newsfirstkannada.com

Video: ಆನೆ ಬಂತೊಂದಾನೆ.. ಬಿಗ್‌ಬಾಸ್ ‘ವಿಲನ್‌’ಗೆ ಕ್ಯಾಪ್ಟನ್ ಪಟ್ಟ; ವಿನಯ್ ಆರ್ಭಟಕ್ಕೆ ಸಂಗೀತಾ ಸವಾಲು

Share :

03-11-2023

    ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಪ್ಟನ್ ವಿನಯ್ ಆರ್ಭಟ ಶುರುವಾಯ್ತು

    ವಿನಯ್ ವಿರುದ್ಧ ಕೆಂಡಕಾರುತ್ತಿದ್ದ ಸಂಗೀತಾಗೆ ಈಗ ಹೊಸ ಸವಾಲು

    ನಾಯಿ, ನರಿ ಎಲ್ಲರ ಕಣ್ಣು ಬೀಳದಿರಲಿ ಅಂತ ದೃಷ್ಟಿ ತೆಗೆದ ನೀತು

ಇಷ್ಟು ದಿನ ನಡೆದಿದ್ದೇ ಒಂದು ಆಟ ಇಂದಿನಿಂದ ನಡೆಯೋದೇ ಬೇರೆ. ಕನ್ನಡ ಕಿರುತೆರೆಯ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳ ದಂಗಲ್ ಜೋರಾಗಿದೆ. ಬಿಗ್‌ಬಾಸ್‌ ಮನೆಯಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ವಿನಯ್‌ಗೆ ಕ್ಯಾಪ್ಟನ್ ಪಟ್ಟ ಕಟ್ಟಲಾಗಿದೆ. 5ನೇ ವಾರದಲ್ಲಿ ಇಂದಿನಿಂದ ಬಿಗ್‌ಬಾಸ್ ಮನೆಯಲ್ಲಿ ನಡೆಯೋ ಟಾಸ್ಕ್‌ಗಳು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಪ್ಟನ್‌ ಆಗಿ ಆಯ್ಕೆಯಾದ ವಿನಯ್ ಪಕ್ಕಾ ವಿಲನ್ ರೀತಿಯೇ ಎಂಟ್ರಿ ಕೊಟ್ಟಿದ್ದಾರೆ. ವಿಲನ್ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಆನೆ ಬಂತೊಂದಾನೆ ಡೈಲಾಗ್ ಹೇಳುತ್ತಾ ಸ್ಪರ್ಧಿಗಳ ಎದೆ ಬಡಿತ ಹೆಚ್ಚಿಸಿದ್ದಾರೆ. ವಿನಯ್‌ ಕ್ಯಾಪ್ಟನ್ ಸಿಂಹಾಸನದ ಮೇಲೆ ಕೂತಿದ್ದು, ಕೆಲವರು ವಿಲನ್‌ಗೆ ವಿಲನ್ ಆಗೋದು ಪಕ್ಕಾ ಎನ್ನಲಾಗಿದೆ.

ಬಿಗ್‌ಬಾಸ್‌ ಮನೆಯ ಕ್ಯಾಪ್ಟನ್ ಆದ ವಿನಯ್ ಆರ್ಭಟ ಈಗಾಗಲೇ ಶುರುವಾಗಿದೆ. ನೀತು ಹೊಸ ಕ್ಯಾಪ್ಟನ್‌ಗೆ ನಾಯಿ, ನರಿ ಎಲ್ಲರ ಕಣ್ಣು ಬೀಳದಿರಲಿ ಅಂತ ದೃಷ್ಟಿ ತೆಗೆದಿದ್ದಾರೆ. ಅತ್ತ ನೀತು ದೃಷ್ಟಿ ತೆಗೆಯುತ್ತಿದ್ದರೆ ಸಂಗೀತಾ ವಿನಯ್‌ಗೆ ಸಖತ್ ಸವಾಲು ಹಾಕಿದ್ದಾರೆ.

ಮೊದಲೇ ವಿನಯ್ ವಿರುದ್ಧ ಕೆಂಡಕಾರುತ್ತಿದ್ದ ಸಂಗೀತಾ ಈಗ ಕ್ಯಾಪ್ಟನ್ ಮೇಲೆ ಮತ್ತಷ್ಟು ಕುದಿಯುತ್ತಿದ್ದಾರೆ. ನಾವು ಆನೆ ವಿರೋಧಿಗಳು ಅಲ್ಲ.. ನಾವು ಆನೆಗೆ ಹೆದರೋದು ಇಲ್ಲ ಅಂತ ಸವಾಲು ಹಾಕಿದ್ದಾರೆ. ವಿನಯ್ ಕ್ಯಾಪ್ಟನ್ ಆಗುವುದರೊಂದಿಗೆ ಬಿಗ್‌ಬಾಸ್‌ ಮನೆಯ ಚಿತ್ರಣವೇ ಬದಲಾಗಿದೆ. ಇಂದಿನಿಂದ ವಿನಯ್ ಆರ್ಭಟ ಹೇಗಿರುತ್ತೆ. ಕ್ಯಾಪ್ಟನ್‌ ವಿನಯ್‌ಗೆ ಕೌಂಟರ್ ಕೊಡೋದು ಯಾರು ಅನ್ನೋದು ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಆನೆ ಬಂತೊಂದಾನೆ.. ಬಿಗ್‌ಬಾಸ್ ‘ವಿಲನ್‌’ಗೆ ಕ್ಯಾಪ್ಟನ್ ಪಟ್ಟ; ವಿನಯ್ ಆರ್ಭಟಕ್ಕೆ ಸಂಗೀತಾ ಸವಾಲು

https://newsfirstlive.com/wp-content/uploads/2023/11/Vinay-Sangeeta.jpg

Load More