newsfirstkannada.com

ಈಗ ಇರೋ ಅಂತರಾ ಅಂತರಾನೇ ಅಲ್ಲ; ಫ್ಯಾನ್ಸ್​​ಗಳಲ್ಲಿ ಕುತೂಹಲ ಹೆಚ್ಚಿಸಿದ ಹಿಟ್ಲರ್ ಕಲ್ಯಾಣ ಸೀರಿಯಲ್!

Share :

20-07-2023

  ಅಂತರಾ ರೂಪದಲ್ಲಿ ಎಜೆ- ಲೀಲಾ ಬದುಕಿಗೆ ಬಂದೋಳು ಯಾರು?

  ಅಭಿಮಾನಿಗಳಿಗೆ ಮಹಾ ತಿರುವು ನೀಡುತ್ತಿದೆ ಹಿಟ್ಲರ್ ಕಲ್ಯಾಣ ಧಾರಾವಾಹಿ

  ವೀಕ್ಷಕರು ಅಂದುಕೊಂಡಿದ್ದೆಲ್ಲಾ ತಲೆಕೆಳಗಾಗುತ್ತಿದೆ ಈ ಸೀರಿಯಲ್​​ನಲ್ಲಿ

ಕಿರುತೆರೆಯಲ್ಲಿ ಮಾಸ್ ಆಗಿ ಎಂಟ್ರಿ ಕೊಟ್ಟ ಸೀರಿಯಲ್ ಅಂದ್ರೆ ಹಿಟ್ಲರ್ ಕಲ್ಯಾಣ. ಕಥೆಯು ವಿಭಿನ್ನವಾಗಿದ್ದ ಕಾರಣ ಕರುನಾಡ ಮನೆ ಮಾತಾಗಿದ್ದರು ಲೀಲಾ-ಎಜೆ. ಕಥೆಯ ಪ್ರಮುಖ ಟ್ವಿಸ್ಟ್ ಅಂದ್ರೆನೆ ಅಂತರ ಪಾತ್ರ. ಈ ಪಾತ್ರದ ಮೂಲಕವೇ ಕಥೆ ಸಾಗಬೇಕು. ಈಗಾಗಲೇ ಅಂತರ ಎಜೆ ಕಣ್ಣುಂದೆ ಬಂದಾಗಿದೆ. ಅಭಿರಾಮ್ ಜಯ್​ಶಂಕರ್ ಅವರ ಮುದ್ದಿನ ಮಡದಿ ಅಂತರ. ಸದ್ಯ ಕಥೆಗೆ ಒಂದು ದೊಡ್ಡ ತಿರುವು ಎದುರಾಗಿದೆ.

ಈಗ ಇರುವ ಅಂತರಾ ಅಂತರಾನೆ ಅಲ್ಲಾ. ಅಂತರಾ ಅಂತಾ ಹೇಳಿಕೊಂಡು ಬಂದಿರೋ ಈ ಹೆಣ್ಣು ಎಜೆ ಮನೆಗೆ ಒಂದು ದೊಡ್ಡ ಅಪಾಯವಾಗಿದ್ದಾಳೆ. ಇದಾವುದರ ಅರಿವೇ ಪರಿವೇ ಇಲ್ಲದ ಎಜೆ -ಲೀಲಾ ಹಾಗೂ ಸೊಸೆಯಂದಿರು ಅಂತರಾಗೆ ಸಿಗಬೇಕಿದ್ದ ಎಲ್ಲಾ ಗೌರವಗಳನ್ನ ಕೊಡುತ್ತಾ ಬಂದಿದ್ದಾರೆ. ಆದ್ರೆ ಅಂತರಾ ಅಂತಾ ಹೇಳಿಕೊಂಡು ಬಂದಿರೋ ಹೆಂಗಸು ಮಾತ್ರ ತೀರಾ ಅಪಾಯಕಾರಿ ಅನ್ನೋದು ದೊಡ್ಡ ಟ್ವಿಸ್ಟ್ ನೀಡೋ ಮೂಲಕ ಧಾರಾವಾಹಿಯಲ್ಲಿ ಗೊತ್ತಾಗಿದೆ.

ಅಂತರ ಬದುಕಿಲ್ಲ ಅವಳು ಸತ್ತು ಹೋಗಿದ್ದರೂ ಕೂಡ ಈಗ ಬಂದಿರೋ ಹೆಂಗಸು ಎಲ್ಲಾ ರೀತಿಯಲ್ಲೂ ಪ್ರಯತ್ನ ಪಡ್ತಿದ್ದಾಳೆ. ಎಜೆ ಕೋಟೆಯ ವಾರಸುದಾರಿ ಆಗಬೇಕು ಕನಸು ಇಟ್ಟುಕೊಂಡಿದ್ದಾಳೆ. ಒಟ್ಟಿನಲ್ಲಿ ಈ ಅಂತರ ಟ್ರ್ಯಾಕ್ ಧಾರಾವಾಹಿಯಲ್ಲಿ ಬಹು ದೊಡ್ಡ ಟ್ವಿಸ್ಟ್ ಪಡೆದುಕೊಂಡಿದೆ. ಹಾಗಾದ್ರೆ ಅಂತರ ಹೆಸರನ್ನು ಹೇಳಿಕೊಂಡು ಬಂದಿರೋ ಹೆಣ್ಣಾದ್ರು ಯಾರು? ಅಂತಾ ದೊಡ್ಡ ಸೇಡು ಯಾಕೆ? ಲೀಲಾ-ಎಜೆ ಎದುರು ಅಂತರ ಬಣ್ಣ ಬಯಲಾಗುತ್ತಾ? ಸದ್ಯ ಇವೆಲ್ಲವನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಈಗ ಇರೋ ಅಂತರಾ ಅಂತರಾನೇ ಅಲ್ಲ; ಫ್ಯಾನ್ಸ್​​ಗಳಲ್ಲಿ ಕುತೂಹಲ ಹೆಚ್ಚಿಸಿದ ಹಿಟ್ಲರ್ ಕಲ್ಯಾಣ ಸೀರಿಯಲ್!

https://newsfirstlive.com/wp-content/uploads/2023/07/hitlar-kalyana-1.jpg

Load More