ತನ್ನ ನೋವನ್ನು ನಟಿ ತಾರಾ ಮುಂದೆ ತೋಡಿಕೊಂಡ ಪ್ರತಾಪ್
ಮದುವೆ ಆಗೋ ತಂಗಿ ಇದ್ದಾಳೆ, ನನಗೂ ಜವಾಬ್ದಾರಿ ಅನ್ನೋದಿದೆ!
ಡ್ರೋನ್ ಪ್ರತಾಪ್ಗೆ ಒಬ್ಬ ತಾಯಿಯಾಗಿ ಧೈರ್ಯ ತುಂಬಿದ ತಾರಾ
ಬಿಗ್ಬಾಸ್ ಮನೆ ಎನ್ನುವುದು ಆಟಕ್ಕೆ ಮಾತ್ರ ಸೀಮಿತ ಅಲ್ಲವೇ ಅಲ್ಲ. ಅದು ವ್ಯಕ್ತಿತ್ವಗಳನ್ನು ಅನಾವರಣಗೊಳಿಸೋ ರಿಯಾಲಿಟಿ ಶೋ. ಇದು ಬೇರೆ ಪ್ರಪಂಚದ ಜೊತೆ ಸಂಬಂಧಗಳನ್ನು ಬೆಸೆಯುತ್ತಾ ಫ್ಯಾಮಿಲಿ ನೆನೆದು ಕಣ್ಣೀರು ಇಡುತ್ತಾರೆ. ವಿಪರೀತ ಜಗಳ, ಕಣ್ಣು ಒದ್ದೆ ಆಗುವಷ್ಟು ನಗು, ಮನಸು ಭಾರವಾಗುಷ್ಟು ದುಖಃ ಹೀಗೆ ಇದೆಲ್ಲದರ ಮಿಶ್ರಣವೇ ಬಿಗ್ಬಾಸ್.
ನಟಿ ತಾರಾ ಅವರ ಆಗಮನದಿಂದ ಬಿಗ್ ಮನೆಯಲ್ಲಿ ನಿನ್ನೆ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಮನೆಯ ಸದಸ್ಯರೆಲ್ಲ ತುಂಬು ಹೃದಯದಿಂದ ತಾರಾ ಅವರಿಗೆ ಅತಿಥಿ ಸತ್ಕಾರ ಮಾಡಿದರು. ಎಲ್ಲರನ್ನು ಮಾತನ್ನಾಡಿಸಿದ ತಾರ ಅವರು ಪ್ರತಾಪ್ ಪಕ್ಕದಲ್ಲೇ ಕುಳಿತು ಒಬ್ಬ ತಾಯಿಯಾಗಿ ಧೈರ್ಯ ಹೇಳಿ ಬೆನ್ನು ತಟ್ಟಿದ್ದಾರೆ.
ತಾರಾ ಅವರು ಕೇಳುತ್ತಿದ್ದ ಪ್ರಶ್ನೆಗಳಿಗೆ ಅವರ ಬಾಂಧವ್ಯಕ್ಕೆ ಪ್ರತಾಪ್ ಭಾವುಕರಾದರು. ಇಂತಹ ದೊಡ್ಡ ಬಿಗ್ ಬಾಸ್ ವೇದಿಕೆಯನ್ನು ಅಚ್ಚುಕಟ್ಟಾಗಿ ಬಳಸಿಕೋ, ಯಾಕೆ ಮಾತಾಡದೇ ಮಂಕಾಗಿ ಇರುತ್ತೀಯಾ, ಯಾವುದಕ್ಕೂ ಹೆದರಬೇಡ ಎಂದು ಪ್ರತಾಪ್ಗೆ ತಾರಾ ಅವರು ಪ್ರೋತ್ಸಾಹ ಮಾತಿನಿಂದ ಶಕ್ತಿ ತುಂಬಿದರು.
ಇದಕ್ಕೆ ಉತ್ತರಿಸಿದ ಪ್ರತಾಪ್ ನನ್ನ ಫ್ಯಾಮಿಲಿ ತುಂಬಾ ನೆನಪಾಗುತ್ತಿದೆ. ಅಮ್ಮ, ಅಪ್ಪ, ತಂಗಿ ಇವರೆಲ್ಲ ಫೋನ್ ನಂಬರ್ ಬ್ಲಾಕ್ ಮಾಡಿದ್ದೀನಿ. ಮನೆಯಲ್ಲಿ ಗೃಹಪ್ರವೇಶ ಇದ್ದರೂ ಹೋಗೋಕೆ ಆಗಿಲ್ಲ. ಇಡೀ ಫ್ಯಾಮಿಲಿ ನನ್ನಿಂದ ತುಂಬಾನೆ ನೊಂದುಕೊಂಡಿದೆ. 2 ಕಂಪನಿಗಳಿದ್ದು ಅದನ್ನು ಬೆಳಸಬೇಕು. ಈ ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಸಂಬಂಧಿಗಳು ಊಟದಲ್ಲಿ ವಿಷಹಾಕಿ ಸಾಯಿಸು ಎಂದು ಹೇಳಿದ್ದಾರೆ. ಹಲವು ಕಾರಣಗಳಿಂದ ತುಂಬಾ ಅವಮಾನಗಳನ್ನು ಅನುಭವಿಸಿದ್ದೇನೆ. ನನಗೂ ಕಷ್ಟಗಳಿದ್ದು ಮದುವೆ ಆಗಬೇಕಿರೋ ತಂಗಿ ಇದ್ದಾಳೆ ಎಂದು ಪ್ರತಾಪ್ ನಟಿಯ ಮುಂದೆ ಮನಬಿಚ್ಚಿ ಮಾತಗಳನ್ನಾಡಿದ್ದಾರೆ.
ಪ್ರತಾಪ್ ಈ ಮೊದಲೇ ಆದಂತಹ ಕೆಲವೊಂದು ಘಟನೆಗಳಿಂದ ಜೀವನದಲ್ಲಿ ತುಂಬಾನೆ ಅವಮಾನಗಳನ್ನ ಹೆದರಿಸಿರುವುದಂತೂ ಸತ್ಯ ಎಂಬುದು ಎಪಿಸೋಡ್ನಲ್ಲಿ ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ