newsfirstkannada.com

ಡ್ರೋನ್​ ಪ್ರತಾಪ್ ಜೊತೆ ಗುದ್ದಾಟ.. ವಿನಯ್, ತುಕಾಲಿ, ಮೈಕಲ್​ಗೆ ಬಿಗ್​ಬಾಸ್ ಖಡಕ್‌ ಎಚ್ಚರಿಕೆ; ಆಗಿದ್ದೇನು?

Share :

31-10-2023

    ನಾಮಿನೇಷನ್ ಆದ ಮೇಲೂ ಪಾಸ್ ಕಸಿದುಕೊಂಡಿದ್ದು ತಪ್ಪಾ.?

    ಬಿಗ್​ ಮನೆಯಲ್ಲಿ 3 ನಾಮಿನೇಷನ್ ಪಾಸ್​ಗಳು ಪ್ರತಾಪ್ ಪಾಲು

    ಈ ವಾರ ನಾಮಿನೇಷನ್​ಗೆ ಯಾರೆಲ್ಲ ಬಲಿಯಾಗಲಿದ್ದಾರೆ ಗೊತ್ತಾ?

ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ನಾಮಿನೇಷನ್ ವಿಚಾರಕ್ಕೆ ಇಡೀ ಮನೆ ದಂಗಾಗಿದೆ. ನಾಮಿನೇಷನ್ ಟಾಸ್ಕ್​ನಲ್ಲಿ ಸ್ಮಾರ್ಟ್​ ಮೂವ್ ಮಾಡಿ ಎಲ್ಲ 4 ಪಾಸ್​ಗಳನ್ನ ಡ್ರೋನ್ ಪ್ರತಾಪ್ ತಮ್ಮ ಪಲಾಗಿಸಿಕೊಂಡಿದ್ದಾರೆ. ಆದ್ರೆ ಒಂದನ್ನ ಕಾರ್ತಿಕ್ ಕಸಿದುಕೊಂಡಿದ್ದಾರೆ. ಇನ್ನೂ 3 ನಾಮಿನೇಷನ್ ಪಾಸ್​ಗಳು ಪ್ರತಾಪ್ ಪಾಲಾಗಿದ್ದರಿಂದ ಅದನ್ನ ಕಾಪಾಡಿಕೊಳ್ಳುವ ಜವಾಬ್ದಾರಿ ಕೂಡ ಅವರದ್ದೇ ಆಗಿದೆ.

ನಾಮಿನೇಷನ್ ಮೊದಲ ಹಂತದ ಮುಕ್ತಾಯದ ಬೆನ್ನಲ್ಲೇ ಸಿಂಕ್ ಹತ್ತಿದ್ದ ಪ್ರತಾಪ್ ನಾಮಿನೇಷನ್ ಪಾಸ್​ ಒಂದನ್ನ ವಿನಯ್ ಕಸಿದುಕೊಳ್ತಾರೆ. ಇದು ತಮಾಷೆಗೆ ಆದ್ರೂ ನಾಮಿನೇಷನ್ ಮೊದಲ ಮುಕ್ತಾಯ ಆದ ಮೇಲೂ ಕಸಿದುಕೊಂಡಿದ್ದು ತಪ್ಪು. ಇನ್ನೂ ಇದೇ ರೀತಿ ಮೈಕಲ್ ಹಾಗೂ ಸಂತೋಷ್, ಪ್ರತಾಪ್ ಅವರಿಂದ ನಾಮಿನೇಷನ್ ಪಾಸ್​ ಅನ್ನು ಕಸಿದುಕೊಳ್ತಾರೆ. ವಿನಯ್ ಇವಾಗ ಬಿಗ್​ಬಾಸ್​ ನಾವು ಆಡಿರೋದು ಒಕೆ ಅಂದ್ರೆ, ಇನ್ಮೇಲೆ ಆಟನೇ ಚೇಂಜ್ ಅಂತ ಬೀಗುತ್ತಿರುವಾಗ ಬಿಗ್​ಬಾಸ್ ವಿನಯ್, ತುಕಾಲಿ, ಮೈಕಲ್ ಮೂವರು ಈ ಪಾಸ್​ನ ಪ್ರತಾಪ್ ಹಿಂದುರಿಗಿಸಬೇಕು.

ಬಿಗ್ ಬಾಸ್ ಮನೆಯಲ್ಲಿ ಜಗಳನಾ?

ನಾಮಿನೇಷನ್ ಮೊದಲ ಹಂತದಲ್ಲಷ್ಟೇ ಕಸಿದುಕೊಳ್ಳೋಕೆ ಹಾಗೂ ಕದಿಯೋಕೆ ಅವಕಾಶ ಇರುತ್ತದೆ. ಬಜರ್ ನಂತರದಲ್ಲಿ ಆ ಪಾಸ್​ಗಳು ಅವರಿಗೆ ಸೇರಿದ್ದು ಪಾಸ್ ಬೇಕೆಂಬುದಿರಲ್ಲ. ಪಾಸ್​ಗಳ ವಾರಸ್ಧಾರರ ಅನುಮತಿ ಮೇರೆಗೆ ನೀವು ಪಾಸ್​ ಪಡೆದುಕೊಳ್ಳಬೇಕು ಈ ಕೂಡಲೇ ಪಾಸ್​ಗಳನ್ನ ಪ್ರತಾಪ್ ಅವ್ರಿಗೆ ಹಿಂದಿರುಗಿಸಿ ಅಂತ ಬಿಗ್​ ಬಾಸ್ ಮುಖಕ್ಕೆ ಹೊಡೆದಂಗೆ ಮೂವರಿಗೆ ಹೇಳಿದ್ದಾರೆ.

ನಾಮಿನೇಷನ್ ಟಾಸ್ಕ್​ನ 2 ಹಂತಗಳು ಮುಕ್ತಾಯಗೊಂಡಿದ್ದು ಇವತ್ತಿನ ಸಂಚಿಕೆಯಲ್ಲಿ ಈ ವಾರ ನಾಮಿನೇಷನ್​ಗೆ ಯಾರೆಲ್ಲ ಬಲಿಯಾಗಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡ್ರೋನ್​ ಪ್ರತಾಪ್ ಜೊತೆ ಗುದ್ದಾಟ.. ವಿನಯ್, ತುಕಾಲಿ, ಮೈಕಲ್​ಗೆ ಬಿಗ್​ಬಾಸ್ ಖಡಕ್‌ ಎಚ್ಚರಿಕೆ; ಆಗಿದ್ದೇನು?

https://newsfirstlive.com/wp-content/uploads/2023/10/DRONE_PRATHAP.jpg

Load More