2020ರಲ್ಲಿ ವರ್ತೂರು ಸಂತೋಷ್ ಮದುವೆ ಅದ್ಧೂರಿಯಾಗಿ ನಡೆದಿತ್ತು
ಬಿಗ್ ಮನೆಯ ವರ್ತೂರು ಸಂತೋಷ್ ಬಾಯಲ್ಲಿ ಬರೋದೆಲ್ಲ ಸುಳ್ಳು..!
ವರ್ತೂರು ಸಂತೋಷ್ ಮದುವೆ ಆಗಿಲ್ಲ ಅಂತಾ ಎಲ್ಲೂ ಹೇಳೇ ಇಲ್ಲ!
ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ವಿಚಾರದಲ್ಲಿ ಮತ್ತೊಂದು ಶಾಕಿಂಗ್ ಸಂಗತಿ ಹೊರ ಬಿದ್ದಿದೆ. ಹುಲಿ ಉಗುರು ಕೇಸ್‌ನಿಂದಾಗಿ ಜೈಲು ಸೇರಿದ್ದ ಸಂತೋಷ್ ಬಗ್ಗೆ ನ್ಯೂಸ್ ಫಸ್ಟ್ ಮತ್ತೊಂದು ಸ್ಫೋಟಕ ಸುದ್ದಿಯನ್ನು ಬಿಚ್ಚಿಡ್ತಿದೆ. ಸಂತೋಷ್ಗೆ ಈಗಾಗಲೇ ಮದುವೆ ಆಗಿದೆ, ಸಾಲದ್ದಕ್ಕೆ ಒಂದು ಮಗುವೂ ಇದೆ ಅನ್ನೋ ಮಾಹಿತಿ ಸಿಕ್ಕಿದ್ದು, ಈ ವಿಚಾರವನ್ನ ಅವರು ಮುಚ್ಚಿಟ್ಟಿದ್ಯಾಕೆ ಅನ್ನೋ ಪ್ರಶ್ನೆ ಎದ್ದಿದೆ.
ಸದ್ಯ ರಾಜ್ಯದಲ್ಲಿ ಅದರಲ್ಲೂ ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಿರೋದು ಬಿಗ್ ಬಾಸ್ನಲ್ಲಿರುವ ಹಳ್ಳಿಕಾರ್ ಅಂತಾನೇ ಕರೆಸಿಕೊಳ್ಳುವ ವರ್ತೂರು ಸಂತೋಷ್. ಹುಲಿ ಉಗುರು ಕೇಸ್ನಲ್ಲಿ ಜೈಲಿಗೆ ಹೋಗಿ ಬಂದ ಬೆನ್ನಲ್ಲೇ ವರ್ತೂರು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸದ್ಯ ಬಿಗ್ ಮನೆಯಿಂದ ಹೊರಬರ್ತೇನೆ ಅಂತ ಪಟ್ಟು ಹಿಡಿದು ಮತ್ತಷ್ಟು ಸಂಚಲನ ಸೃಷ್ಟಿಸಿದ್ದಾರೆ. ಇದೆಲ್ಲದರ ನಡುವೆ ವರ್ತೂರು ಸಂತೋಷ್ ಮುಚ್ಚಿಟ್ಟಿದ್ದ ಸುದ್ದಿಯೊಂದು ಹಲ್ಚಲ್ ಎಬ್ಬಿಸಿದೆ.
ವರ್ತೂರು ಸಂತೋಷ್ ಮದುವೆ ಆಗಿಲ್ಲ ಅಂತಾನೇ ಎಲ್ಲಾ ಭಾವಿಸಿದ್ದಾರೆ. ಆದ್ರೆ ಸಂತೋಷ್ಗೆ 2020 ರ ಮಾರ್ಚ್ 05 ರಂದು ಮದುವೆ ಆಗಿತ್ತು. ಒಬ್ಬಳು ಮಗಳು ಕೂಡ ಇದ್ದಾಳೆ ಅಂತ ವರ್ತೂರು ಸಂತೋಷ್ ಮಾವ ಸೋಮನಾಥ್ ಮಾಹಿತಿ ಬಹಿರಂಗಪಡಿಸಿದ್ದಾರೆ. ಕೇವಲ ಆರೋಪ ಮಾಡಿದ್ದಲ್ಲದೇ ಹೊಸಕೋಟೆ ಬಳಿಯ ಕಾಟಂನಲ್ಲೂರು ಗೇಟ್ ಬಳಿಯ ಕೆ.ಎಂ.ಎಂ ರಾಯಲ್ನಲ್ಲಿ ಮಾಡಿದ ಅದ್ದೂರಿ ಮದುವೆಯ ವಿಡಿಯೋಗಳನ್ನೂ ರಿಲೀಸ್ ಮಾಡಿದ್ದಾರೆ.
ಕೇವಲ ಸಂತೋಷ್ಗೆ ಮದುವೆ ಆಗಿದೆ ಅನ್ನೋ ವಿಚಾರ ಮಾತ್ರವಲ್ಲದೇ ತಮ್ಮ ಮಗಳಿಗೆ ವರ್ತೂರು ಸಂತೋಷ್ ವಿರುದ್ಧ ಹಲವು ಆರೋಪಗಳ ಸುರಿಮಳೆಯನ್ನೇ ಅವರು ಸುರಿಸಿದ್ದಾರೆ.
ವರ್ತೂರು ಮಾವನ ಆರೋಪಗಳೇನು?
ಇನ್ನು ಸೋಮನಾಥ್ ಆರೋಪಗಳನ್ನು ಸಂತೋಷ್ ಸೋದರತ್ತೆ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಸಂತೋಷ್ ಏಳಿಗೆ ಸಹಿಸದೆ ಸುಳ್ಳು ಆರೋಪಗಳನ್ನ ಮಾಡ್ತಿದ್ದಾರೆ. ತಾಯಿಯನ್ನ ಬಿಟ್ಟು ಮನೆ ಅಳಿಯನಾಗಿ ಬರಬೇಕೆಂದು ಸೋಮನಾಥ್ ಅವರು ಕಂಡೀಷನ್ ಹಾಕ್ತಾ ಇದ್ರು. ಆಗಲ್ಲ ಅಂದಿದ್ದಕ್ಕೆ ಮಗಳನ್ನ ಕರ್ಕೊಂಡು ಹೋಗಿದ್ದಾರೆ.
ಪ್ರಿಯಾಂಕಾ ವರ್ತೂರು, ಸಂತೋಷ್ ಸೋದರತ್ತೆ
ವರ್ತೂರು ಸಂತೋಷ್ಗೆ ಸಂಕಷ್ಟದ ಮೇಲೆ ಸಂಕಷ್ಟಗಳು ಬರತೊಡಗಿವೆ. ಹುಲಿ ಉಗುರು ಪರಚಿದ ಬೆನ್ನಲ್ಲೇ ಈಗ ಮದುವೆ ರಹಸ್ಯ ಬಯಲಾಗಿರೋದು ಸಂತೋಷ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಸಂತೋಷ್ ಮದುವೆ ಆಗಿಲ್ಲ ಅಂತಾ ಎಲ್ಲೂ ಹೇಳೇ ಇಲ್ಲ ಅನ್ನೋದು ಸಂತೋಷ್ ಮನೆಯವರ ವಾದ. ಆದ್ರೆ ಮದುವೆ ಆಗಿದೆ ಅನ್ನೋದನ್ನೂ ಸಂತೋಷ್ ಎಲ್ಲೂ ಹೇಳ್ಕೊಂಡಿಲ್ಲ ಯಾಕೆ ಅನ್ನೋ ಪ್ರಶ್ನೆಯಂತೂ ಉಳ್ಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ