newsfirstkannada.com

BREAKING: ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ.. ಸಾಹಿತಿ, ನಿರ್ಮಾಪಕ ಸಿ.ವಿ.ಶಿವಶಂಕರ್ ಇನ್ನಿಲ್ಲ

Share :

27-06-2023

  ಕನ್ನಡದ ಹಲವು ಸೂಪರ್ ಹಿಟ್ ಹಾಡುಗಳ ಸಾಹಿತಿ ನಿಧನ

  ಮನೆ ಕಟ್ಟಿ ನೋಡು ಸಿನಿಮಾ ನಿರ್ಮಾಪಕ ಸಿ.ವಿ.ಶಿವಶಂಕರ್

  ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅದ್ಭುತ ಪ್ರತಿಭೆ ಇನ್ನಿಲ್ಲ

ಬೆಂಗಳೂರು: ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ.. ಬೆಳೆದೆ ನೋಡ ಬೆಂಗಳೂರ ನಾಡ ಹಾಗೂ ಇನ್ನಷ್ಟು ಸೂಪರ್ ಹಿಟ್ ಹಾಡುಗಳನ್ನು ಬರೆದ ಸಾಹಿತಿ ಸಿ.ವಿ.ಶಿವಶಂಕರ್ ನಿಧನರಾಗಿದ್ದಾರೆ. ಕನ್ನಡ ಚಿತ್ರ ನಿರ್ಮಾಪಕರು, ಸಹ ನಿರ್ದೇಶಕಾಗಿಯೂ ಕೆಲಸ ಮಾಡಿರುವ ಹಿರಿಯ ಕಲಾವಿದರು ಇಂದು ಮಧ್ಯಾಹ್ನ ಹೃದಯಾಘಾತಕ್ಕೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಸಾಹಿತಿ ಸಿ.ವಿ ಶಿವಶಂಕರ್ ಅವರು ನಿರ್ದೇಶಕ, ಸಹನಿರ್ದೇಶಕರಾಗಿ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಮನೆ ಕಟ್ಟಿ ನೋಡು‌, ಪದವೀಧರ, ಹೊಯ್ಸಳ, ಮಹಾತಪಸ್ವಿ, ವೀರಮಹಾದೇವ, ಕನ್ನಡ ಕುವರ ಸೇರಿದಂತೆ ಅನೇಕ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. ನಟಿ ಲೀಲಾವತಿ ಅವರ ಮನೆಯಲ್ಲಿ ನಡೆದ ಔತಣ ಕೂಟದಲ್ಲಿ ಸಿ.ವಿ ಶಿವಶಂಕರ್ ಅವರು ಕೊನೆಯ ಬಾರಿ ನ್ಯೂಸ್ ಫಸ್ಟ್ ಜೊತೆ ಮಾತನಾಡಿದ್ರು.

ಬಾಲನಟರಾಗಿ ರಂಗಭೂಮಿ ಪ್ರವೇಶಿಸಿದ ಸಿ.ವಿ ಶಿವಶಂಕರ್ ಅವರು ಸ್ಕೂಲ್ ಮಾಸ್ಟರ್, ರತ್ನಗಿರಿ ರಹಸ್ಯ, ಕೃಷ್ಣಗಾರುಡಿ, ಧರ್ಮವಿಜಯ, ರತ್ನಮಂಜರಿ, ಆಶಾಸುಂದರಿ ಇತ್ಯಾದಿ ಚಿತ್ರಗಳಲ್ಲಿ ಪಾತ್ರ ನಿರ್ವಹಿಸುವುದರಲ್ಲದೆ ಸಾಹಿತ್ಯ ರಚನೆ ಮಾಡಿದ್ದಾರೆ. ಹಿರಿಯ ನಿರ್ದೇಶಕರ ಬಳಿ ಸಹ ನಿರ್ದೇಶಕರಾಗಿ ದುಡಿದು ಮನೆ ಕಟ್ಟಿ ನೋಡು ಚಿತ್ರವನ್ನು ಸ್ವತಂತ್ರವಾಗಿ ನಿರ್ದೇಶಿಸಿದರು. ಇವರು ಪದವೀಧರ, ನಮ್ಮ ಊರು, ಮಹಡಿಯ ಮನೆ, ಹೊಯ್ಸಳ, ಮಹಾತಪಸ್ವಿ, ವೀರಮಹಾದೇವ, ಕನ್ನಡ ಕುವರ ಮುಂತಾದ ಚಿತ್ರಗಳ ನಿರ್ದೇಶಕರು. ಸಿ.ವಿ ಶಿವಶಂಕರ್ ಅವರಿಗೆ 1991ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ, ಸಿಂಗನಲ್ಲೂರು ಪುಟ್ಟಸ್ವಾಮಯ್ಯ ರಾಜಕುಮಾರ್ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳು ಸಂದಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ.. ಸಾಹಿತಿ, ನಿರ್ಮಾಪಕ ಸಿ.ವಿ.ಶಿವಶಂಕರ್ ಇನ್ನಿಲ್ಲ

https://newsfirstlive.com/wp-content/uploads/2023/06/C-V-Shivashankar.jpg

Load More