ಅಷ್ಟಕ್ಕೂ ಸಂಗೀತಾ ಮತ್ತು ತನಿಷಾ ಮುನಿಸಿಕೊಂಡಿರೋದು ಯಾಕೆ?
ಬಿಗ್ ಬಾಸ್ ಮನೆಯಲ್ಲಿ ಬೆಸ್ಟ್ ಫ್ರೆಂಡ್ಸ್ ಆಗಿದ್ದ ಸಂಗೀತಾ ಮತ್ತು ತನಿಷಾ
ಕಳೆದ ವಾರ ಕಿಚ್ಚ ಸುದೀಪ್ ತಿಳಿ ಹೇಳಿದ್ದರು ಇಬ್ಬರ ನಡುವೆ ಮುನಿಸು
ಬಿಗ್ಬಾಸ್ ಅನ್ನೋ ರಿಯಾಲಿಟಿ ಶೋನಲ್ಲಿ ಸಂಬಂಧಗಳು, ಫ್ರೆಂಡ್ಶಿಪ್ನ ಉಳಿಸೊಕೊಳ್ಳೋದು ದೊಡ್ಡ ಸವಾಲೇ ಸರಿ. ಏಕೆಂದರೆ, ಒಂದು ಕಾಂಪಿಟೇಷನ್ ಮಧ್ಯೆ ಸಂಬಂಧಗಳನ್ನ ಉಳಿಸಿಕೊಂಡು ಗೆದ್ದು ಹೊರಗೆ ಬರೋದು ಕಷ್ಟ.
ಈ ಸೀಸನ್ನಲ್ಲಿ ಮನೆಯೊಳಗೆ ತನಿಷಾ ಮತ್ತು ಸಂಗೀತಾ ಮೊದಲ ವಾರದಿಂದಲೂ ಬೆಸ್ಟ್ ಫ್ರೆಂಡ್ಸ್. ಆದ್ರೆ, ಅದ್ಯಾಕೋ ಗೊತ್ತಿಲ್ಲ ಇಬ್ಬರ ನಡುವೆ ದೊಡ್ಡ ಕನ್ಫ್ಯೂಷನ್ಸ್ನಿಂದ ಫ್ರೆಂಡ್ಶಿಪ್ ಮುರಿದುದೆ. ತನ್ನ ಫ್ರೆಂಡ್, ನನ್ನನ್ನು ಸೇವ್ ಮಾಡೋ ಅವಕಾಶ ಇದ್ದಾಗ ಮಾಡಿಲ್ವಲ್ಲ ಅನ್ನೋ ಬೇಸರ ಸಂಗೀತಾಗೆ ಕಳೆದ ವಾರ ತುಂಬಾನೆ ಕಾಡಿತ್ತು. ಈ ವಿಚಾರವಾಗಿ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ತಿಳಿ ಹೇಳಿದ್ದರು. ಆದ್ರೆ, ವೀಕೆಂಡ್ ಆದ ಬಳಿಕ ಇಬ್ಬರ ಬಾಂಧವ್ಯ ಅಷ್ಟೇನೂ ಬೆಸೆಯಲಿಲ್ಲ. ಹೋದ ವಾರದ ಸಂಗತಿಗಳನ್ನು ತಲೆಯಲ್ಲಿಟ್ಟುಕೊಂಡು ಸಂಗೀತಾ ಈ ವಾರ ಕೂಡ ಮುಂದುವರೆಯುತ್ತಿದ್ದಾರೆ.
ವೈಯಕ್ತಿಕ ಕಾರಣಾಂತರಗಳಿಂದ ಸಂಗೀತಾ ಖುದ್ದು ಮೊದಲ ಬಾರಿ ನಾಮಿನೇಷನ್ ಪಟ್ಟಿಯಲ್ಲಿ ತನಿಷಾ ಹೆಸರನ್ನ ಆಯ್ಕೆ ಮಾಡಿದ್ದಾರೆ. ಇದೇ ರೀತಿ ತನಿಷಾ ಕೂಡ ಸಂಗೀತಾಗೆ ಪ್ರತ್ಯುತ್ತರ ನೀಡೋ ಮೂಲಕ ನಾಮಿನೇಷನ್ ಮಾಡಿದ್ದಾರೆ. ಈ ಇಬ್ಬರ ಮಧ್ಯೆ ಬೇಸರ ತಣ್ಣಗಾಗದೇ ಕೋಪವಂತೂ ಬೆಂಕಿಯಂತೆ ಧಗಧಗಿಸುತ್ತಿದೆ.
ಮೇಲ್ನೋಟಕ್ಕೆ ವೀಕೆಂಡ್ನ ನಂತರದಲ್ಲಿ ಸಂಗೀತಾ ಹಾಗೂ ತನಿಷಾ ಮೊದಲಿನ ತರ ಮಾತಾಡುತ್ತಿಲ್ಲ ಅನ್ನೋದು ಸ್ಪಷ್ಟವಾಗಿ ಕಾಣ್ತಿದೆ. ಈ ಎಲ್ಲ ಗೊಂದಲಗಳಿಗೆ ಇಬ್ಬರು ಕೂತು ಮಾತಾಡಿ ಸರಿ ಮಾಡಿಕೊಳ್ತಾರಾ?, ಈ ಒಳ್ಳೆ ಫ್ರೆಂಡ್ಶಿಪ್ನ ಉಳಿಸಿಕೊಳ್ತಾರಾ ಎನ್ನುವುದನ್ನು ಕಾದು ನೋಡ್ಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ