newsfirstkannada.com

×

ಕನ್ನಡದ ಹಿರಿಯ ಪತ್ರಕರ್ತ ವಸಂತ ನಾಡಿಗೇರ್ ನಿಧನ; ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರಿಂದ ಸಂತಾಪ

Share :

Published September 9, 2024 at 10:13am

    ಹೆಡ್​ಲೈನ್ ಮೂಲಕವೇ ಖ್ಯಾತಿ ಗಳಿಸಿದ್ದ ವಸಂತ ನಾಡಿಗೇರ್

    ಕನ್ನಡದ ಯಾವ್ಯಾವ ಪತ್ರಿಕೆಯಲ್ಲಿ ನಾಡಿಗೇರ್ ಕೆಲಸ ಮಾಡಿದ್ದರು?

    ಓದಿರುವುದು ಸೈನ್ಸ್​ ಆದ್ರೂ ಮೆಚ್ಚಿಕೊಂಡಿದ್ದು ಪತ್ರಿಕೋದ್ಯಮ

ಬೆಂಗಳೂರು: ಮೂರೂವರೆ ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ವಿಶೇಷ ಸೇವೆ ಸಲ್ಲಿಸಿದ ಕನ್ನಡದ ಹಿರಿಯ ಪತ್ರಕರ್ತ ವಸಂತ ನಾಡಿಗೇರ್ (59) ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

ವಸಂತ ನಾಡಿಗೇರ್ ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇವರು ಮೂಲತಃ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರು. ಹುಟ್ಟೂರಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದ ಬಳಿಕ ಧಾರವಾಡದಲ್ಲಿ ಬಿಎಸ್​ಸಿ, ಎಂಎಸ್​ಸಿ ಪದವಿ ಪಡೆದರು. ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದರೂ ಪತ್ರಿಕೋದ್ಯಮದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಹೀಗಾಗಿಯೇ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಿಂದ ವೃತ್ತಿ ಆರಂಭಿಸಿದ್ದರು. ನಂತರ ಅವರು ಜರ್ನಲಿಸಂನಲ್ಲಿ ವಿಶೇಷ ಸಾಧನೆಯಲ್ಲಿ ಸಕ್ಸಸ್ ಕಂಡರು. ಹೆಡ್​ಲೈನ್ ಮೂಲಕವೇ ಪತ್ರಿಕೋದ್ಯಮದಲ್ಲಿ ಸಾಕಷ್ಟು ಹೆಸರು ಪಡೆದರು. ಸುದ್ದಿ ಮನೆಗಳಲ್ಲಿ ವಸಂತ್ ಸರ್ ಎಂದೇ ಪ್ರಸಿದ್ಧಿ ಪಡೆದಿದ್ದರು.

ಇದನ್ನೂ ಓದಿ: Breaking News: ಕಾಳಿಂದಿ ಎಕ್ಸ್​ಪ್ರೆಸ್ ಸ್ಫೋಟಕ್ಕೆ ಸಂಚು; ಮಧ್ಯರಾತ್ರಿ ತುಂಬಿದ ಸಿಲಿಂಡರ್​ಗೆ ಡಿಕ್ಕಿ ಹೊಡೆದ ಟ್ರೈನು

ಪತ್ರಿಕೋದ್ಯಮದಲ್ಲಿ ಉಪಸಂಪಾದಕರಾಗಿ, ಸುದ್ದಿ ಸಂಪಾದಕರಾಗಿ ಹಾಗೂ ಸಂಪಾದಕರಾಗಿ ಬದುಕಿನಲ್ಲಿ ಯಶಸ್ಸು ಕಂಡಿದ್ದರು. ತಾವು ಬೆಳೆಯುವ ಜೊತೆಗೆ ಯುವಕರನ್ನು ಪತ್ರಿಕೋದ್ಯಮದಲ್ಲಿ ಬೆಳೆಸಿದ್ದರು. ಇವರ ಬಡಿಗೇರ್ ಹಾಗೂ ನಾಡಿಗೇರ್ ಎನ್ನುವ ಹಾಸ್ಯ ಅಂಕಣ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು. ವಸಂತ ನಾಡಿಗೇರ್ ಅವರು ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ವಿಶ್ವವಾಣಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕಳೆದ 2 ವರ್ಷದಿಂದ ಸಂಯುಕ್ತ ಕರ್ನಾಟಕದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು.

ಕನ್ನಡದ ಹಿರಿಯ ಪತ್ರಕರ್ತ ವಸಂತ ನಾಡಿಗೇರ್ ಅವರ ನಿಧನ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡದ ಹಿರಿಯ ಪತ್ರಕರ್ತ ವಸಂತ ನಾಡಿಗೇರ್ ನಿಧನ; ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರಿಂದ ಸಂತಾಪ

https://newsfirstlive.com/wp-content/uploads/2024/09/VASANTH.jpg

Load More