ಸಂಜನಾ, ನರಸಿಂಹ ಇಬ್ಬರ ಕಾಂಬಿನೇಷನ್ಗೆ ಫ್ಯಾನ್ಸ್ ಫಿದಾ
ನಿಧನವಾಗಿ ವೀಕ್ಷಕರಿಗೆ ಹತ್ತಿರವಾಗ್ತಿದೆ ಬ್ರಹ್ಮಗಂಟು ಸೀರಿಯಲ್
ಸೌಮ್ಯ ಸ್ವಭಾವ ಹುಡುಗಿ, ಜಂಬದ ಸಂಜನಾ ಆಗಿದ್ದು ಹೇಗೆ?
ಕನ್ನಡ ಕಿರುತೆರೆಯಲ್ಲಿ ಹೊಸ ಹೊಸ ಸೀರಿಯಲ್ಗಳು ಬರ್ತಾನೆ ಇರುತ್ತವೆ. ಆದರೆ ಕೆಲವೊಂದು ಸೀರಿಯಲ್ಗಳು ಮಾತ್ರ ವೀಕ್ಷಕರ ಮನಸ್ಸಿಗೆ ಹತ್ತಿರವಾಗುತ್ತವೆ. ಅದೇ ಸಾಲಿನಲ್ಲಿ ಬ್ರಹ್ಮಗಂಟು ನಿಧಾನವಾಗಿ ವೀಕ್ಷಕರಿಗೆ ಹತ್ತಿರವಾಗ್ತಿದೆ. ಪಾರು ಸೀರಿಯಲ್ನಲ್ಲಿ ಕೆಲಸ ಮಾಡಿದ ತಂಡನೇ ಬ್ರಹ್ಮಗಂಟುಗೆ ವರ್ಕ್ ಮಾಡ್ತಿರೋದು.
ಇದನ್ನೂ ಓದಿ: ಪಡ್ಡೆ ಹುಡುಗರ ನಿದ್ದೆಗೆಡಿಸಿದ ಬ್ರಹ್ಮಗಂಟು ಸೀರಿಯಲ್ ನಟಿ.. ದಿಯಾ ಅವತಾರಕ್ಕೆ ಬೆಚ್ಚಿಬಿದ್ದ ಫ್ಯಾನ್ಸ್!
ಮುಖ್ಯವಾಗಿ ನಟ, ನಿರ್ಮಾಪಕ ಹಾಗೂ ನಿರ್ದೇಶಕ ದಿಲೀಪ್ ರಾಜ್ ಅವರ ನಿರ್ದೇಶನದಲ್ಲಿ ಮೂಡಿಬರ್ತಿರೋ ಸ್ಟೋರಿಯಲ್ಲಿ ವಿಶೇಷವಾದ ದೃಶ್ಯಗಳನ್ನ ಸಂಯೋಜನೆ ಮಾಡಲಾಗುತ್ತಿದೆ. ಹಳೇ ಟೈಟಲ್ನಲ್ಲೇ ಹೊಸ ಕಥೆ ಶರುವಾಗಿ ವೀಕ್ಷಕರ ಮನಸ್ಸಿಗೆ ಹತ್ತಿರವಾಗುತ್ತಿದೆ. ಅಕ್ಕ-ತಂಗಿಯ ಸ್ಟೋರಿ ಇದಾಗಿದ್ದು, ಅಕ್ಕನಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ಧವಿರೋ ತಂಗಿ, ಆ ಪ್ರೀತಿಗೆ ಬೆಲೆ ಕೊಡದ ಅಕ್ಕ. ಅಕ್ಕನಿಗೆ ನಾನೇ ಸುರ ಸುಂದರಿ ಅನ್ನೋ ಮದ, ಆದರೆ ತಂಗಿಗೆ ಅಕ್ಕನಿಗೆ ನೇರಳಾಗಿರೋ ಆಸೆ.
ಈ ಬ್ರಹ್ಮಗಂಟು ಸೀರಿಯಲ್ನಲ್ಲಿ ಹೊಸ ಜೋಡಿಯೊಂದು ಸಖತ್ ಸದ್ದು ಮಾಡ್ತಿದೆ. ಇನ್ಫ್ಯಾಕ್ಟ್ ನಾಯಕ ನಾಯಕಿಗಿಂತ ಈ ಜೋಡಿಯದ್ದೇ ಸುದ್ದಿ ಗದ್ದಲ. ಜಂಬದ ಹುಡುಗಿ ಸಂಜನಾ ಕೊಬ್ಬು ಕರಗಿಸೋಕೆ ನರಸಿಂಹನ ಆಟ ಶುರುವಾಗಿದೆ. ಇಬ್ಬರ ಕಾಂಬಿನೇಷನ್ ದೃಶ್ಯಗಳು ವೀಕ್ಷಕರಿಗೆ ಸಿಕ್ಕಾಪಟ್ಟೆ ಸಖತ್ ಕಿಕ್ ಕೊಡ್ತಿವೆ. ಅಷ್ಟಕ್ಕೂ ಸಂಜನಾ ಪಾತ್ರ ಮಾಡಿದ ನಟಿ ಹೊಸಬರಲ್ಲ. ಜನಪ್ರಿಯ ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿ ಪಾತ್ರ ಮಾಡಿದ್ದರು. ಸೌಮ್ಯ ಸ್ವಭಾವದ ಆರತಿ ಈಗ ಜಂಬದ ಹುಡುಗಿ ಸಂಜನಾ ಆಗಿ ವೀಕ್ಷಕರ ಗಮನವನ್ನು ಸೆಳೆಯುತ್ತಿದ್ದಾರೆ.
ಅಂದ್ಹಾಗೆ ಇವರ ನಿಜವಾದ ಹೆಸರು ಆರತಿ ಪಡುಬಿದ್ರಿ. ಇತ್ತಿಚೀಗೆ ಆರತಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ರಾಜಸ್ತಾನಿ ರಾಯಲ್ ಲುಕ್ನಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಗಟ್ಟಿಮೇಳದ ಆರತಿ, ಬ್ರಹ್ಮಗಂಟು ಧಾರಾವಾಹಿಯ ಸಂಜನಾ ಎರಡು ತದ್ವಿರುದ್ಧ ಪಾತ್ರಗಳಾಗಿದ್ದು, ಎರಡನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ನಟಿ. ಇನ್ನು, ನಟಿ ಆರತಿ ಪಡುಬಿದ್ರಿ ಅವರು ಮೂಲತಃ ಫಿಸಿಯೋಥೆರಪಿಸ್ಟ್ ಆಗಿದ್ದವರು. ಜೊತೆಗೆ ಮಾಡೆಲ್ ಆಗಿ ಱಪ್ ಮೇಲೆ ಹೆಜ್ಜೆ ಹಾಕುವಾಗಲೂ ಆರತಿ ಪಡುಬಿದ್ರಿ ಅವರಿಗೆ ನಟಿಯಾಗಬೇಕು ಎನ್ನುವ ಆಸೆ ಇತ್ತಂತೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹೂಮಳೆ ಧಾರಾವಾಹಿಯಲ್ಲಿ ಆರತಿ ಅವರು ಅಕ್ಕನ ಪಾತ್ರವನ್ನು ಒಪ್ಪಿಕೊಂಡಿದ್ದರು. ಅಂಬಿಕಾ ಎಂಬುವುದು ಪಾತ್ರದ ಹೆಸರಾಗಿತ್ತು. ಬ್ರಹ್ಮಗಂಟು ಸೀರಿಯಲ್ ಮೂಲಕ ಸಖತ್ ಫೇಮಸ್ ಆಗುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ