newsfirstkannada.com

U/I ಸಿನಿಮಾ ಶೂಟಿಂಗ್ ಮುಗಿಸಿದ್ರಾ ರಿಯಲ್ ಸ್ಟಾರ್​?; ಐತಿಹಾಸಿಕ ಕಥೆಯಲ್ಲಿ ನೆಕ್ಸ್ಟ್​ ಪ್ರಾಜೆಕ್ಟ್​ಗೂ ಉಪ್ಪಿ ರೆಡಿ

Share :

21-06-2023

    ಯು/ಐಯ ಶೇ.90 ರಷ್ಟು ಶೂಟಿಂಗ್ ಕಂಪ್ಲೀಟ್​ ಮಾಡಿದ ಉಪೇಂದ್ರ

    ಐತಿಹಾಸಿಕ ಕಥೆಯ ಮುಂದಿನ ಸಿನಿಮಾಗೆ ಕೈ ಹಾಕಿದ ರಿಯಲ್ ಸ್ಟಾರ್

    'ಯೂನಿವೆರ್ಸ್ ಸಿನಿಮಾಗಳ' ಟ್ರೆಂಡ್​ ಫಾಲೋ ಮಾಡ್ತಾರಾ ಉಪ್ಪಿ..?

ಉಪ್ಪಿ ಏನೇ ಮಾಡಿದ್ರು ಅದು ಸ್ಟೈಲು. ಏನ್ ಮಾಡಿದ್ರು ಅದು ಬ್ರ್ಯಾಂಡ್​. ಎಷ್ಟೇ ಡೈರೆಕ್ಟರ್ ಬಂದ್ರು, ಎಷ್ಟೇ ವಂಡರ್ ಥಂಡರ್ ಸಿನಿಮಾ ಬಂದ್ರೂ ಉಪ್ಪಿಗಿಂತ ರುಚಿ ಇಲ್ಲ ಅನ್ನೋ ಫ್ಯಾನ್ಸ್ ಇದ್ದಾರೆ. ಇಂಥಾ ಬುದ್ಧಿವಂತ ಪ್ರೇಕ್ಷಕರಿಗೆ ಈ ಸಲ ಥ್ರಿಲ್ಲಿಂಗ್ ಎಕ್ಸ್​ಪೀರಿಯನ್ಸ್ ಆದರೂ ಆಗಬಹುದಂತೆ. ಏನದು ಥ್ರಿಲ್ಲಿಂಗ್ ಎಕ್ಸ್​ಪೀರಿಯನ್ಸ್ ಅಂತಾ ಈ ಸ್ಟೋರಿ ನೋಡಿದ್ರೆ ಗೊತ್ತಾಗುತ್ತೆ.

ಕಬ್ಜ ಸಿನಿಮಾದ ನಂತರ ರಿಯಲ್ ಸ್ಟಾರ್ ಸೂಪರ್​ ಸ್ಟಾರ್ ಉಪೇಂದ್ರ ‘ಯುಐ’ ಚಿತ್ರದ ಕಡೆ ಗಮನ ಹರಿಸಿದ್ದಾರೆ. ಬಹುತೇಕ 90 ಪರ್ಸೆಂಟ್ ಶೂಟಿಂಗ್ ಮುಗಿಸಿರುವ ಉಪೇಂದ್ರ, ಆದಷ್ಟು ಬೇಗ ಕೊನೆಯ ಹಂತದ ಕೆಲಸ ಮುಗಿಸಿ ಇದೇ ವರ್ಷ ಪ್ರೇಕ್ಷಕರೆದುರು ಬರಬೇಕು ಅನ್ನೋದು ಟಾರ್ಗೆಟ್ ಹೊಂದಿದ್ದಾರೆ.

8 ವರ್ಷದ ಬಳಿಕ ಡೈರೆಕ್ಷನ್​ ಮಾಡ್ತಿರೋ ಉಪೇಂದ್ರ
8 ವರ್ಷದ ಆದ ಮೇಲೆ ಉಪ್ಪಿ ಡೈರೆಕ್ಷನ್ ಮಾಡ್ತಿರೋ ಕಾರಣ ‘ಯುಐ’ ಚಿತ್ರದ ಮೇಲೆ ನಿರೀಕ್ಷೆ ದೊಡ್ಡದಾಗಿದೆ. ಕಾಲ ಕಾಲಕ್ಕೂ ಡಿಫ್ರೆಂಟ್ ಸಿನಿಮಾಗಳನ್ನೇ ಕೊಡ್ತಾ ಬಂದಿರೋ ಉಪ್ಪಿ ಈ ಸಲ ಎಷ್ಟು ಡಿಫ್ರೆಂಟ್ ಆಗಿ ಯೋಚನೆ ಮಾಡಿರ್ತಾರೆ ಅನ್ನೋ ಕ್ಯೂರಿಯಸಿಟಿ ಬಿಲ್ಡ್ ಆಗಿದೆ. ಆದ್ರೆ ಚಿತ್ರಕಥೆ ಬಗ್ಗೆ ಒಂದೇ ಒಂದು ಸುಳಿವು ಬಿಟ್ಟು ಕೊಡದ ಉಪ್ಪಿ ಅಂಡ್ ಟೀಮ್ ಸೈಲೆಂಟ್ ಆಲ್ಮೋಸ್ಟ್ ಸಿನಿಮಾ ಕಂಪ್ಲೀಟ್ ಮಾಡಿದ್ದಾರೆ. ಇನ್ನೊಂದು 25 ದಿನ ಕೆಲಸ ಮುಗಿಸಿದ್ರೆ ಯುಐಗೆ ಕುಂಬಳಕಾಯಿ ಹೊಡೆದ ಹಾಗೆ.

ಹೊಸ ಟ್ರೆಂಡ್ ಫಾಲೋ ಮಾಡ್ತಾರಾ ಉಪ್ಪಿ?
ದಿನ ಬದಲಾದಂತೆ ಸಿನಿಮಾ ಮಾಡೋ ಸ್ಟೈಲ್, ಸಿನಿಮಾ ಮಾಡೋ ಮಂದಿನೂ ಚೇಂಜ್ ಆಗಿದ್ದಾರೆ. ಇನ್ನು ಬದಲಾವಣೆಯೇ ಮನೆದೇವ್ರು ಅನ್ನೋ ಉಪ್ಪಿ ಸುಮ್ಮನಿರ್ತಾರಾ? ಈ ಸಲ ಏನಾದ್ರು ವಿಶೇಷವಾಗಿ ಕೊಡ್ಬೇಕು ಅಂತ ಬಹಳ ಯೋಚಿಸಿ ಸಿನಿಮಾ ಮಾಡ್ತಿದ್ದಾರೆ. ಇಂಥ ಸಿರೀಯಸ್ ಯೋಚನೆ ನಡುವೆ ಈಗ ಹೊಸ ವಿಷಯವೊಂದು ಕೇಳಿಬರ್ತಿದೆ. ಈಗಾಗ್ಲೇ ಬೇರೆ ಬೇರೆ ಇಂಡಸ್ಟ್ರೀಯಲ್ಲಿ ಜನ್ಮ ತಾಳಿರೋ ‘ಯೂನಿವೆರ್ಸ್ ಸಿನಿಮಾಗಳು’ ಅನ್ನೋ ಟ್ರೆಂಡ್​ ಅನ್ನು ಉಪ್ಪಿನೂ ಫಾಲೋ ಮಾಡ್ತಾರೆ ಎನ್ನಲಾಗ್ತಿದೆ. ಬಾಲಿವುಡ್ನಲ್ಲಿ ‘ಸ್ಪೈ ಯೂನಿವರ್ಸ್’ ಚಾಲ್ತಿಯಲ್ಲಿದೆ. ಸೌತ್​ ಅಲ್ಲೂ ‘ಕ್ರೈಂ ಯೂನಿವರ್ಸ್’ ಕಥೆಗಳು ಮೋಡಿ ಮಾಡಿವೆ. ಈ ಕಡೆ ಕನ್ನಡದಲ್ಲೂ ಇಂಥಹ ಟ್ರೆಂಡ್​ ಉಪೇಂದ್ರ ನಾಂದಿ ಹಾಡ್ತಾರಾ ಎಂಬ ಕುತೂಹಲ ಕಾಡ್ತಿದೆ.

‘ಶ್ರೀನಿವಾಸ ಕಲ್ಯಾಣ’, ‘ಬೀರ್ಬಲ್’ ಖ್ಯಾತಿಯ ಶ್ರೀನಿ ಸದ್ಯ ಶಿವರಾಜ್ ಕುಮಾರ್ ಜೊತೆ ‘ಘೋಸ್ಟ್’ ಸಿನಿಮಾ ಮಾಡ್ತಿದ್ದು, ಇದು ಸ್ಯಾಂಡಲ್​ವುಡ್​ ಹೊಸ ಯೂನಿವೆರ್ಸ್ ಎಂದು ಹೇಳಲಾಗ್ತಿದೆ. ಈಗ ಉಪೇಂದ್ರ ಅವರು ಕೂಡ ಇಂಥದ್ದೇ ಆಲೋಚನೆ ಮಾಡಿದ್ದು ‘ಯುಐ’ ಚಿತ್ರದೊಂದಿಗೆ ಉಪ್ಪಿ ವೆರ್ಸ್ಗೆ ಚಾಲನೆ ಕೊಡುವ ನಿರೀಕ್ಷೆ ಇದೆ. ಈ ಮೂಲಕ ‘ಯುಐ’ ಸಿನಿಮಾದ ಕಥೆ, ಸಿರೀಸ್ ಆಗಿ ಮುಂದುವರಿದರು ಅಚ್ಚರಿ ಇಲ್ಲ.

ಇನ್ನು ಯುಐ ಮುಗಿತಿದ್ದಂತೆ ನಿರ್ದೇಶಕ ನಾಗಣ್ಣ ಜೊತೆ ಐತಿಹಾಸಿಕ ಸಿನಿಮಾವೊಂದಕ್ಕೆ ಕೈ ಜೋಡಿಸಲಿದ್ದಾರೆ. 15ನೇ ಶತಮಾನದಲ್ಲಿ ಭಕ್ತಿಪಂಥದ ಪ್ರಮುಖರು ಎನಿಸಿಕೊಂಡಿರುವ ಕನಕದಾಸರ ಕುರಿತಾದ ಚಿತ್ರದಲ್ಲಿ ಉಪೇಂದ್ರ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕಾಗಿ ಪೂರ್ವ ತಯಾರಿಯ ಅಗತ್ಯವಿದ್ದು, ಯುಐ ಪೂರ್ಣಗೊಳಿಸಿದ ನಂತರ ಕನಕದಾಸರ ಪಾತ್ರಕ್ಕೆ ರೆಡಿಯಾಗಲಿದ್ದಾರಂತೆ ಉಪ್ಪಿ.

ಉಪ್ಪಿ ಅಭಿಮಾನಿಗಳಿಗೆ ‘ಯು/ಐ’ ತುಂಬಾನೇ ಸ್ಪೆಷಲ್ ಅಂಡ್ ಸ್ಪೆಷಲ್ ಆಗಲಿದೆ. ಒಂದ್ಕಡೆ ಉಪ್ಪಿ ಡೈರೆಕ್ಷನ್ ಸಿನಿಮಾ ಅಂತಿದ್ರೆ ಮತ್ತೊಂದ್ಕಡೆ ಉಪ್ಪಿ ವೆರ್ಸ್ ಕ್ರಿಯೇಟ್ ಆಗಬಹುದು ಅನ್ನೋ ಹೊಸ ಭರವಸೆ ಹುಟ್ಟಿಕೊಂಡಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

U/I ಸಿನಿಮಾ ಶೂಟಿಂಗ್ ಮುಗಿಸಿದ್ರಾ ರಿಯಲ್ ಸ್ಟಾರ್​?; ಐತಿಹಾಸಿಕ ಕಥೆಯಲ್ಲಿ ನೆಕ್ಸ್ಟ್​ ಪ್ರಾಜೆಕ್ಟ್​ಗೂ ಉಪ್ಪಿ ರೆಡಿ

https://newsfirstlive.com/wp-content/uploads/2023/06/UPENDRA_UI.jpg

Load More