ದಸರಾ ಅನ್ನೋದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನಸು
ಅವರ ಕನಸನ್ನು ತಡೆದುಕೊಳ್ಳುವ ವಯಸ್ಸು ನನ್ನದು ಎಂದ ಹಂಸಲೇಖ
ದಸರಾ ಉದ್ಘಾಟನೆಯ ಖುಷಿಯಲ್ಲಿ ಒಂದು ಸಾಲು ಬರೆದ ನಾದಬ್ರಹ್ಮ
ಬೆಂಗಳೂರು: 2023ರ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಂಸಲೇಖ ಅವರಿಂದಲೇ ಈ ಬಾರಿಯ ದಸರಾ ಉದ್ಘಾಟನೆ ಮಾಡಿಸುವುದಾಗಿ ಘೋಷಣೆ ಮಾಡಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ನಾದಬ್ರಹ್ಮ ಹಂಸಲೇಖ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ಕೇಳಿ ತುಂಬಾ ಖುಷಿ ಆಯ್ತು. ದಸರಾ ಅನ್ನೋದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನಸು. ಅವರ ಕನಸನ್ನು ತಡೆದುಕೊಳ್ಳುವ ವಯಸ್ಸು ನನ್ನದು ಎಂದು ಹಂಸಲೇಖ ಹೇಳಿದ್ದಾರೆ.
ಇದನ್ನೂ ಓದಿ: ಈ ಬಾರಿಯ ದಸರಾ ಉದ್ಘಾಟಿಸಲಿದ್ದಾರೆ ನಾದಬ್ರಹ್ಮ ಹಂಸಲೇಖ; ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಹಂಸಲೇಖ ಅವರು ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರ ಪರವಾಗಿ ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ನಾನು ಕಲಾ ಪ್ರತಿನಿಧಿ ಆಗಿದ್ದು, ಅವರ ಪರವಾಗಿ ನಾನು ದಸರಾ ದೀಪ ಹಚ್ಚುತ್ತೇನೆ. ನನಗೆ ದಸರಾ ಹಾಡನ್ನ ಮಾಡೋಕೆ ಈಗ ಆಸೆ ಉಕ್ಕುತ್ತಾ ಇದೆ. ಈಗ ಒಂದು ಸಾಲು ಬರ್ತಿದೆ ಅದನ್ನ ಹೇಳುತ್ತೇನೆ. ‘ಬದುಕಿದ್ದು ಕನ್ನಡ ಭಿಕ್ಷೆ ಇಲ್ಲಿ ಸಮರಸವೇ ನಮ್ಮ ರಕ್ಷೆ’ ಎಂದು ಹಂಸಲೇಖ ಅವರು ಹೇಳಿದರು.
ಇನ್ನು, ನಾನು ಅನಾರೋಗ್ಯದಲ್ಲಿದ್ದಾಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನನ್ನ ಆರೋಗ್ಯ ವಿಚಾರಿಸಿದ್ರು. ನನಗೆ ಈ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಹಂಸಲೇಖ ಹೇಳಿದ್ದಾರೆ.
ಮೈಸೂರು ದಸರಾ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಕನಸು, ದಸರಾ ಉದ್ಘಾಟನೆಗೆ ಅವಕಾಶ ಕೊಟ್ಟಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದಗಳು ಅಂತಾ ನಾದಬ್ರಹ್ಮ ಹಂಸಲೇಖ ಅವರು ಹೇಳಿದ್ದಾರೆ.@siddaramaiah @DKShivakumar @desihamsa#Siddaramaiah #Hamsalekha #MysoreDasara #Dasara2023 #MysuruDasara #NewsFirstKannada pic.twitter.com/iwQz2g7BS2
— NewsFirst Kannada (@NewsFirstKan) August 29, 2023
ಇನ್ನು, ಸಂವಿಧಾನ ನಮಗೆಲ್ಲಾ ಸ್ವಾತಂತ್ರ್ಯ ಕೊಟ್ಟಿದೆ. ಕನ್ನಡದ ಕಾಲು ಹಿಡಿದುಕೊಂಡ್ರೆ ಅದು ನಮ್ಮನ್ನು ಕಾಪಾಡುತ್ತೆ. ಇಡೀ ಕನ್ನಡಿಗರು ಕನ್ನಡವನ್ನ ಕಾಪಾಡಬೇಕು. ಜಯ ಹೇ ನಾಲ್ವಡಿ ಅನ್ನೋ ಕಾರ್ಯಕ್ರಮ ಮಾಡಬೇಕು ಅನ್ನೋ ಆಸೆ ಇದೆ. ಇದರಲ್ಲಿ ನನ್ನ ಸಾಹಿತ್ಯ ಸಂಗೀತ ಇರುತ್ತೆ. ಇದಕ್ಕೆ ಸಿಎಂ ಅವಕಾಶ ಕೊಡಬೇಕು ಅಷ್ಟೇ. ನಾನು ದಸರಾ ನೋಡೋದಕ್ಕೆ ಹೋಗಿದ್ದೆ. ನಮ್ಮಪ್ಪನ ಹೆಗಲ ಮೇಲೆ ಕೂತಿದ್ದ ಆ ದಿನಗಳು ಅದ್ಭುತವಾದ ನೆನಪು ನನಗೆ ಎಂದು ಹಂಸಲೇಖ ಅವರು ಹೇಳಿದ್ದಾರೆ. ನಾನು ಅನಾರೋಗ್ಯದಲ್ಲಿದ್ದಾಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನನ್ನ ಆರೋಗ್ಯ ವಿಚಾರಿಸಿದ್ರು. ನನಗೆ ಈ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಹಂಸಲೇಖ ತಿಳಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ