newsfirstkannada.com

ಖುಷಿ ಖುಷಿಯಾಗಿ ಹಸೆಮಣೆ ಏರಿದ ನಯನಾ ನಾಗರಾಜ್.. ಗಿಣಿರಾಮ ಸೀರಿಯಲ್ ನಟಿಯ ಹೀರೋ ಯಾರು?

Share :

Published June 17, 2024 at 2:01pm

  ನಯನಾ ನಾಗರಾಜ್ ವಿವಾಹವಾಗಿದ್ದು ಯಾವ ಹುಡುಗನ್ನ?

  ಅದ್ಧೂರಿಯಾಗಿ ಮದುವೆಯಾದ ಕಿರುತೆರೆಯ ನಟಿ ನಯನಾ

  ಕೆಲ ತಿಂಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ

ಗಿಣಿರಾಮ, ಪಾಪ ಪಾಂಡು ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ನಟಿ ನಯನಾ ನಾಗರಾಜ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು, ಹಿರಿಯರ ಸಮ್ಮುಖದಲ್ಲಿ ಜೀವನದ ತನ್ನ ನೆಚ್ಚಿನ ಹೀರೋ ಜೊತೆ ಹೊಸ ಬಾಳಿಗೆ ವೆಲ್​ಕಮ್ ಮಾಡಿದ್ದಾರೆ.

ಇದನ್ನೂ ಓದಿ: ಮಾನವೀಯತೆ ಮೆರೆದ ಡಾ.CN ಮಂಜುನಾಥ್.. ನೂತನ ಸಂಸದರ ಕಾರ್ಯಕ್ಕೆ ಭಾರೀ ಮೆಚ್ಚುಗೆ

ತಮ್ಮ ಬಹುಕಾಲದ ಸ್ನೇಹಿತ ಸುಹಾಸ್ ಶಿವಣ್ಣ ಅವರೊಂದಿಗೆ ನಯನಾ ನಾಗರಾಜ್ ಅವರು ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಈ ಬ್ಯೂಟಿಫುಲ್ ಜೋಡಿ ಕಳೆದ 10 ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ನೂರಾರು ಸವಿ ನೆನಪುಗಳೊಂದಿಗೆ ಇದೀಗ ನಯನಾ ನಾಗರಾಜ್ ಹಾಗೂ ಸುಹಾಸ್ ಶಿವಣ್ಣ ಹೊಸ ಜೀವನಕ್ಕೆ ಹಾಯ್ ಹೇಳಿದ್ದಾರೆ.

ಇದನ್ನೂ ಓದಿ: ಭೀಕರ ರೈಲು ದುರಂತದಲ್ಲಿ ಉಸಿರು ಚೆಲ್ಲಿದ 5 ಪ್ರಯಾಣಿಕರು.. 25 ಮಂದಿ ಗಂಭೀರ; ಸಾವಿನ ಸಂಖ್ಯೆ ಹೆಚ್ಚಾಗೋ ಸಾಧ್ಯತೆ

ಸುಹಾಸ್ ಶಿವಣ್ಣ ಕೂಡ ರಂಗಭೂಮಿಯಲ್ಲಿ ಗುರುತಿಸಿಕೊಂಡವರು. ಅಷ್ಟೇ ಅಲ್ಲ, ಚೆನ್ನಾಗಿ ಹಾಡುಗಳನ್ನು ಹಾಡುತ್ತಾರೆ. ಇಬ್ಬರು ಒಂದೇ ಕ್ಷೇತ್ರದಲ್ಲಿ ಇದ್ದಿದ್ದರಿಂದ ಒಬ್ಬರನೊಬ್ಬರು ಅರ್ಥಮಾಡಿಕೊಂಡು ಪ್ರೇಮಾಂಕುರವಾಗಿತ್ತು. ಇದು ಹಾಗೇ ಒಂದಲ್ಲ, ಎರಡಲ್ಲ ಬರೋಬ್ಬರಿ 10 ವರ್ಷಗಳ ಕಾಲ ಪ್ರೀತಿಯಲ್ಲೇ ಇದ್ದರು. ಕೆಲ ತಿಂಗಳ ಹಿಂದೆಯಷ್ಟೇ ಈ ಕ್ಯೂಟ್ ಜೋಡಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಈ ಸಂಬಂಧ ಫೋಟೋಸ್ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಸಂತಸದಿಂದ ಗುರು-ಹಿರಿಯರ ಸಮ್ಮುಖದಲ್ಲಿ ಇಬ್ಬರು ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: Train Accident: ದೇಶದಲ್ಲಿ ಮತ್ತೊಂದು ರೈಲು ಭೀಕರ ಅಪಘಾತ.. ಭಾರೀ ಸಾವು ನೋವಿನ ಆತಂಕ

ನಯನಾ ನಾಗರಾಜ್ ಮದುವೆಯಲ್ಲಿ ಸಿಹಿ ಕಹಿ ಚಂದ್ರು ಅವರ ಕುಟುಂಬಸ್ಥರು ಭಾಗಿಯಾಗಿದ್ದರು. ಈ ವಿವಾಹದಲ್ಲಿ ನಯನಾ, ಸುಹಾಸ್ ಶಿವಣ್ಣ ಅವರ ಕುಟುಂಬಸ್ಥರು, ಸ್ನೇಹಿತರು ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ್ದಾರೆ. ಅಲ್ಲದೇ ಅಭಿಮಾನಿಗಳು ಕೂಡ ಗುಡ್​​ಲಕ್ ಎಂದು ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖುಷಿ ಖುಷಿಯಾಗಿ ಹಸೆಮಣೆ ಏರಿದ ನಯನಾ ನಾಗರಾಜ್.. ಗಿಣಿರಾಮ ಸೀರಿಯಲ್ ನಟಿಯ ಹೀರೋ ಯಾರು?

https://newsfirstlive.com/wp-content/uploads/2024/06/NAYANA_NAGARAJ.jpg

Load More