newsfirstkannada.com

ಹೆತ್ತ ಮಗನೇ ನನ್ನ ಕೊಲೆ ಮಾಡ್ತೀನಿ ಎನ್ನುತ್ತಿದ್ದಾನೆ- ಗಳಗಳನೇ ಕಣ್ಣೀರಿಟ್ಟ ಹಿರಿಯ ನಟಿ ಶ್ಯಾಮಲ ದೇವಿ

Share :

21-06-2023

    ಅದ್ಭುತ ನಟನೆಯಿಂದಲೇ ಖ್ಯಾತಿ ಪಡೆದ ಹಿರಿಯ ನಟಿ

    ಪೋಷಕ ನಟಿ ಪಾತ್ರಗಳಲ್ಲಿ ಪಾತ್ರಕ್ಕೆ ಜೀವ ತುಂಬುತ್ತಿದ್ದರು

    ಮಗ ಟಾರ್ಚರ್​ ನೀಡಿದ್ದಾನೆ ಎಂದು ಠಾಣೆ ಮೆಟ್ಟಿಲೇರಿದ್ದಾರೆ

ಬೆಂಗಳೂರು: ಆಕೆ ಹಿರಿತೆರೆ ಮತ್ತು ಕಿರುತೆರೆಯಲ್ಲಿ ತಮ್ಮ ಅದ್ಭುತ ನಟನೆಯಿಂದ ಖ್ಯಾತಿ ಪಡೆದ ಹಿರಿಯ ನಟಿ. ಪೋಷಕ ನಟಿಯ ಪಾತ್ರಗಳಲ್ಲಿ ಪಾತ್ರಕ್ಕೆ ಜೀವ ತುಂಬಿಸಿ ಜನರನ್ನ ರಂಜಿಸಿದ್ದ ನಟಿ. ಆದ್ರೆ ಆಕೆಯ ಬದುಕಲ್ಲಿ ಆಕೆಗೆ ವಿಲನ್ ಆಗಿದ್ದು ಆಕೆಯ ಮಗ ಹಾಗೂ ಸೊಸೆ. ಕನ್ನಡದ ಸಾಕಷ್ಟು ಸಿನಿಮಾ ಮತ್ತು ಸೀರಿಯಲ್​​ಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದವರು.

ಹೆಸರು ಶ್ಯಾಮಲಾ ದೇವಿ. ನಿರ್ದೇಶಕ ಸಿದ್ದಲಿಂಗಯ್ಯ ಅವರ ಪತ್ನಿ ಚಂದ್ರಾಲೇಔಟ್ ನಿವಾಸಿಯಾಗಿರೋ ಇವರು ಇದೀಗ ತಾನು ಸಾಕಿ ಸಲಹಿಸಿದ ಮಗನಿಂದಲೇ ಇನ್ನಿಲ್ಲದ ಕಷ್ಟ ಎದುರಿಸುವಂತಾಗಿದೆ. ಮಗ ನಿತಿನ್, ಸೊಸೆ ಸ್ಮಿತಾ ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕಾದ ಸಮಯದಲ್ಲಿ ಇನ್ನಿಲ್ಲದ ಟಾರ್ಚರ್ ಕೊಡ್ತಿದ್ದಾರೆ ಅಂತ ಶ್ಯಾಮಲಾದೇವಿ ಆರೋಪ ಮಾಡ್ತಿದ್ದಾರೆ. ಆಸ್ತಿಯನ್ನ ತನಗೆ ವರ್ಗಾಹಿಸುವಂತೆ ಅವಾಚ್ಯ ಶಬ್ಥಗಳಿಂದ ನಿಂದಿಸುತ್ತಿದ್ದಾರೆ. ಮನೆಯಿಂದ ಹೊರಹಾಕಿದ್ರು, ಮತ್ತೆ ಸೊಸೆ ಗರ್ಭಿಣಿ ಇದ್ದಾರೆ ಅಂಥ ಮನೆಗೆ ಸೇರಿಕೊಂಡ್ರೆ ಮತ್ತೇ ಟಾರ್ಚರ್ ಕೋಡೋಕೆ ಮುಂದಾಗಿದ್ದಾರೆ.

ಆಸ್ತಿ ತನ್ನ ಹೆಸರಿಗೆ ವರ್ಗಾಹಿಸಿಲ್ಲ ಅಂದ್ರೆ ವರದಕ್ಷಿಣಿ ಕಿರುಕುಳ ನೀಡ್ತಿದ್ದಾರೆ ಅಂತ ದೂರು ಕೊಡೋದಾಗಿ ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ ಅಂತೆಲ್ಲಾ ಆರೋಪಿಸಿ ಬಸವನಗುಡಿ ಮಹಿಳಾ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಸವನಗುಡಿ ಮಹಿಳಾ ಪೊಲೀಸ್​ ಠಾಣೆಯ ಸಿಬ್ಬಂದಿ ಕೇಸ್​ನ್ನ ಸೀರಿಯಸ್​ ಆಗಿ ತಗೊಂಡಿಲ್ಲ ಅಂತ ಸದ್ಯ ಶ್ಯಾಮಲಾ ಅವರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ದೂರು ನೀಡಿದ್ದಾರೆ.

ಇನ್ನು ದೂರನ್ನು ದಾಖಲಿಸಿಕೊಂಡ ಪೊಲೀಸ್​​ ಅಧಿಕಾರಿಗಳು ಪುತ್ರ ನಿತಿನ್ ಹಾಗೂ ಸೊಸೆ ಸ್ವಾತಿ ವಿರುದ್ಧ ಐಪಿಸಿ ಸೆಕ್ಷನ್ 323, 504, 506, 509 ಅಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಅದೇನೆ ಇರಲಿ ಕಷ್ಟ ಕಾಲದಲ್ಲಿ ತಾಯಿಗೆ ಆಸರೆ ಆಗಬೇಕಾಗಿದ್ದ ಮಗ ಸೊಸೆ ಈ ರೀತಿ ಮಾಡಿರೋದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಅಲ್ವಾ?

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಹೆತ್ತ ಮಗನೇ ನನ್ನ ಕೊಲೆ ಮಾಡ್ತೀನಿ ಎನ್ನುತ್ತಿದ್ದಾನೆ- ಗಳಗಳನೇ ಕಣ್ಣೀರಿಟ್ಟ ಹಿರಿಯ ನಟಿ ಶ್ಯಾಮಲ ದೇವಿ

https://newsfirstlive.com/wp-content/uploads/2023/06/actress.jpg

Load More