/newsfirstlive-kannada/media/post_attachments/wp-content/uploads/2024/11/ashvini2.jpg)
ಕಿರುತೆರೆಯ ಮೋಸ್ಟ್ ಫೇವರೇಟ್ ಸೀರಿಯಲ್ ಆಗಿ ಉಳಿದುಕೊಂಡಿತ್ತು ಗಟ್ಟಿಮೇಳ ಧಾರಾವಾಹಿ. ವೀಕ್ಷಕರು ಈ ಸೀರಿಯಲ್​ ಮೇಲೆ ಅಪಾರವಾದ ಪ್ರೀತಿ, ನಂಬಿಕೆಯನ್ನು ಇಟ್ಟುಕೊಂಡಿದ್ದರು. ಸದ್ಯ ಗಟ್ಟಿಮೇಳ ಸೀರಿಯಲ್​ ಮುಕ್ತಾಯಗೊಂಡಿದೆ.
ಇದನ್ನೂ ಓದಿ: ಅಲ್ಲು ಅರ್ಜುನ್​ಗೆ ಇಂಡಿಯಾದಲ್ಲೇ ಅತಿ ಹೆಚ್ಚು ಸಂಭಾವನೆ.. ಪುಷ್ಪ-2ಗೆ ಐಕಾನ್ ಸ್ಟಾರ್ ಪಡೆದ ದುಡ್ಡು ಎಷ್ಟು?
/newsfirstlive-kannada/media/post_attachments/wp-content/uploads/2024/11/ashvini3.jpg)
ಆದರೆ ಗಟ್ಟಿಮೇಳ ಸೀರಿಯಲ್​ ಕಲಾವಿದರನ್ನು ಮರೆತ್ತಿಲ್ಲ ವೀಕ್ಷಕರು. ಹೌದು, ಇದೇ ಸೀರಿಯಲ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ನಟಿ ಎಂದರೆ ಅದು ಆರತಿ ಪಾತ್ರಧಾರಿ. ಇದೇ ಆರತಿ ಪಾತ್ರದಲ್ಲಿ ಅಭಿನಯಿಸಿದ್ದು ನಟಿ ಅಶ್ವಿನಿ. ಸೀರಿಯಲ್​ನಿಂದ ಆಚೆ ಬಂದ ಮೇಲೆ ಯೂಟ್ಯೂಬ್​ನಲ್ಲಿ ಹೊಸ ಹೊಸ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಌಕ್ಟೀವ್​ ಆಗಿದ್ದಾರೆ.
ಆದರೆ ಇದೀಗ ನಟಿ ಅಭಿಮಾನಿಗಳಿಗೆ ಶಾಕಿಂಗ್​ ಌಂಡ್ ಸರ್ಪ್ರೈಸ್ ವಿಚಾರವನ್ನು ಹಂಚಿಕೊಂಡಿದ್ದಾರೆ. ಇಷ್ಟು ದಿನ ನಟಿ ತಾವು ಮದುವೆಯಾದ ವಿಚಾರವನ್ನು ಗುಟ್ಟಾಗಿ ಇಟ್ಟುಕೊಂಡಿದ್ದರು. ಅವರ ಕುಟುಂಬಸ್ಥರಿಗೆ ಬಿಟ್ಟು ಉಳಿದಂತೆ ಯಾರಿಗೂ ಗೊತ್ತಿರಲಿಲ್ಲ. ಬದಲಾಗಿ ಅವರು ಅಷ್ಟಾಗಿ ವೈಯಕ್ತಿಕ ವಿಚಾರವನ್ನು ಎಲ್ಲೂ ಹಂಚಿಕೊಂಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ನಟಿ ತಾವು ಮದುವೆಯಾದ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/11/ashvini.jpg)
ಈ ಬಗ್ಗೆ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮದುವೆಯಾದ ಫೋಟೋಗಳನ್ನು ಶೇರ್​ ಮಾಡಿಕೊಂಡು ಎಲ್ಲರಿಗೂ ಶಾಕ್​ ನೀಡಿದ್ದಾರೆ. ಆ ಫೋಟೋಗಳ ಜೊತೆಗೆ ಎಲ್ಲರಿಗೂ ನಮಸ್ಕಾರ ನನ್ನ ಜೀವನದ ಬಹು ಮುಖ್ಯವಾದ ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ನಾನು ಮತ್ತು ಅಜಯ್ ಅವರು ಪ್ರೀತಿಸಿ 15 ವರ್ಷಗಳಾಗಿವೆ. 27/11/2024 ಇಂದು ನಾವು ಮದುವೆಯಾದ ದಿನ ಅಂದರೆ ಮದುವೆಯ ವಾರ್ಷಿಕೋತ್ಸವ. ನಮ್ಮದು love come Arrange Marriage. ನಾನು ಮದುವೆಯಾಗಿರುವ ವಿಷಯ ನನ್ನ ಆತ್ಮೀಯರಿಗೆ ತಿಳಿದಿದೆ. ಆದರೆ ಈ ವಿಷಯವನ್ನು ನಾನು public ಮಾಡಿರಲಿಲ್ಲ ಅಷ್ಟೇ, ಇಂದು ಆ ಸಮಯ ಬಂದಿದೆ ಹಾಗಾಗಿ ತಿಳಿಸುತ್ತಿದ್ದೇನೆ. ಇಲ್ಲಿ ನಾನು ಎಲ್ಲವನ್ನು ವಿವರಿಸಲು ಸಾಧ್ಯವಿಲ್ಲ ಹಾಗಾಗಿ ಇದರ ಸಂಪೂರ್ಣ ಮಾಹಿತಿ Nimma Ashwini YouTube channelನಲ್ಲಿ ಇದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಎಂದು ಕೇಳಿಕೊಳ್ಳುವ ಅಜಯ್ ಮತ್ತು ಅಶ್ವಿನಿ ಅಂತ ಬರೆದುಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/11/ashvini1.jpg)
ಇದನ್ನೂ ಓದಿ:2025ರ ಜ.22ಕ್ಕೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ದಿನಾಚರಣೆ ಇಲ್ಲ; ಕಾರಣವೇನು?
ಸದ್ಯ ನಟಿ ಅಶ್ವಿನಿ ಅವರು ಶೇರ್ ಮಾಡಿಕೊಂಡ ಫೋಟೋಸ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಇನ್ನೂ ನಟಿ ಈ ವಿಚಾರವನ್ನು ಹೇಳಿಕೊಳ್ಳಲು ಒಂದು ಕಾರಣ ಕೂಡ ಇದೆ. ಅದು ಏನೆಂದರೆ, ಸಾಕಷ್ಟು ಮಂದಿ ಸೋಷಿಯಲ್​ ಮೀಡಿಯಾದಲ್ಲಿ ನಟಿಯ ಮದುವೆ ವಿಚಾರದ ಬಗ್ಗೆ ಪ್ರಶ್ನೆ ಮಾಡಿದ್ದಾರಂತೆ, ನೀವು ಒಬ್ಬರೇ ಇರೋದಾ, ನಿಮಗೆ ಫ್ಯಾಮಿಲಿ ಇಲ್ವಾ? ನೀವು ಏಕೆ ಇನ್ನೂ ಮದುವೆ ಆಗಿಲ್ಲ, ಮದುವೆ ಆದರೂ ಏಕೆ ನೀವು ಪ್ರೈವೇಟ್ ಆಗಿ ಇಟ್ಟುಕೊಂಡಿದ್ದೀರಾ ಎಂಬೆಲ್ಲಾ ಕಾಮೆಂಟ್ಸ್​ಗಳು ನಟಿಗೆ ಬರ್ತಾ ಇತ್ತಂತೆ.
/newsfirstlive-kannada/media/post_attachments/wp-content/uploads/2024/11/ashvini4.jpg)
ಹೀಗಾಗಿ ನಟಿ ಈಗ ಖುದ್ದಾಗಿ ಅವರೇ ಮದುವೆ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೇ ನಟಿ ಅಶ್ವಿನಿ ಅವರದ್ದು ಲವ್ ಮ್ಯಾರೇಜ್ ಆಗಿದೆ, ನಟಿ ಕಳೆದ 15 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗ ಜೊತೆಗೆ ಮದುವೆ ಆಗಿದ್ದಾರೆ. ಅಲ್ಲದೇ ಕುಟುಂಬಸ್ಥರನ್ನು ಒಪ್ಪಿಸಿ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಇನ್ನೂ ನಟಿ ಅಶ್ವಿನಿಯನ್ನು ಮದುವೆ ಆದ ಹುಡುಗನ ಹೆಸರು ಅಜಯ್​. ಪ್ರೀತಿಯ ಪತಿ ಬಗ್ಗೆ ನಟಿ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹೇಳಿಕೊಂಡಿದ್ದಾರೆ. ಅಜಯ್​ ಅವರು ಎಷ್ಟು ಸಪೋರ್ಟಿವ್ ಆಗಿದ್ದಾರೆ ಎಂಬುವುದರ ಬಗ್ಗೆ ಇಂಚಿಂಚೂ ವಿಚಾರವನ್ನು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us