Bigg Boss: ಬಾಲಕ ಕೇಳಿದ ಪ್ರಶ್ನೆಗೆ ನಿಗೂಢ ನಗು​; ಕಿಚ್ಚ ಸುದೀಪ್​ ಇರ್ತಾರಾ ಅನ್ನೋದಕ್ಕೆ ಇದೇ ಸಾಕ್ಷಿ!

author-image
Veena Gangani
Updated On
Bigg Boss: ಬಾಲಕ ಕೇಳಿದ ಪ್ರಶ್ನೆಗೆ ನಿಗೂಢ ನಗು​; ಕಿಚ್ಚ ಸುದೀಪ್​ ಇರ್ತಾರಾ ಅನ್ನೋದಕ್ಕೆ ಇದೇ ಸಾಕ್ಷಿ!
Advertisment
  • ಈ ಬಾರಿಯ ಬಿಗ್​ಬಾಸ್​ ನಿರೂಪಣೆ ಯಾರು ವಹಿಸಿಕೊಳ್ಳುತ್ತಾರೆ?
  • ಬಹು ನಿರೀಕ್ಷಿತ ಕನ್ನಡದ ಬಿಗ್​ಬಾಸ್ 11 ಆರಂಭಕ್ಕೆ ದಿನಗಣನೆ ಶುರು
  • ಪ್ರೋಮೋ ನೋಡಿದ ವೀಕ್ಷಕರಲ್ಲಿ ಮನಸ್ಸಲ್ಲಿ ಮನೆ ಮಾಡಿದ ಗೊಂದಲ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಶುರುವಾಗೋದಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ಗುಂಗಿನಲ್ಲಿದ್ದ ವೀಕ್ಷಕರು ಸಖತ್​ ಖುಷ್​ ಆಗಿದ್ದಾರೆ. ಏಕೆಂದರೆ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11ರ ಎರಡನೇ ಪ್ರೋಮೋ ರಿಲೀಸ್ ಆಗಿದೆ. ಹೊಸ ಸೀಸನ್ ಪ್ರಾರಂಭಕ್ಕೆ ಬಿಗ್​ಬಾಸ್​ ತಂಡ ತೆರೆ ಮರೆ ಹಿಂದೆ ತಯಾರಿ ನಡೆಯುತ್ತಿದೆ.

ಇದನ್ನೂ ಓದಿ:ಈ ಬಾರಿ ಇನ್ನೂ ದೊಡ್ಡದು ಕಾದಿದೆ.. ಬಿಗ್​​ಬಾಸ್​​​ ಸೀಸನ್​​ 11 ಬಗ್ಗೆ ಬಿಗ್​ ಅಪ್ಡೇಟ್​​ ಕೊಟ್ಟ ಕಲರ್ಸ್​​ ಕನ್ನಡ ಪ್ರೋಮೋ!

publive-image

ನಿನ್ನೆ ಕಲರ್ಸ್​ ಕನ್ನಡ ತನ್ನ ಅಧಿಕೃತ ಖಾತೆಯಲ್ಲಿ ಬಿಗ್​ಬಾಸ್​​ ಎರಡನೇ ಪ್ರೋಮೋ ಬಿಡುಗಡೆ ಮಾಡಿದೆ. ಆದರೆ ರಿಲೀಸ್ ಮಾಡಿದ ಪ್ರೋಮೋದಲ್ಲಿ ಇದು ಬಿಗ್​ಬಾಸ್​.. ನಮಸ್ಕಾರ ಕರ್ನಾಟಕ.. ಹೇಗಿದ್ದೀರಾ? 10 ವರ್ಷದಿಂದ ನೋಡ್ತಾನೇ ಇದ್ದೀರಾ. ಇದು ದೊಡ್ಡದಾಗುತ್ತಲೇ ಇದೆ. ಈ ಬಾರಿ ಇನ್ನೂ ದೊಡ್ಡದು ಕಾದಿದೆ. ಏಕೆಂದರೆ ಇದು ಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯ ಅಂತಾ ಬಿಗ್​ಬಾಸ್​ ವಾಯ್ಸ್​ ನೋಟ್​ ಬಂದಿದೆ. ಆದರೆ ಇದೇ ವೇಳೆ ಪುಟ್ಟ ಬಾಲಕ ಌಂಕರ್​ ಕೂಡ ಹೊಸಬರ ಅಂತ ಕೇಳುತ್ತಾನೆ. ಇದಕ್ಕೆ ಎಲ್ಲರೂ ಶಾಕ್​ ಆಗುತ್ತಾರೆ. ಆದರೆ ಬಿಗ್​ಬಾಸ್ ನಿಗೂಢವಾಗಿ​ ನಕ್ಕಿದ್ದಾರೆ.

publive-image

ಇದೇ ಪ್ರೋಮೋ ನೋಡಿದ ಅಭಿಮಾನಿಗಳ ಮನಸ್ಸಲ್ಲಿ ಗೊಂದಲ ಮನೆ ಮಾಡಿದೆ. ಕಿಚ್ಚ ಸುದೀಪ್ ಸರ್ ಮಾತ್ರ ಆ್ಯಂಕರ್ ಆಗಬೇಕು, ಕಿಚ್ಚ ಬಾಸ್​ಗಾಗಿ ವೈಟಿಂಗ್​, ಕಿಚ್ಚ ಸುದೀಪ್ ಇಲ್ಲ ಅಂದ್ರೆ ನಾವು ಬಿಗ್​ಬಾಸ್​ ನೋಡೋಲ್ಲ, ಬಿಗ್​ಬಾಸ್​ ನಡೆಸೋ ತಾಕತ್ತು ಸುದೀಪ್ ಸರ್​ಗೆ ಮಾತ್ರ ಇರೋದು ಅಂತ ಕಾಮೆಂಟ್ಸ್​ ಹಾಕಿದ್ದಾರೆ. ಸದ್ಯ ಮುಂದಿನ ದಿನಗಳಲ್ಲಿ ಬಿಗ್​ಬಾಸ್​ ನಗುವಿನ ಹಿಂದೆ ಏನಿದೆ ಎಂದು ಕಾದು ನೋಡಬೇಕಿದೆ.

ವಿಶೇಷ ಎಂದರೆ ಪ್ರತಿ ಸೀಸನ್​ನಲ್ಲಿ ಭಿನ್ನ ವಿಭಿನ್ನವಾಗಿರೋ ಲೋಗೋಗಳು ಅನಾವರಣ ಆಗುತ್ತಲೇ ಇರುತ್ತೆ. ಆದರೆ ಈ ಬಾರಿಯ ಬಿಗ್​​ಬಾಸ್​ ಲೋಗೋದಲ್ಲಿ ಒಂದು ಕಡೆ ಬೆಂಕಿ, ಮತ್ತೊಂದು ಕಡೆ ನೀರು ಇದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಅಂದರೆ ಬಿಗ್​ಬಾಸ್ ಮನೆಯೊಳಗೆ ಸ್ಪರ್ಧಿಗಳ ಆಕ್ರೋಶ, ಜಗಳ, ಕಿತ್ತಾಟ, ಕಣ್ಣೀರು, ಭಾವನಾತ್ಮಕ ನಂಟಿನ ಸಾರವನ್ನು ಹೇಳ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment