ನಾಲ್ಕನೇ ವರ್ಷಕ್ಕೆ ಕಾಲಿಟ್ಟ ನಿಮ್ಮ ನ್ಯೂಸ್ಫಸ್ಟ್ ಸುದ್ದಿ ವಾಹಿನಿ
ರಾಜ್ಯದ ಜನಪ್ರಿಯ ಸುದ್ದಿ ವಾಹಿನಿಯಾಗಿ ನ್ಯೂಸ್ ಫಸ್ಟ್ ಹೆಸರು
ನಾಡಿನ ಸಮಸ್ತ ಜನತೆಗೆ ಹೃದಯಪೂರ್ವಕ ಧನ್ಯವಾದಗಳು
ನಿಮ್ಮ ಪ್ರೀತಿಯ ನ್ಯೂಸ್ ಫಸ್ಟ್ಗೆ ಇವತ್ತು ಮೂರು ವರ್ಷ ಪೂರ್ಣಗೊಂಡ ಸಂಭ್ರಮ. ಪ್ರತಿಕ್ಷಣ ನಿಮ್ಮ ಪರವಾಗಿ ಇರ್ತೀವಿ ಅನ್ನೋ ಭರವಸೆಯೊಂದಿಗೆ ಮೂರು ವರ್ಷದ ಹಿಂದೆ ನಿಮ್ಮ ಪ್ರೀತಿಯ ವಾಹಿನಿ ನ್ಯೂಸ್ಫಸ್ಟ್ ಆರಂಭವಾಗಿತ್ತು. ನೀವು ನಮ್ಮ ಮೇಲಿಟ್ಟ ವಿಶ್ವಾಸ, ನೀವು ತೋರಿಸಿದ ಪ್ರೀತಿ, ನೀವು ಮಾಡಿದ ಆಶೀರ್ವಾದಿಂದ ನ್ಯೂಸ್ಫಸ್ಟ್ ರಾಜ್ಯದ ಅತ್ಯಂತ ಜನಪ್ರಿಯ ಸುದ್ದಿವಾಹಿನಿಯಾಗಿ ಹೆಸರು ಮಾಡಿದೆ. ರಾಜ್ಯದಲ್ಲಿ ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿರುವ ವಾಹಿನಿ ಅಂತಲೂ ನ್ಯೂಸ್ಫಸ್ಟ್ ಖ್ಯಾತಿಯಾಗಿದೆ.
ಪ್ರತಿಕ್ಷಣ ನಿಮ್ಮೊಂದಿಗೆ ಅನ್ನೋ ಧ್ಯೇಯವಾಕ್ಯದೊಂದಿಗೆ ಆರಂಭವಾದ ನ್ಯೂಸ್ಫಸ್ಟ್ ಅದಕ್ಕೆ ತಕ್ಕ ಬದ್ಧತೆ ತೋರಿದೆ. ಸಣ್ಣ ಸಣ್ಣ ಮಕ್ಕಳು ಡ್ರಗ್ಸ್ಗೆ ದಾಸರಾಗ್ತಿರೋದನ್ನು ನೋಡಿ ನಾವು ಸುಮ್ಮನೆ ಕೂರಲಿಲ್ಲ. ಡ್ರಗ್ಸ್ ಸಪ್ಲೈ ಮಾಡ್ತಿರೋದು ಯಾರು? ಎಲ್ಲಿಂದ ಮಕ್ಕಳಿಗೆ ಇದು ಸಿಗ್ತಿದೆ ಅನ್ನೋ ಇಂಚಿಂಚು ಮಾಹಿತಿಯನ್ನೂ ನಮ್ಮ ರಹಸ್ಯ ಕಾರ್ಯಾಚರಣೆ ಮೂಲಕ ಬಯಲಿಗೆಳೆದಿದ್ದೇವೆ. ಇದಾದ ಬಳಿಕ ಕರ್ನಾಟಕ ಪೊಲೀಸರು ಹಲವಾರು ಸ್ಥಳಗಳಲ್ಲಿ ದಾಳಿ ಮಾಡಿ ಅವರನ್ನು ಬಂಧಿಸಿದ್ದು ತಿಳಿದಿರುವ ವಿಚಾರ.
ಇವೆಲ್ಲವುಗಳಿಗಿಂತ ಮುಖ್ಯವಾಗಿ ಭ್ರಷ್ಟರ ವಿರುದ್ಧ ನಾವು ಮಾಡಿದ ಅತಿದೊಡ್ಡ ಬೇಟೆ. ರಾಜ್ಯದ ಮಾಧ್ಯಮ ಇತಿಹಾಸದಲ್ಲಿ ಇದುವರೆಗೂ ಯಾರೂ ಮಾಡಿರದಂತಹ ಸಾಹಸಕ್ಕೆ ನ್ಯೂಸ್ಫಸ್ಟ್ ಕೈಹಾಕಿತ್ತು. ಇದರಿಂದ ನಮಗೆ ಅಪಾಯ ಇದೆ ಅಂತಾ ಗೊತ್ತಿದ್ರೂ ಹಿಂಜರಿಯಲಿಲ್ಲ. ಕಳೆದ ಸರ್ಕಾರದ ಸಚಿವೆಯೊಬ್ಬರ ಭ್ರಷ್ಟಾಚಾರವನ್ನು ಸಾಕ್ಷಿ ಸಮೇತ ಬಯಲು ಮಾಡಲಾಗಿತ್ತು. ಬಡ ಮಕ್ಕಳಿಗೆ ತಲುಪಬೇಕಿದ್ದ ಯೋಜನೆಯಲ್ಲಿ ನಡೆಯುತ್ತಿದ್ದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳಿದಿದ್ದು ನ್ಯೂಸ್ಫಸ್ಟ್ ಮಾತ್ರ.
ಮುರುಘಾ ಶ್ರೀ ನಾಡಿನ ಹೆಸರಾಂತ ಮಠದ ಪೀಠಾಧಿಪತಿಗಳಾಗಿದ್ದವರು. ಇವರು ವರ್ತಿಸಿದ ರೀತಿ ಹೇಗಿತ್ತು ಅಂದ್ರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ. ತಾವೇ ಆಶ್ರಯ ನೀಡಿದ್ದ ಎಳೆಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಇವರ ಮೇಲೆ ಕೇಳಿ ಬಂದಿತ್ತು. ಅತ್ಯಂತ ಪ್ರಭಾವಿಯಾಗಿದ್ದ ಈ ಸ್ವಾಮಿಯ ವಿರುದ್ಧದ ಸುದ್ದಿಯನ್ನ ಮೊದಲು ಬಯಲಿಗೆಳೆದಿದ್ದೇ ನ್ಯೂಸ್ಫಸ್ಟ್. ಈ ಸುದ್ದಿಯನ್ನು ತೆಗೆದುಕೊಳ್ಳಲು ಉಳಿದ ವಾಹಿನಿಗಳು ಹಿಂಜರಿಯುತ್ತಿದ್ದ ಸಮಯದಲ್ಲಿ ನ್ಯೂಸ್ಫಸ್ಟ್ ಮಾತ್ರ ನಿರ್ಭೀತಿಯಿಂದ ನಡೆದುಕೊಂಡಿದ್ದು ರಾಜ್ಯದ ಜನರ ಮೆಚ್ಚುಗೆಗೆ ಪಾತ್ರವಾಯ್ತು.
ದೊಡ್ಡ ದೊಡ್ಡ ಹಗರಣಗಳಷ್ಟೇ ಅಲ್ಲ, ನಮ್ಮ ಈ ಮೂರು ವರ್ಷದ ಪಯಣದಲ್ಲಿ , ಕುಡಿಯೋಕೆ ನೀರಿಲ್ಲದೆ ಪರದಾಡುತ್ತಿದ್ದವರಿಗೆ ನೀರು ಸಿಕ್ಕಿದೆ. ದಶಕಗಳು ಕಳೆದ್ರೂ ಹಕ್ಕುಪತ್ರ ಸಿಗದೇ ಪರದಾಡುತ್ತಿದ್ದವರಿಗೆ ಈಗ ಹಕ್ಕುಪತ್ರ ಸಿಕ್ಕಿದೆ. ರಸ್ತೆಯನ್ನೇ ಕಾಣದ ಗ್ರಾಮಗಳಲ್ಲಿ ಈಗ ರಸ್ತೆಯಾಗಿದೆ. ಬಸ್ ಸೇವೆಯನ್ನೇ ನೋಡಿರದ ಜನರು ಸಂಭ್ರಮದ ಸವಾರಿ ಮಾಡ್ತಿದ್ದಾರೆ. ಇಂತಹ ಹಲವು ಸಮಸ್ಯೆಗಳ ಬಗ್ಗೆ ನ್ಯೂಸ್ಫಸ್ಟ್ ಬೆಳಕು ಚೆಲ್ಲಿತ್ತು. ಇವತ್ತು ಆ ಜನರ ಮುಖದಲ್ಲಿ ನಗು ಮೂಡಿದೆ. ಜನರ ಸಮಸ್ಯೆಗಳು ಈ ರೀತಿ ಇವೆ ಅಂತಾ ನಾವು ಅಧಿಕಾರಿಗಳನ್ನು ರಾಜಕಾರಣಿಗಳನ್ನ ಸಂಪರ್ಕ ಮಾಡಿದಾಗ ಅವರೆಲ್ಲರೂ ಸಮಸ್ಯೆ ಬಗೆಹರಿಸುವ ಪ್ರಮಾಣಿಕ ಪ್ರಯತ್ನವನ್ನೂ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಮೂಲಕ ಜನರಿಗೆ ನೆರವಾದ ಆ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೂ ನಾವು ಧನ್ಯವಾದಗಳನ್ನ ತಿಳಿಸಲು ಬಯಸುತ್ತೇವೆ.
ವಿಶೇಷವಾಗಿ ಅಲ್ಪ ಅವಧಿಯಲ್ಲೇ ನಮಗೆ ಅಭೂತಪೂರ್ವ ಯಶಸ್ಸು ಸಿಗಲು ಕಾರಣರಾದ ಕರ್ನಾಟಕದ ಜನತೆಗೆ ನಮ್ಮ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಲು ನಾವು ಬಯಸುತ್ತೇವೆ. ಪ್ರತಿಕ್ಷಣ ನಿಮ್ಮೊಂದಿಗೆ ಅನ್ನೋ ಬದ್ಧತೆ ತೋರಿದ ನಾವು ಇನ್ಮುಂದೆ ನಿರ್ಭೀತಿಯಿಂದ ನಿಮ್ಮ ಪರವಾಗಿ ಅಂತಾ ಭರವಸೆ ಕೊಡ್ತಾ, ಮತ್ತೊಮ್ಮೆ ನಾಡಿನ ಜನತೆಗೆ ಧನ್ಯವಾದಗಳನ್ನು ತಿಳಿಸುತ್ತೇವೆ. ಥ್ಯಾಂಕ್ಯೂ ಕರ್ನಾಟಕ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ