ತನ್ನದೇಯಾದ ಅಭಿಮಾನಿಗಳ ಸಂಪಾದಿಸಿಕೊಂಡ ಸೀರಿಯಲ್ ಇದು
ಕೀರ್ತಿಯನ್ನೇ ಕೊಂದು ಬಿಟ್ಟ ಕಾವೇರಿ ಅಟ್ಟಹಾಸಕ್ಕೆ ಫ್ಯಾನ್ಸ್ ಆಕ್ರೋಶ
ಕಾವೇರಿಯ ಸತ್ಯ ಬಯಲು ಮಾಡಲು ಮುಂದಾದ ಮುದ್ದಿನ ಸೊಸೆ
ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ತನ್ನದೇಯಾದ ಅಭಿಮಾನಿಗಳನ್ನು ಗಳಿಸಿಕೊಂಡಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ಲಕ್ಷ್ಮೀ ಬಾರಮ್ಮ ಧಾರಾವಾಹಿ ವೀಕ್ಷಕರ ಪ್ರೀತಿ, ಪ್ರೋತ್ಸಾಹವನ್ನು ಗಳಿಸಿಕೊಂಡು ಮುನ್ನುಗ್ಗುತ್ತಿದೆ. ದಿನ ಕಳೆದಂತೆ ರೋಚಕ ತಿರುವನ್ನು ಪಡೆದುಕೊಳ್ಳುವ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ.
ಇದನ್ನೂ ಓದಿ: ಮಿಸ್ ಯು ಕೀರ್ತಿ.. ಲಕ್ಷ್ಮೀ ಬಾರಮ್ಮ ಸೀರಿಯಲ್ನಿಂದ ಹೊರ ಬಂದ್ರಾ ನಟಿ ತನ್ವಿ ರಾವ್? ಫ್ಯಾನ್ಸ್ ಬೇಸರ!
ಈಗಂತೂ ಲಕ್ಷ್ಮೀ ಬಾರಮ್ಮ ಸೀರಿಯಲ್ ಕಥೆಯನ್ನು ಬಹಳ ರೋಚಕವಾಗಿ ತೆರೆಗೆ ತರುತ್ತಿದ್ದಾರೆ. ಅದರಂತೆ ಒಂದು ವಾರದಿಂದ ನಡೆಯುತ್ತಿರೋ ಎಪಿಸೋಡ್ಗೆ ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಕಥೆಗೆ ಬರುವುದಾದರೆ, ಕಾವೇರಿಯ ಅಸಲಿ ಮುಖವಾಡ ಕಳಚಲೆಂದು ಬೆಟ್ಟಕ್ಕೆ ಕರೆಸಿಕೊಂಡಿದ್ದ ಕೀರ್ತಿ ಸಾವನ್ನಪ್ಪಿದ್ದಾಳೆ. ಕೀರ್ತಿಯನ್ನು ಕಳೆದುಕೊಂಡ ದುಃಖ ವೈಷ್ಣವ್ ಕುಟುಂಬ ಮುಳುಗಿದೆ. ಆದರೆ ಸ್ವಲ್ಪವೂ ಪಶ್ಚಾತಾಪ ಇಲ್ಲದೆ ಇರೋ ಕಾವೇರಿ ಖುಷಿಯಲ್ಲಿ ತೇಲಾಡುತ್ತಿದ್ದಾಳೆ.
ಒಂದು ಕಡೆ ವೈಷ್ಣವ್ ಹಾಗೂ ಲಕ್ಷ್ಮೀ ಕಣ್ಣೀರು ಹಾಕುತ್ತಿದ್ದರೆ ಮತ್ತೊಂದು ಕಡೆ ಕೀರ್ತಿ ಸಾವನ್ನು ಕಾವೇರಿ ಸಂಭ್ರಮಿಸುತ್ತಿದ್ದಾಳೆ. ಅಂತ್ಯಸಂಸ್ಕಾರ ವೇಳೆ ಕೀರ್ತಿ ತಾಯಿ ಕಾರುಣ್ಯಾ ಲಕ್ಷ್ಮೀ ಬಳಿ ನಿಮ್ಮ ಅತ್ತೆ ನೀನು ಅಂದುಕೊಂಡಷ್ಟು ಒಳ್ಳೆಯವಳಲ್ಲ, ಕೀರ್ತಿ ಕೊನೆಗೆ ಯಾರನ್ನೂ ನಂಬುತ್ತಿರಲಿಲ್ಲ, ನಿನ್ನನ್ನು ಮಾತ್ರ ನಂಬುತ್ತಿದ್ದಳು. ನೀನು ನಿನ್ನ ಅತ್ತೆಯನ್ನು ನಂಬಬೇಡ ಅಂತ ಹೇಳಿದ್ದರು. ಆದರೆ ಅಂತ್ಯಸಂಸ್ಕಾರ ಮಾಡಿದ ಬಳಿಕ ಕಾವೇರಿ ತನ್ನ ರೂಂನಲ್ಲಿ ಡ್ಯಾನ್ಸ್ ಮಾಡಿದ್ದಾಳೆ.
ಇದನ್ನೂ ಓದಿ: ಬೆಟ್ಟದ ಮೇಲಿಂದ ಕೆಳಗಡೆ ಬಿದ್ದ ಕೀರ್ತಿ; ಇಲ್ಲಿಗೆ ಅಂತ್ಯವಾಗುತ್ತಾ ಈ ಸ್ಟಾರ್ ನಟಿಯ ಪಾತ್ರ..?
ಇದೇ ವೇಳೆ ಎಂಟ್ರಿ ಕೊಟ್ಟ ಲಕ್ಷ್ಮೀಗೆ ಫುಲ್ ಶಾಕ್ ಆಗಿದೆ. ಅತ್ತೆಗೆ ಏನಾಯ್ತು? ನಾವೆಲ್ಲಾ ಕೀರ್ತಿ ಸತ್ತಿದ್ದಾಳೆ ಅಂತ ಕಣ್ಣೀರು ಹಾಕುತ್ತಿದ್ದರೆ ಆದರೆ, ಅತ್ತೆ ಹೀಗೆ ಡ್ಯಾನ್ಸ್ ಮಾಡೋದಕ್ಕೆ ಏನು ಕಾರಣ ಅಂತ ತಲೆ ಕಡಿಸಿಕೊಂಡಿದ್ದಾಳೆ. ಕಾವೇರಿಗೆ ಕೀರ್ತಿ ಹಾಗೂ ಲಕ್ಷ್ಮೀಯೂ ಬೇಡವಾಗಿತ್ತಂತೆ. ಆದರೆ ಈ ಇಬ್ಬರನ್ನು ಬಿಟ್ಟು ಮಗ ವೈಷ್ಣವ್ಗೆ ಬೇರೆ ಹುಡುಗಿಯ ಜೊತೆಗೆ ಮದುವೆ ಮಾಡಿಸಬೇಕು ಅಂತ ಪ್ಲಾನ್ ಮಾಡಿಕೊಂಡಿದ್ದಾಳೆ. ಕಾವೇರಿ ಮೇಲೆ ಅನುಮಾನ ಬಂದ ಲಕ್ಷ್ಮೀ ಅಸಲಿ ಸತ್ಯವನ್ನು ಬೆಳಕಿಗೆ ತರುತ್ತಾಳಾ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ