newsfirstkannada.com

×

ಬಿಗ್​ಬಾಸ್​ಗೆ ಹೋಗುವ ಸ್ಪರ್ಧಿಗಳು ಇವರೇನಾ.. ಭೂಮಿಕಾ ಬಸವರಾಜ್ ಹೋಗುವುದು ಫಿಕ್ಸ್​?

Share :

Published September 28, 2024 at 3:10pm

Update September 28, 2024 at 3:23pm

    ಸೀಸನ್​ 11ರಲ್ಲಿ ಯಾರು ಯಾರು ಸ್ಪರ್ಧಿಗಳು ಇರಬಹುದು..?

    ಗ್ರ್ಯಾಂಡ್ ಓಪನಿಂಗ್‌ಗೂ ಮುನ್ನ 5 ಸ್ಪರ್ಧಿಗಳ ಹೆಸರು ರಿವೀಲ್‌!

    ಭೀಮ ಸಿನಿಮಾ ಖ್ಯಾತಿಯ ನಟಿ ಬಿಬಿಕೆ-11​ಗೆ ಹೋಗ್ತಾರಾ?

ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್- 11ಕ್ಕೆ ಆರಂಭವಾಗುವುದಕ್ಕೆ ಇನ್ನೇನು ಒಂದೇ ಒಂದು ದಿನ ಬಾಕಿ ಇದೆ. ಅಂದರೆ ಗಂಟೆಗಳು ಮಾತ್ರ ಉಳಿದಿವೆ. ಕಿಚ್ಚನ ಫ್ಯಾನ್ಸ್​ ಹಾಗೂ ಬಿಗ್​ಬಾಸ್​ ಅಭಿಮಾನಿಗಳಿಗೆ ಸುದೀಪ್ ಜೊತೆ ಬಿಗ್​ಬಾಸ್ ಕಥೆ ನೋಡಲು ಕಾತರದಿಂದಿದ್ದಾರೆ. ಸೀಸನ್ 11ಕ್ಕೆ ಭರ್ಜರಿ ತಯಾರಿ ನಡೆಸಿದ್ದು ಸರ್‌ಪ್ರೈಸ್ ಹೆಸರುಗಳು ಕೇಳಿ ಬರುತ್ತಿವೆ. ಅದರಲ್ಲಿ ಈ ಎರಡು ಹೆಸರು ಇರುವ ಸಾಧ್ಯತೆ ಇದೆ.

ಬಿಗ್‌ಬಾಸ್ ಸ್ಪರ್ಧಿಗಳ ಪೈಕಿ ಯಾರಾದ್ರೂ ಒಬ್ಬರು ಇವರು ಡಿಫರೆಂಟ್‌ ವೆರಿ ವೆರಿ ಡಿಫರೆಂಟೂ ಅನ್ನೋರು ಇದ್ದೇ ಇರುತ್ತಾರೆ. ಈ ಬಾರಿ ಈ ಕ್ಯಾಟಗರಿಯಲ್ಲಿ ಭೀಮ ಸಿನಿಮಾ ಖ್ಯಾತಿಯ ನಟಿ ಆ್ಯಶ್‌ ಮೆಲೋ ಬಿಗ್​ಬಾಸ್​ಗೆ ಹೋಗುತ್ತಾರೆ ಅನ್ನೋ ಸುದ್ದಿಯಿದೆ. ಬಟ್ ಈ ಕುರಿತು ಕನ್ಫರ್ಮ್ ಆಗಿಲ್ಲ.

ಇದನ್ನೂ ಓದಿ: ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು.. ಈ ಬಾರಿ ಶೋಗೂ ಮೊದಲೇ 5 ಸ್ಪರ್ಧಿಗಳ ಹೆಸರು ರಿವೀಲ್!

ಕಾಂಟ್ರೋವರ್ಸಿ ಕ್ಯಾರೆಕ್ಟರ್ ಯಾರು?

ಬಿಗ್‌ಬಾಸ್ ಅಂದ್ರೆ ಕಾಂಟ್ರೋವರ್ಶಿಯಲ್ ಶೋ ಅನ್ನೋದು ಜನಪ್ರಿಯ. ಹೀಗಾಗಿಯೇ, ಈ ಕ್ಯಾಟಗರಿಯಲ್ಲಿ ಯಾರು ಹೋಗುತ್ತಾರೆ ಎಂದು ಗಮನಿಸಿದಾಗ, ಕನ್ಫರ್ಮ್ ಆದ ಹೆಸರು ದಿವ್ಯಾ ವಸಂತ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿವಾದಕ್ಕೆ ಒಳಗಾಗಿರುವ ಗಿಚ್ಚಿಗಿಲಿಗಿಲಿಯ ಈ ನಟಿ, ಬಿಗ್‌ಬಾಸ್‌ಗೆ ಹೋಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆನೂ ನಿಖರ ಮಾಹಿತಿ ಎಲ್ಲೂ ಇಲ್ಲ.

ಅದೇ ರೀತಿ ಕನ್ಫರ್ಮ್ ಆಗದ ಇನ್ನೊಬ್ಬರು ಇದ್ದಾರೆ. ಅವರೇ ಸೋಷಿಯಲ್ ಮೀಡಿಯಾ ಸೆನ್ಸೇಷನ್. ಭೂಮಿಕಾ ಬಸವರಾಜ್‌. ಸದ್ಯ ಎರಡು ಹೆಸರುಗಳು ಕೇಳಿ ಬರುತ್ತಿವೆ. ಈ ಸಲದ ಬಿಗ್​ ಬಾಸ್​ ಸೀಸನ್‌ 11 ಗ್ಲಾಮರಸ್ ಆಗಿ ಮೂಡಿ ಬರಬಹುದು ಎಂದು ಹೇಳಬಹುದು. ಕನ್ನಡದ ಬಿಗ್​ಬಾಸ್ ಸೀಸನ್-​ 11ರ ಕುರಿತು ಹೊಸ ಹೊಸ ಅಪ್​ಡೇಟ್​ಗಳು ಹೊರಬೀಳುತ್ತಿವೆ. ಇದು ಬಿಗ್​​ಬಾಸ್​ ಸುಗ್ಗಿ ಕಾಲ. ಸೆಪ್ಟೆಂಬರ್ 29ರ ಸಂಜೆ 6 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಪಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ಬಾಸ್​ಗೆ ಹೋಗುವ ಸ್ಪರ್ಧಿಗಳು ಇವರೇನಾ.. ಭೂಮಿಕಾ ಬಸವರಾಜ್ ಹೋಗುವುದು ಫಿಕ್ಸ್​?

https://newsfirstlive.com/wp-content/uploads/2024/09/SUDEEP-3.jpg

Load More