Advertisment

BIG BOSS: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಪವಿ ಪೂವಪ್ಪ ಯಾರು? ನೀತುಗೂ ಇವ್ರಿಗೂ ಇರೋ ಕನೆಕ್ಷನ್ ಏನು?

author-image
admin
Updated On
BIG BOSS: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಪವಿ ಪೂವಪ್ಪ ಯಾರು? ನೀತುಗೂ ಇವ್ರಿಗೂ ಇರೋ ಕನೆಕ್ಷನ್ ಏನು?
Advertisment
  • ಬಿಗ್‌ಬಾಸ್‌ ಮನೆಯ ಸದಸ್ಯರಿಗೆ ಇನ್ನೂ ಅರ್ಧ ಜರ್ನಿ ಬಾಕಿ ಇದೆ
  • ಹೇಳಿ ಕೇಳಿ ಇವರೊಬ್ಬರು ಸೂಪರ್ ಪ್ರೊಫೆಷನಲ್ ಮಾಡಲ್!
  • ಗ್ಲಾಮರಸ್ ಹುಡುಗಿ ಜೊತೆ ಹ್ಯಾಂಡಸಮ್ ಆಸ್ತಿಕ್ ಅವಿನಾಶ್ ಶೆಟ್ಟಿ

ಬಿಗ್‌ಬಾಸ್ ಸೀಸನ್ 10ರ ಆಟ ಬದಲಾಗಿದೆ. ಬಿಗ್ ಮನೆಯ ಆಟ 50 ದಿನಗಳನ್ನ ದಾಟಿ ಯಶಸ್ವಿಯಾಗಿ ಮುನ್ನುಗುತ್ತಿದೆ. ಬಿಗ್‌ಬಾಸ್‌ ಮನೆಯ ಸದಸ್ಯರಿಗೆ ಇನ್ನೂ ಅರ್ಧ ಜರ್ನಿ ಬಾಕಿ ಇದೆ. ಎಲ್ಲರ ಕ್ಯಾಲ್‌ಕುಲೇಷನ್ಸ್ ಬದಲಾಗುವಷ್ಟರಲ್ಲೇ ಡಬಲ್ ಸರ್​ಪ್ರೈಸ್ ಸಿಕ್ಕಿದೆ. ಬಿಗ್‌ಬಾಸ್‌ ಮನೆಗೆ ಡಬಲ್‌ ವೈಲ್ಡ್ ಕಾರ್ಡ್‌ನಲ್ಲಿ ಸ್ಪರ್ಧಿಗಳು ಎಂಟ್ರಿಯಾಗಿದ್ದು, ಕುತೂಹಲ ಕೂಡ ಡಬಲ್ ಆಗಿದೆ.

Advertisment

publive-image

ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಸದ್ಯ ಇಬ್ಬರಿಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಸಿಕ್ಕಿದೆ. ಮೊದಲನೆಯವರು ಮಾಡಲ್ ಪವಿ ಪೂವಪ್ಪ. ಎರಡನೇಯವ್ರು ನಟ, ಕ್ರಿಕೆಟರ್ ಆಸ್ತಿಕ್ ಅವಿನಾಶ್ ಶೆಟ್ಟಿ. ಮನೆಯಿಂದ ನಿನ್ನೆಯಷ್ಟೇ ನೀತು ವನಜಾಕ್ಷಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ನೀತು ಆಟ ಮುಗಿಸಿ ಹೊರಗೆ ಬಂದ ಬೆನ್ನಲ್ಲೇ ಇಬ್ಬರ ವೈಲ್ಡ್ ಕಾರ್ಡ್​ ಎಂಟ್ರಿಯಾಗಿದೆ. ಅದ್ರಲ್ಲಿ ಒಬ್ಬರಾದ ಪವಿ ಪೂವಪ್ಪ ಅವರು ನೀತು ಆತ್ಮೀಯ ಗೆಳತಿ.

publive-image

ಬಿಗ್‌ ಮನೆಯಲ್ಲಿ ಎಲ್ಲಾ ಕ್ಯಾಟಗರಿ ಕೂಡ ಬಹಳ ಮುಖ್ಯ ಆಗುತ್ತೆ. ಮನೆಯಲ್ಲಿ ಇದ್ದ ಗ್ಲಾಮರಸ್ ಹುಡುಗಿ ನೀತು ಎಲಿಮಿನೇಟ್ ಆಗಿದ್ದಾರೆ. ಅವರ ಹಿಂದೆಯೇ ಅವರ ಸ್ನೇಹಿತೆ ಪವಿ ಎಂಟ್ರಿಯಾಗಿದ್ದಾರೆ. ಹೇಳಿ ಕೇಳಿ ಇವರೊಬ್ಬರು ಸೂಪರ್ ಪ್ರೊಫೆಷನಲ್ ಮಾಡಲ್.

publive-image

ಗ್ಲಾಮರಸ್​ ಹುಡುಗಿಯ ಎಂಟ್ರಿಯಾಗಿದೆ. ಇದೀಗ ಮನೆಯ ಇಕ್ವೆಷನ್ಸ್ ಕಂಪ್ಲೀಟ್ ಬದಲಾಗಲಿದೆ. ಗ್ಲಾಮರಸ್ ಹುಡುಗಿ ಜೊತೆ ಹ್ಯಾಂಡಸಮ್ ಹಂಕ್ ಆಸ್ತಿಕ್ ಅವಿನಾಶ್ ಶೆಟ್ಟಿ ಕರವಾಳಿ ಹುಡುಗನ ಖಡಕ್ ಎಂಟ್ರಿಯಾಗಿದೆ. ಈ ವೈಲ್ಟ್ ಕಾರ್ಡ್​ ಸ್ಪರ್ಧಿಗಳು ಮನೆಯಲ್ಲಿ ಮೇಜರ್ ಬದಲಾವಣೆ ತರೋದ್ರಲ್ಲಿ ನೋ ಡೌಟ್ ಅಂತಿದ್ದಾರೆ ಬಿಗ್‌ಬಾಸ್‌ ವೀಕ್ಷಕರು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment