newsfirstkannada.com

×

ಅಪಘಾತದಲ್ಲಿ ನಟ ಕಿರಣ್ ರಾಜ್‌ಗೆ ಏನಾಯ್ತು.. ಆಸ್ಪತ್ರೆಯಿಂದಲೇ ಮೊದಲ ರಿಯಾಕ್ಷನ್; ಹೇಳಿದ್ದೇನು?

Share :

Published September 11, 2024 at 2:03pm

    ಆದಷ್ಟು ಬೇಗ ಗುಣಮುಖರಾಗಿ ಬನ್ನಿ ಸರ್​ ಅಂತ ಫ್ಯಾನ್ಸ್​ ಪ್ರಾರ್ಥನೆ

    ಸಾಮಾಜಿಕ ಜಾಲತಾಣದಲ್ಲಿ ಕಳವಳ ವ್ಯಕ್ತಪಡಿಸುತ್ತಿರೋ ಅಭಿಮಾನಿಗಳು

    ನಿನ್ನೆ ರಾತ್ರಿ ಅಪಘಾತಕ್ಕೀಡಾದ ನಟ ಕಿರಣ್​ ರಾಜ್ ಪ್ರಯಾಣಿಸುತ್ತಿದ್ದ ಕಾರು

ಕನ್ನಡದ ನಟ ಕಿರಣ್​ ರಾಜ್​ ಅವರು ಪ್ರಯಾಣಿಸುತ್ತಿದ್ದ ಕಾರು ತಡರಾತ್ರಿ 9 ಗಂಟೆ ಸುಮಾರಿಗೆ ಅಪಘಾತಕ್ಕೀಡಾಗಿತ್ತು. ಅಪಘಾತದ ಪರಿಣಾಮ ನಟ ಕಿರಣ್​ ರಾಜ್​ ಅವರ ಎದೆಯ ಭಾಗಕ್ಕೆ ಗಂಭೀರವಾಗಿ ಪೆಟ್ಟು ಆಗಿತ್ತು. ಆ ಕೂಡಲೇ ನಟ ಕಿರಣ್​ ರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.​ ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು.

ಇದನ್ನೂ ಓದಿ: BREAKING: ಕನ್ನಡತಿ ಸೀರಿಯಲ್​ ನಟ ಕಿರಣ್​ ರಾಜ್​ಗೆ ಅಪಘಾತ

ಅಪಘಾತದ ಬಳಿಕ ಆಸ್ಪತ್ರೆಯಿಂದ ನಟ ಕಿರಣ್ ರಾಜ್ ವಿಡಿಯೋ ಹೇಳಿಕೆ ಬಂದಿದೆ. ಈ ವಿಡಿಯೋದಲ್ಲಿ ನಟ ಕಿರಣ್​ ನಥಿಂಗ್ ಟು ವರಿ. ಸ್ವಲ್ಪ ಪೆಟ್ಟಾಗಿದೆ. ಡಾಕ್ಟರ್ ಟ್ರೀಟ್ಮೆಂಟ್ ಕೊಡ್ತಿದ್ದಾರೆ. ದಯವಿಟ್ಟು ಯಾರು ಪ್ಯಾನಿಕ್ ಆಗ್ಬೇಡಿ. ನಾನು ಆರಾಮ ಆಗಿ ಇದ್ದೇನೆ. ಥ್ಯಾಂಕ್ ಯೂ ಆಲ್ ಅಂತ ಹೇಳಿದ್ದಾರೆ. ಈ ಮೂಲಕ ನಟ ಕಿರಣ್​ ರಾಜ್​ ಅಭಿಮಾನಿಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಕನ್ನಡತಿ ಮೂಲಕ ಇಡೀ ಕನ್ನಡಿಗರ ಮನೆ ಹಾಗೂ ಮನವನ್ನು ತಲುಪಿದ ನಟ ಕಿರಣ್​​​ ರಾಜ್ ಸಿನಿಮಾ ರಿಲೀಸ್​ ಆಗುತ್ತಿದೆ.​​​ ನಾಳೆ ರಾಜ್ಯಾದ್ಯಂತ ಬಹುನೀರಿಕ್ಷಿತ ಸಿನಿಮಾ ರಾನಿ ರಿಲೀಸ್​ ಆಗುತ್ತಿದೆ. ಆದರೆ ಇದರ ಮಧ್ಯೆ ನಟ ಕಿರಣ್ ರಾಜ್​ ಕಾರಿಗೆ ಅಪಘಾತವಾಗಿದೆ. ಸದ್ಯ ಕಿರಣ್​​​ ರಾಜ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನಟ ಕಿರಣ್​ ರಾಜ್​ ಜೊತೆಯಲ್ಲಿದ್ದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸೀಟ್ ಬೆಲ್ಟ್ ಹಾಕಿಕೊಂಡಿದ್ದರಿಂದ ಸೇಫ್ ಆಗಿದ್ದಾರೆ.

ಈಗಾಗಲೇ ನಟ ಕಿರಣ್​ ರಾಜ್ ಅವರು ಅಸತೋಮ ಸದ್ಗಮಯ, ಬಡ್ಡೀಸ್, ಭರ್ಜರಿ ಗಂಡು, ಮಾರ್ಚ್​ 22 ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಗ್ಯಾಂಗ್​ಸ್ಟರ್​ ಕಥೆಯಲ್ಲಿ ಡಾನ್​ ಪಾತ್ರದಲ್ಲಿ ನಟಿಸಿರುವ ಕಿರಣ್ ರಾಜ್ ಜಬರ್​ದಸ್ತ್ ಆ್ಯಕ್ಷನ್ ಮೂಲಕ ಗಮನ ಸೆಳೆದಿದ್ದಾರೆ. ಗುರುತೇಜ್ ಶೆಟ್ಟಿ ಈ ಚಿತ್ರ ನಿರ್ದೇಶಿಸಿದ್ದು, ರವಿಶಂಕರ್, ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಸೀರಿಯಲ್​ ನಟಿ ಸಮೀಕ್ಷಾ ಈ ಚಿತ್ರಕ್ಕೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪಘಾತದಲ್ಲಿ ನಟ ಕಿರಣ್ ರಾಜ್‌ಗೆ ಏನಾಯ್ತು.. ಆಸ್ಪತ್ರೆಯಿಂದಲೇ ಮೊದಲ ರಿಯಾಕ್ಷನ್; ಹೇಳಿದ್ದೇನು?

https://newsfirstlive.com/wp-content/uploads/2024/09/kiran-raj3.jpg

Load More