newsfirstkannada.com

×

ಬಿಚ್ಚಿಟ್ಟಿದೆ ಮಹಾಸತ್ಯ.. ಕಾವೇರಿಗೆ ಇದೆ ಮಾರಿ ಹಬ್ಬ.. ಲಕ್ಷ್ಮಿ ಬಾರಮ್ಮದಲ್ಲಿ ರಣ ರೋಚಕ ಟ್ವಿಸ್ಟ್..! VIDEO

Share :

Published September 29, 2024 at 2:42pm

    ಕಲರ್ಸ್​ ಕನ್ನಡದ ಸೂಪರ್ ಹಿಟ್ ಧಾರವಾಹಿ ಲಕ್ಷ್ಮಿ ಬಾರಮ್ಮ

    ಕೊನೆಗೂ ಕೀರ್ತಿ ಸಾವಿನ ರಹಸ್ಯ ಕಂಡುಕೊಂಡ ಸ್ನೇಹಿತೆ ಲಕ್ಷ್ಮಿ

    ಕಾವೇರಿಗೆ ಉಳಿಗಾಲ ಇಲ್ಲ! ಅಭಿಮಾನಿಗಳು ಎಕ್ಸೈಟ್

ಕಲರ್ಸ್​ ಕನ್ನಡದ ಲಕ್ಷ್ಮಿ ಬಾರಮ್ಮ ಸೀರಿಯಲ್​ನ ಪ್ರಮುಖ ಕಥಾಧಾತು ಕೀರ್ತಿ ಪಾತ್ರ. ಹೀಗಿರುವಾಗ ಧಾರಾವಾಹಿಯಲ್ಲಿ ಮೂಲ ಕೀರ್ತಿ ಕಾಣೆಯಾಗಿ ತುಂಬಾ ದಿನವಾಗಿದೆ. ಕಥಾಹಂದರದ ಪತ್ತೆದಾರಿ ಆತ್ಮದ ಪಾತ್ರದ ಮೂಲಕ ಆಗಾಗ ಅಭಿಮಾನಿಗಳಿಗೆ ದರ್ಶನ ಕೊಡ್ತಿದ್ದಾಳೆ. ಅದೇ ಕಾರಣಕ್ಕೆ ವೀಕ್ಷಕರು ಇನ್ನೂ ಗೊಂದಲದಲ್ಲಿದ್ದಾರೆ. ಕೀರ್ತಿ ಬದುಕಿದ್ದಳಾ ಅಥವಾ ಸತ್ತಿದ್ದಾಳಾ ಎಂಬ ಕುತೂಹಲ ಹಾಗೆ ಇದೆ.

ಇದರ ನಡುವೆ ವೀಕ್ಷಕರಿಗೆ ಲಕ್ಷ್ಮಿ ಮೈಮೇಲೆ ಬರುತ್ತಿರೋದು ಕೀರ್ತಿ ಆತ್ಮ ಅಲ್ಲ. ಕಾವೇರಿ ಮುಚ್ಚಿಟ್ಟಿರುವ ಸತ್ಯವನ್ನು ಬಾಯಿಬಿಡಿಸಲು ಲಕ್ಷ್ಮಿ ಮಾಡುತ್ತಿರುವ ಕಿತಾಪತಿ ಅನ್ನೋ ಸತ್ಯ ಬಹಿರಂಗವಾಗಿದೆ. ಇದರ ನಡುವೆ ಸೀರಿಯಲ್​ನ ಕತೆಗೆ ಬೆಟ್ಟದ ಮಾದೇಶ್ವರ ಪಾತ್ರದಾರಿ ರೋಚಕ ಟ್ವಿಸ್ಟ್ ಕೊಟ್ಟಿದ್ದಾನೆ.

ಇದನ್ನೂ ಓದಿ:ಲಕ್ಷ್ಮಿ ಬಾರಮ್ಮ​ ಸೀರಿಯಲ್​​ನ ಗಂಗಕ್ಕಾ ಲುಕ್​ಗೆ ಹೌಹಾರಿದ ನೆಟ್ಟಿಗರು; ಅದು ಸ್ವಲ್ಪ ಓವರ್ ಆಯ್ತು ಅನ್ನೋದಾ..!

ಅದು ಏನೆಂದರೆ.. ಅಂದು ಕಾವೇರಿಯಿಂದ ಕೀರ್ತಿ ಆಪತ್ತಿಗೆ ಸಿಲುಕುವ ಮೊದಲು ಬೆಟ್ಟದಲ್ಲಿ.. ಇಬ್ಬರ ನಡುವೆ ಏನೆಲ್ಲ ನಡೆಯಿತು ಎಂಬ ಸತ್ಯವನ್ನು ಹುದುಗಿಟ್ಟಿರುವ ಕ್ಯಾಮೆರಾವನ್ನು ಆತ, ಲಕ್ಷ್ಮಿ ಕೈಗೆ ಕೊಟ್ಟಾಗಿದೆ. ಈ ದೃಶ್ಯ ಇಡೀ ಧಾರವಾಹಿಗೆ ಹೊಸ ತಿರುವು ಕೊಡಲಿದೆ. ಯಾಕೆಂದರೆ ಈಗಾಗಲೇ ಲಕ್ಷ್ಮಿ ಕ್ಯಾಮೆರಾ ಆನ್ ಮಾಡಿದ್ದಾಳೆ!

ಅಲ್ಲಿ ಕೀರ್ತಿ ಮತ್ತು ಕಾವೇರಿ ನಡುವೆ ನಡೆದ ವಾಗ್ವಾದ ಮತ್ತು ಅನಾಹುತಗಳ ಸಂಪೂರ್ಣ ದೃಶ್ಯವನ್ನು ಲಕ್ಷ್ಮಿ ನೋಡಿ ಅತ್ತೆಯ ವಿರುದ್ಧ ಸಿಡಿದೆದ್ದಾಳೆ. ‘ಬಿಚ್ಟಿಟ್ಟಿದೆ ಮಹಾಸತ್ಯ’ ಎಂಬ ಧ್ವನಿಯೂ ಪ್ರೋಮೋದಲ್ಲಿ ಬಂದಾಗಿದೆ. ಅತ್ತ ಲಕ್ಷ್ಮಿ ಕೂಡ ‘ಕೀರ್ತಿ ನಿನ್ನ ಸಾವಿಗೆ ನ್ಯಾಯ ಸಿಗುವ ಟೈಮ್ ಬಂದಿದೆ. ಅತ್ತೆ ಇನ್ಮುಂದೆ ನಿಮ್ಮ ಆಟ ನಡೆಯಲ್ಲ’ ಎಂಬ ಡೈಲಾಗ್ ಹೊಡೆದು ರೊಚ್ಚಿಗೆದ್ದಿದ್ದಾಳೆ. ಹೀಗಾಗಿ ನಾಳೆ ಪ್ರಸಾರವಾಗುವ ಎಪಿಸೋಡ್​​ ಮೇಲೆ ಲಕ್ಷ್ಮಿ ಬಾರಮ್ಮ ಸೀರಿಯಲ್​ನ ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ.

ಇದನ್ನೂ ಓದಿ:PHOTOS: ಮಿರ, ಮಿರ ಮಿಂಚಿದ ಕೀರ್ತಿ ಸುರೇಶ್.. ಈ ಗೋಲ್ಡನ್​ ಸ್ಯಾರಿಯ ವಿಶೇಷತೆ ಏನು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಚ್ಚಿಟ್ಟಿದೆ ಮಹಾಸತ್ಯ.. ಕಾವೇರಿಗೆ ಇದೆ ಮಾರಿ ಹಬ್ಬ.. ಲಕ್ಷ್ಮಿ ಬಾರಮ್ಮದಲ್ಲಿ ರಣ ರೋಚಕ ಟ್ವಿಸ್ಟ್..! VIDEO

https://newsfirstlive.com/wp-content/uploads/2024/09/LAXMI-BARAMMA-1.jpg

Load More