newsfirstkannada.com

×

‘ನನ್ನ ಕ್ಯಾರೆಕ್ಟರ್​ ನೋಡಿದ್ರೆ ಹೆಣ್ಮಕ್ಕಳು ಥೂ ಅನ್ನಬೇಕು’- ದಿನಕರ್​​ಗೆ ದರ್ಶನ್​​ ಹೀಗೆ ಹೇಳಿದ್ರಂತೆ!

Share :

Published November 10, 2023 at 6:12pm

    ನವಗ್ರಹ ಸಿನಿಮಾ ಕಥೆ ಹೇಗೆ ಹುಟ್ಟಿದ್ದು? ಈ ಬಗ್ಗೆ ದರ್ಶನ್ ಏನ್ ಹೇಳಿದ್ದರು?

    ದರ್ಶನ್​ರನ್ನ ವಿಲನ್​ ರೋಲ್​​ನಲ್ಲಿ ತೋರಿಸಿದರೂ ಫ್ಯಾನ್ಸ್ ಒಪ್ಪಿಕೊಂಡರು

    ನ್ಯೂಸ್​ಫಸ್ಟ್​ ಜೊತೆ ನವಗ್ರಹದ ಜರ್ನಿ ಹಂಚಿಕೊಂಡ ದಿನಕರ್ ತೂಗುದೀಪ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೂವಿಗಳು ಎಂದರೆ ಮೊದಲು ಮಾಸ್​ ಫ್ಯಾನ್ಸ್​ ಥಿಯೇಟರ್​ನಲ್ಲಿ ಫಸ್ಟ್​ ಶೋ ನೋಡಲು ಕಾಯುತ್ತಿರುತ್ತಾರೆ. ದರ್ಶನ್​ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸಿದರು, ವಿಲನ್ ಆಗಿ ಗದರಿದರೂ ಅಭಿಮಾನಿಗಳು​ ಮಾತ್ರ ಡಿ-ಬಾಸ್ ಸೂಪರ್ ಅಂತಾರೆ. ಅವರ ನವಗ್ರಹ ಸಿನಿಮಾ ರಿಲೀಸ್ ಆಗಿ 15 ವರ್ಷ ಕಳೆದರು ಅದರ ಗತ್ತು ಮಾತ್ರ ಕಡಿಮೆ ಆಗಿಲ್ಲ. ಸದ್ಯ ಈ ನವಗ್ರಹ ಮೂವಿ ಡೈರೆಕ್ಟ್​ ಮಾಡಿದ್ದ ದಿನಕರ್ ತೂಗುದೀಪ್ ನ್ಯೂಸ್​ ಫಸ್ಟ್​ ಜೊತೆ ಮಾತನಾಡಿದ್ದಾರೆ.

ಕನ್ನಡಕ್ಕೆ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ದಿನಕರ್ ತೂಗುದೀಪ್ ಮಾತನಾಡಿ, ನನ್ನ ಕ್ಯಾರೆಕ್ಟರ್​ ಹೇಗೆ ಬರಿ ಅಂದ್ರೆ, ಮಹಿಳೆಯರು ನನ್ನ ಕ್ಯಾರೆಕ್ಟರ್ ನೋಡುತ್ತಿದ್ದರೇ ಅಯ್ಯೋ, ಥೂ.. ಎನ್ನುವಂತೆ ಇರಬೇಕು. ಹಾಗೇ ಬರಿ ಅಂತ ದರ್ಶನ್ ಹೇಳಿದ್ದರು. ಆದ್ರೆ ನಾನು ಅಷ್ಟೂ ಕೆಟ್ಟದಾಗಿ ಬರೆಯದೇ ಸ್ವಲ್ಪ ಬ್ಯಾಲೆನ್ಸ್​ ಕಥೆ ಬರೆದೆ. ಆವಾಗ ಅಂತಹ ಥ್ರಿಲ್ಲರ್ ಸಿನಿಮಾ ಬಂದಿದ್ದು ಮೊದಲು. ಜನ ಇಷ್ಟ ಪಡುತ್ತಾರಾ, ಜನ ವರ್ಕ್ ಆಗುತ್ತೋ ಇಲ್ವೋ ಎಂದು ಆಲೋಚನೆ ಮಾಡುತ್ತಿರಲಿಲ್ಲ. ನನ್ನ ತಲೆಯಲ್ಲಿ ಬಂದಿದ್ದ ಐಡಿಯಾವನ್ನು ನೀಟ್​ ಆಗಿ ಹೊರಗೆ ತರುತ್ತಿದ್ದೆ. ನನ್ನ ತಲೆಯಲ್ಲಿದ್ದ ಥಾಟ್​ ಸ್ಕ್ರೀನ್​ ಮೇಲೆ ಚೆನ್ನಾಗಿ ಬರುತ್ತಿದೆ ಎಂದು ಗೊತ್ತಾದ್ರೆ ಸಾಕು, ನಾನು ಗೆದ್ದೆ ಎಂದು ಅನ್ಕೊಳ್ತಿದ್ದೆ ಎಂದರು.

ನನಗೆ ಡಿಸ್ಟ್ರೀಬ್ಯೂಟರ್​ ಅಂತ ಇದ್ದಿದ್ದು ಜಯಣ್ಣ ಫಿಲಂಸ್​. ಹಾಗಾಗಿ ನಾನು-ಜಯಣ್ಣ ಸ್ವಲ್ಪ ತುಂಬಾ ಕ್ಲೋಸ್ ಆಗಿ ಇರುತ್ತಿದ್ದೇವೆ. ನನಗೆ ಯಾವುದೇ ಕೆಲಸ ಇಲ್ಲದಿದ್ದರೂ ಅವರ ಆಫೀಸ್​​ಗೆ ಹೋಗಿ ಕುಳಿತುಕೊಂಡು ಸಿನಿಮಾ ಬ್ಯುಸಿನೆಸ್ ಹೇಗೆಲ್ಲ ನಡೆಯುತ್ತೆ ಎಂದು ನೋಡುತ್ತಿದ್ದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಾವುದೋ ಸಿನಿಮಾದ ಶೂಟಿಂಗ್​ಗಾಗಿ ಬ್ಯಾಂಕಾಕ್​ಗೆ ಹೋಗಿದ್ದೇವು. ಈ ವೇಳೆ ನಾನು, ಜಯಣ್ಣ ಒಂದೇ ರೂಮ್​ನಲ್ಲಿದ್ದಾಗ ಜೊತೆ ಜೊತೆ ಸಿನಿಮಾ ಮಾಡುವುದಕ್ಕೂ ಮೊದಲೇ ಈ ತರ ಒಂದು ಕಥೆ ಇದೆ. ಮಾಡೋಣ್ವಾ ಜಯಣ್ಣ ಎಂದು ಕೇಳಿದ್ದೆ. ದರ್ಶನ್​ರನ್ನು​ ವಿಲನ್ ಆಗಿ ತೋರಿಸಿದರೆ​ ಫ್ಯಾನ್ಸ್​ ಅಕ್ಷೆಪ್ಟ್ ಮಾಡ್ತಾರಾ?. ಬೇಜಾರ್, ಗೀಜಾರ್ ಆಗಿಬಿಡ್ತಾರಾ ಎಂದುಕೊಂಡಿದ್ದೇವು. ಆದರೆ ಆ ಕ್ಯಾರೆಕ್ಟರ್​​ಗೆ ದರ್ಶನ್​ ಆದ್ರೆ ಮಾಡಬಹುದು ಎಂದು ಅನಿಸಿತು. ಏಕೆಂದರೆ ಅವರು ಅದಕ್ಕೂ ಹಿಂದೆ ಮಾಡಿದಂತ ಮೆಜೆಸ್ಟಿಕ್, ದಾಸ, ಕರಿಯ ಸಿನಿಮಾಗಳಲ್ಲಿ ಒಂದು ರೀತಿ ನೆಗೆಟೀವ್ ಶೇಡ್​ನಲ್ಲಿ ಹೀರೋ ಕಮ್ ವಿಲನ್ ರೋಲ್​ನಲ್ಲಿ ಕಾಣಿಸಿ ಸೈ ಎನಿಸಿಕೊಂಡಿದ್ದರು. ಇದರಿಂದ ದರ್ಶನ್​ ಆದರೆ ಫ್ಯಾನ್ಸ್​ ಅಕ್ಷೆಪ್ಟ್​ ಮಾಡಿಕೊಳ್ಳುತ್ತಾರೆ ಎಂದುಕೊಂಡೇವು.

ಸಿನಿಮಾ ಬ್ಯುಸಿನೆಸ್ ಮಾಡುವಾಗ ಮೊದಲು ಸ್ವಲ್ಪ ಸಮಸ್ಯೆ ಆಯಿತು. ಆಡಿಯೋ, ಡಿಸ್ಟ್ರೀಬ್ಯುಸಿನ್, ಸ್ಯಾಟಲೈಟ್ ಮಾಡುವಾಗ ಲೈಟ್​ ಆಗಿ ಪ್ರಾಬ್ಲಮ್​ ಆಯಿತು. ಆದ್ರೆ ಸಿನಿಮಾ ರಿಲೀಸ್ ಆದ ಮೇಲೆ ಜನರು ಎರಡು ಕೈಯಿಂದ ಬಾಚಿ ತಬ್ಬಿಕೊಂಡರು ಎಂದು ಡೈರೆಕ್ಟರ್ ದಿನಕರ್ ತೂಗುದೀಪ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನನ್ನ ಕ್ಯಾರೆಕ್ಟರ್​ ನೋಡಿದ್ರೆ ಹೆಣ್ಮಕ್ಕಳು ಥೂ ಅನ್ನಬೇಕು’- ದಿನಕರ್​​ಗೆ ದರ್ಶನ್​​ ಹೀಗೆ ಹೇಳಿದ್ರಂತೆ!

https://newsfirstlive.com/wp-content/uploads/2023/11/DINAKAR_DARSHAN.jpg

Load More