newsfirstlive-kannada/media/post_attachments/wp-content/uploads/2023/11/BIG_BOSS_PAVI_POOVAPPA_1.jpg)
ಕನ್ನಡದ ಬಿಗ್‌ಬಾಸ್ ಸೀಸನ್ 10 ಅರ್ಧ ಶತಕ ಬಾರಿಸಿ ಸಕ್ಸಸ್​ ಫುಲ್ ಆಗಿ ಮುನ್ನುಗುತ್ತಿದೆ. ಬಿಗ್‌ಬಾಸ್ ಮನೆಯ 50 ದಿನಗಳ ಆಟ ಒಂದು ರೀತಿಯಾದ್ರೆ, ಇನ್ನುಳಿದ 50 ದಿನಗಳ ಆಟ ಬೇರೆ ಲೆವೆಲ್ ಇರುತ್ತೆ. 50 ದಿನ ಮುಗಿದ ದಿನವೇ ಬಿಗ್‌ಬಾಸ್ ಮನೆ ಸದಸ್ಯರಿಗೆ ಒಂದಲ್ಲ ಡಬಲ್ ಶಾಕ್ ನೀಡಿದ್ದಾರೆ ಬಿಗ್‌ಬಾಸ್.
ಬಿಗ್‌ಬಾಸ್ ಮನೆಗೆ ಡಬಲ್ ವೈಲ್ಡ್ ಕಾರ್ಡ್​ ಎಂಟ್ರಿಯಾಗಿದೆ. ಒಂದೇ ರಾತ್ರಿಯಲ್ಲಿ ಒಬ್ಬರಲ್ಲ, ಇಬ್ಬರ ಗ್ರ್ಯಾಂಡ್ ಎಂಟ್ರಿಯಾಗಿದೆ. ವೈಲ್ಡ್ ಕಾರ್ಡ್ ಎಂಟ್ರಿಯ ಪ್ರೊಮೋ ರಿಲೀಸ್ ಮಾಡಲಾಗಿದ್ದು ಯಾರವರು ಅನ್ನೋದು ಸಸ್ಪೆನ್ಸ್ ಆಗಿತ್ತು. ಆದ್ರೀಗ ಆ ಸರ್‌ಪ್ರೈಸ್ ಸ್ಪರ್ಧಿಗಳು ಯಾರು ಅನ್ನೋ ರಹಸ್ಯ ಬಯಲಾಗಿದೆ.
ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಮೊದಲನೆಯವರು ಪ್ರೊಫೇಷನಲ್ ಮಾಡಲ್ ಪವಿ ಪೂವಪ್ಪ ಅವರು. ಎರಡನೇ ಎಂಟ್ರಿಯಾದವರು ನಟ, ಮಾಡಲ್ ಹಾಗೂ ಕ್ರಿಕೆಟರ್ ಆಗಿರುವ ಆಸ್ತಿಕ್ ಅವಿನಾಶ್ ಶೆಟ್ಟಿ. ಈ ಇಬ್ಬರು ಬಿಗ್ ಬಾಸ್ ಮನೆಗೆ ವೈಲ್ಡ್ ಆಗಿ ಗ್ರ್ಯಾಂಡ್ ಎಂಟ್ರಿ ತಗೊಂಡಿದ್ದಾರೆ.
[caption id="attachment_32321" align="alignnone" width="800"]
ಬಿಗ್ ಮನೆಯಲ್ಲಿ ಪವಿ ಪೂವಪ್ಪ[/caption]
ಅರ್ಧ ಶತಕ ಕಂಪ್ಲೀಟ್ ಮಾಡಿ ಮುನ್ನುಗುತ್ತಿರೋ ಬಿಗ್‌ಬಾಸ್ ಮನೆಗೆ ಇಬ್ಬರ ವೈಲ್ಡ್ ಕಾರ್ಡ್​ ಎಂಟ್ರಿ ಸ್ಪರ್ಧಿಗಳನ್ನೆಲ್ಲಾ ಸ್ತಬ್ಧರಾಗುವಂತೆ ಮಾಡಿದೆ. ಇವರ ಎಂಟ್ರಿಯಂತೂ ಮಸ್ತ್ ಆಗಿ ಆಗಿದೆ. ಪವಿ ಪೂವಪ್ಪ ಕಾರ್​ನಲ್ಲಿ ಮನೆಗೆ ಎಂಟ್ರಿ ಕೊಟ್ರೆ, ಕ್ಯಾಪ್ಟನ್ ರೂಮ್​ನಿಂದ ಆಸ್ತಿಕ್ ಅವಿನಾಶ್ ಶೆಟ್ಟಿ ರಗಡ್ ಎಂಟ್ರಿ ಕೊಟ್ಟಿದ್ದಾರೆ.
ಕಲರ್ಸ್ ಕನ್ನಡ ವಾಹಿನಿ ಈಗಾಗ್ಲೇ ವೈಲ್ಡ್ ಕಾರ್ಡ್​ ಎಂಟ್ರಿ ಪ್ರೋಮೋ ರಿಲೀಸ್ ಮಾಡಿದ್ದು ಬಿಗ್‌ಬಾಸ್ ವೀಕ್ಷಕರು ಕೂಡ ತುಂಬಾ ಕುತೂಹಲಕಾರಿಯಾಗಿ ಕಾಯುತ್ತಿದ್ದಾರೆ. ಬಿಗ್‌ಬಾಸ್ ಮನೆಯ ಸದಸ್ಯರಿಗೆ ಈ ವೈಲ್ಡ್ ಕಾರ್ಡ್ ಸ್ಪರ್ಧಿಗಳು​ ಯಾವ ರೀತಿ ಪರಿಣಾಮ ಬೀಳುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us