ರಿಯಾಲಿಟಿ ಶೋ ಬಿಗ್ಬಾಸ್ನಲ್ಲಿ ಅವಹೇಳನಕಾರಿ ಪದ ಬಳಕೆ
ಅಖಿಲ ಕರ್ನಾಟಕ ಭೋವಿ ಸಮಾಜದಿಂದ ತನಿಶಾ ವಿರುದ್ಧ ಕೇಸ್
ಇತ್ತೀಚೆಗಷ್ಟೇ ಜೈಲಿಗೆ ಹೋಗಿ ಬಂದಿದ್ದ ವರ್ತೂರು ಸಂತೋಷ್
ಕನ್ನಡದ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್- 10ರಲ್ಲಿ ಇಂದೆಂದಿಗೂ ನಡೆಯದ ತಿರುವುಗಳು ಸದ್ಯ ನಡೆಯುತ್ತಿವೆ. ಬಿಗ್ಬಾಸ್ ಶುರುವಾದಾಗಿನಿಂದ ಸ್ಪರ್ಧಿಗಳ ಒಂದಲ್ಲ ಒಂದು ವೈಯಕ್ತಿಕ ವಿಷಯಗಳು ಹೊರ ಬರುತ್ತಿವೆ. ಹುಲಿ ಉಗುರು ಧರಿಸಿದ್ದಾರೆಂದು ವರ್ತೂರು ಸಂತೋಷ್ ಅರೆಸ್ಟ್ ಆಗಿ ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ವಿನಯ್ ಕೂಡ ಮಹಿಳೆಯರ ಬಗ್ಗೆ ಚೆನ್ನಾಗಿ ಮಾತನಾಡ್ತಿಲ್ಲ ಎನ್ನಲಾಗಿತ್ತು. ಇದರ ಬೆನ್ನಲ್ಲೇ ಸದ್ಯ ಬಿಗ್ಬಾಸ್ ಸ್ಪರ್ಧಿ ತನಿಶಾ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಿಗ್ಬಾಸ್ ಮನೆಯಲ್ಲಿರುವ ಸ್ಪರ್ಧಿ ತನಿಶಾ ಕುಪ್ಪುಂಡ ಅವರು, ಭೋವಿ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಖಾಸಗಿ ವಾಹಿನಿಯೊಂದು ನಡೆಸಿಕೊಡುತ್ತಿರುವ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿ ಪದ ಬಳಕೆ ಮಾಡಿ ಭೋವಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆಂದು ದೂರು ನೀಡಲಾಗಿದೆ.
ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ತನಿಶಾ ಕುಪ್ಪುಂಡ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆಯಡಿ ಅಟ್ರಾಸಿಟಿ ಕೇಸ್ ಅನ್ನು ದಾಖಲು ಮಾಡಲಾಗಿದೆ. ಅಖಿಲ ಕರ್ನಾಟಕ ಭೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ.ಪದ್ಮಾ ಎಂಬುವರು ಈ ದೂರನ್ನು ನೀಡಿದ್ದು ತಕ್ಷಣ ಅವರು ಬಿಗ್ ಬಾಸ್ ಮನೆಯಿಂದ ಹೊರಬರಬೇಕು ಎಂದು ಆಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ