newsfirstkannada.com

ಬಿಗ್​​ಬಾಸ್​ ಮನೆಯಲ್ಲಿ ಗ್ರೂಪಿಸಂ ಇರೋದು ನಿಜ- ರಕ್ಷಕ್​​ ಬುಲೆಟ್​​​ ಬಿಚ್ಚಿಟ್ರು ಸತ್ಯ

Share :

06-11-2023

    ಮನೆಯೊಳಗೆ ನಡೆಯುತ್ತಿರುವ ಗ್ರೂಪಿಸಮ್ ಬಗ್ಗೆ ಮಾತಾಡಿದ ರಕ್ಷಕ್​

    ನ್ಯೂಸ್​ಫಸ್ಟ್​ ಸಂದರ್ಶನದಲ್ಲಿ ದೊಡ್ಮನೆ ಜರ್ನಿ ಬಗ್ಗೆ ರಕ್ಷಕ್ ಏನಂದ್ರು?

    ಗ್ರೂಪಿಸಮ್ ವಿಚಾರ ಮನೆ ಹೊರಗಡೆ ಯಾಕಿಷ್ಟು ಚರ್ಚೆ ಆಗ್ತಿದೆಯೋ?

ಬಿಗ್​ಬಾಸ್ ಸೀಸನ್-10ರ ಮೊದಲ ಶಾಕಿಂಗ್ ಎಲಿಮಿನೇಷನ್ ಮನೆಯೊಳಗೆ ನಡೆದಿದೆ. ಮೊದಲ ಬಾರಿ ನಾಮಿನೇಟ್ ಆದ ರಕ್ಷಕ್ ಒಂದೇ ಬಾರಿಗೆ ಎಲಿಮಿನೆಟ್​ ಆಗಿ ಆಚೆ ಬಂದಿದ್ದಾರೆ. ಇನ್ನೂ ದೊಡ್ಮನೆ ಜರ್ನಿ ಬಗ್ಗೆ ನ್ಯೂಸ್​ಫಸ್ಟ್​ ಸಂದರ್ಶನದಲ್ಲಿ ಮಾತನಾಡಿರುವ ರಕ್ಷಕ್, ಮನೆಯೊಳಗೆ ನಡೆಯುತ್ತಿರುವ ಗ್ರೂಪಿಸಮ್ ಬಗ್ಗೆ ಮಾತಾಡಿದ್ದಾರೆ.

ಮನೆಯೊಳಗೆ ಮೊದಲನೇ ವಾರದಿಂದಲು 2 ಟೀಮ್​ಗಳನ್ನ ಮಾಡಿಯೇ ಬಿಗ್​ಬಾಸ್ ಟಾಸ್ಕ್​ ಕೊಡುತ್ತಿದ್ದಾರೆ. ಇನ್ನು ಬಂದ ದಿನದಿಂದಲೇ ಶುರುವಾದ ಗ್ರೂಪಿಸಮ್ ಹೋಗ್ತಾ.. ಹೋಗ್ತಾ ಫಾರ್ಮ್ ಆಗಿದ್ದಾವೆ. ಹೀಗಾಗಿ ಮನೆಯಲ್ಲಿ ಯಾಱರಿಗೆ ಯಾಱರು ಕಂಫರ್ಟ್​ ಅನ್ನಿಸುವರೋ ಅವರ ಜೊತೆ ಇದ್ದಾರೆ ಎಂದಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಗಳು

ನಾವು ಟಾಸ್ಕ್​ ವಿಷಯವಾಗಿ ಗುಂಪಿನಲ್ಲಿ ಮಾತಾಡುತ್ತಿದ್ದೇವು ಅಷ್ಟೆ, ಮತ್ತೆ ಯಾರಿಂದಲೂ ಯಾವುದಕ್ಕೂ ಇನ್​ಫ್ಲ್ಯೂನ್ಸ್​ ಆಗುತ್ತಿರಲಿಲ್ಲ. ನಮ್ಮ ಎದುರಾಳಿಯ ಟೀಮ್​ ಹೇಗೆ ಪ್ಲಾನ್ ಮಾಡಿ ಆಟ ಆಡಬೇಕು ಎಂದು ಆಡುತ್ತಿದ್ದರೋ ಹಾಗೆಯೇ ವಿನಯ್ ಟೀಮ್ ಕೂಡ ಪ್ಲಾನ್ ಮಾಡುತ್ತಿತ್ತು. ಆದ್ರೆ, ಈ ಗ್ರೂಪಿಸಮ್ ವಿಚಾರ ಮನೆಯ ಹೊರಗಡೆ ಯಾಕಿಷ್ಟು ಚರ್ಚೆ ಆಗುತ್ತಿದೆಯೋ ನನಗಂತೂ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಆದ್ರೆ, ಗ್ರೂಪ್ ಇರೋದು ನಿಜ. ಅದನ್ನ ಸುಳ್ಳು ಎಂದು ಹೇಳುತ್ತಿಲ್ಲ. ಬಟ್ ಎಲ್ಲ ವಿಚಾರಕ್ಕೂ ಗ್ರೂಪ್​ನಿಂದ ನಾ ಇನ್​ಫ್ಲ್ಯೂನ್ಸ್​ ಆಗಿಲ್ಲ. ಅಲ್ಲಿ ತಗೊಂಡಿರೋದೆಲ್ಲ ನಿರ್ಧಾರಗಳು ನನ್ನ ಸ್ವಂತ ಬುದ್ಧಿಯಿಂದಲೇ ಎಂದು ಹೇಳುವ ಮೂಲಕ ಮನೆಯೊಳಗಿನ ಗ್ರೂಪಿಸಮ್​ ಬಗ್ಗೆ ಮನಬಿಚ್ಚಿ ರಕ್ಷಕ್ ಬುಲೆಟ್ ಮಾತನಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​​ಬಾಸ್​ ಮನೆಯಲ್ಲಿ ಗ್ರೂಪಿಸಂ ಇರೋದು ನಿಜ- ರಕ್ಷಕ್​​ ಬುಲೆಟ್​​​ ಬಿಚ್ಚಿಟ್ರು ಸತ್ಯ

https://newsfirstlive.com/wp-content/uploads/2023/11/BIG_BOSS_Rakshak_Bullet.jpg

Load More